Author: admin
ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ Advertisement ಬಂಟ್ವಾಳ: ಸಜೀಪಮೂಡ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಶನಿವಾರ ಶಾಲೆಯ ಜ್ಞಾನಜ್ಯೋತಿ ರಂಗ ಮಂದಿರದಲ್ಲಿ ನಡೆಯಿತು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು ಹಾಗೂ ನಳಿನಾಕ್ಷಿ ಭಾಗವಹಿಸಿದ್ದರು. ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಆಲಿಸ್ ಪಾಸ್ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಯರಾದ ಸಮೀಕ್ಷ ನಿರೂಪಿಸಿ, ಶಿವಾನಿ ವಂದಿಸಿದರು. ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ Advertisement Advertisement
ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ: ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಬಂಟ್ವಾಳ: ಕಲ್ಲಡ್ಕ, ಬಿ.ಸಿ ರೋಡ್ , ಮಾಣಿಯಲ್ಲಿ ಮಳಿಗೆಗಳನ್ನು ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಇರಲಿದೆ ಎಂದು ಮಾಲೀಕರಾದ ಗಿರೀಶ್ ನೆಟ್ಲ ತಿಳಿಸಿದ್ದಾರೆ.ಈ ಸಂದರ್ಭ ವಿಶೇಷ ಆಫರ್ ಗಳಿವೆ. ಖರೀದಿಗೆ ಗಿಫ್ಟ್ ಗ್ಯಾರಂಟಿ. ಮಹಿಳೆಯರಿಗೆ JACKPOT ಗೆಲ್ಲುವ ಅವಕಾಶ. ಶಾಪಿಂಗ್ ಮಾಡಿ ಒಂದು ಟೂರ್ ಪ್ಯಾಕೇಜ್ ಅನ್ನೇ ಪಡೆಯಬಹುದು. ಸ್ಪಾಟ್ ನಲ್ಲೇ ಇ.ಎಂ.ಐ. ಸಾಲ ಸೌಲಭ್ಯವೂ ದೊರಕುತ್ತದೆ. ಅಲ್ಲದೆ, ಆಕರ್ಷಕ ಉಡುಗೊರೆಗಳು ಸಿದ್ಧವಾಗಿದೆ. ENTER & WIN ಎಂಬ ಆಫರ್ ಇದ್ದು, ಇಲ್ಲಿ ನೀವು ಶಾಪ್ ಮಾಡದೆಯೇ ಬೋನಸ್ ಪಡೆಯುವ ಅವಕಾಶವಿದೆ. ಮಳಿಗೆಗಳಿಗೆ ಭೇಟಿ ನೀಡಿ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಿರೀಶ್ ನೆಟ್ಲ ತಿಳಿಸಿದ್ದಾರೆ. ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ,…
ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ವತಿಯಿಂದ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ ಕಾರ್ಯಕ್ರಮ Advertisement ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಬಂಟ್ವಾಳ ಇದರ ಆಶ್ರಯದಲ್ಲಿ ಭಾನುವಾರ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ 2023 ಕಾರ್ಯಕ್ರಮ ನರಿಕೊಂಬುವಿನಲ್ಲಿ ನಡೆಯಿತು. Advertisement ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ವತಿಯಿಂದ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ ಕಾರ್ಯಕ್ರಮ ಕಾರ್ಯಕ್ರಮವನ್ನು ಪುರೋಹಿತರಾದ ಕೇಶವ ಶಾಂತಿ ಹಾಗೂ ವೆಂಕಟೇಶ್ ಶಾಂತಿ ಉದ್ಘಾಟಿಸಿದರು. ಈ ಸಂದರ್ಭ ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ. ರಮಾನಾಥ ರೈ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಪೂಜಾರಿ ಸಹಿತ ವಿವಿಧ ಬಿಲ್ಲವ ಸಂಘಟನೆಗಳ ಅಧ್ಯಕ್ಷರು, ಉದ್ಯಮಿಗಳು, ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಂಗವಾಗಿ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಿತು. Advertisement
ಬಿ.ಸಿ.ರೋಡಿನಲ್ಲಿ ನ್ಯೂ ಚೆನ್ನೈ ಶಾಪಿಂಗ್‌ನಿಂದ ವಸ್ತ್ರಗಳ ಮಾರಾಟ ಮೇಳ ಆರಂಭ Advertisement ಬಂಟ್ವಾಳ: ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯ ವತಿಯಿಂದ ವೈವಿಧ್ಯಮಯ ಹಾಗೂ ಆಕರ್ಷಕ ಶೈಲಿಯ ವಸ್ತ್ರಗಳ ಮಾರಾಟ ಮೇಳ ಸೋಮವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆರಂಭಗೊಂಡಿದ್ದು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. Advertisement Advertisement ಬಿ.ಸಿ.ರೋಡು ಪರಿಸರದಲ್ಲಿ ನ್ಯೂ ಚೆನ್ನೈ ಶಾಂಪಿಂಗ್ ಸಂಸ್ಥೆಯ ವತಿಯಿಂದ ಮೂರನೇ ಬಾರಿಗೆ ಬೃಹತ್ ಬಟ್ಟೆಗಳ ಮಾರಾಟ ಮೇಳ ಆರಂಭಗೊಂಡಿದ್ದು ಗ್ರಾಹಕರು ಖರೀದಿಸುವ ಪ್ರತಿಯೊಂದು ಬಟ್ಟೆಯ ಬೆಲೆ ಕೇವಲ 199 ಆಗಿದ್ದು ಗುಣಮಟ್ಟದ ಹಾಗೂ ಎಲ್ಲಾ ವಯೋಮಾನದ ಜನರಿಗೆ ಬೇಕಾಗುವ ಬಟ್ಟೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಕಾರಣ ಗ್ರಾಹಕರು ಬಟ್ಟೆಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.ಎಲ್ಲಾ ಬಗೆಯ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಫ್ಲಾಝಾ ಫ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆರ್‍ಕಿನ್, ಬಾಬಾಸೂಟ್, ಚಪ್ಪಲಿಗಳು, ಬ್ಯಾಗ್‌ಗಳು ಇಲ್ಲಿ ಮಾರಾಟಕ್ಕಿವೆ. ಆ.7 ರಂದು ಆರಂಭಗೊಂಡಿರುವ…
Advertisement ಜೆಸಿಐ ಬಂಟ್ವಾಳದ ಜೂನಿಯರ್ ಜೇಸಿ ವಿಭಾಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಬಂಟ್ವಾಳ: ಜೆಸಿಐ ಬಂಟ್ವಾಳ ಇದರ ಜೂನಿಯರ್ ಜೇಸಿ ವಿಭಾಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇಲ್ಲಿ ನಡೆಯಿತು.ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಮಾತನಾಡಿ ಯುವ ಸಮುದಾಯವನ್ನು ಸಶಕ್ತಗೊಳಿಸಿ ಉತ್ತಮ ನಾಗರಿಕ ಸಮುದಾಯವನ್ನು ನಿರ್ಮಿಸುವ ಉದ್ದೇಶದಿಂದ ಜೆಸಿಐ ಬಂಟ್ವಾಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಭಾ ನಿರ್ವಹಣೆ, ಮಾನವೀಯ ಸಂಬಂಧ, ಜೀವನ ಮೌಲ್ಯಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. Advertisement ಕಾಲೇಜಿನ ಪ್ರಾಂಶುಪಾಲ ಯುಸೂಫ್ ವಿಟ್ಲ ತರಬೇತಿ ಕಾರ್ಯಗಾರಕ್ಕೆ ಶುಭ ಕೋರಿದರು. ಜೆಜೆಸಿ ಅಧ್ಯಕ್ಷ ಜಯರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯ ತರಬೇತುದಾರರಾದ ಸ್ವಾತಿ ಜಗನ್ನಾಥ ರೈ ತರಬೇತಿ ನೀಡಿದರು. Advertisement ಅಬ್ದುಲ್ ರಝಾಕ್ ಸ್ವಾಗತಿಸಿದರು, ಪೂರ್ವಾಧ್ಯಕ್ಷ ಸದಾನಂದ ಬಂಗೇರ ವಂದಿಸಿದರು, ಕಾರ್ಯದರ್ಶಿ ರಶ್ಮಿ ಶೆಟ್ಟಿ ತರಬೇತುದಾರರನ್ನು ಪರಿಚಯಿಸಿದರು.
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬ; ಮಾಣಿಲ ಕ್ಷೇತ್ರಕ್ಕೆ ಹಸಿರು ಹೊರಕಾಣಿಕೆ ಸಮರ್ಪಣೆ ಬಂಟ್ವಾಳ: ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬದ ಪ್ರಯುಕ್ತ ಬಂಟ್ವಾಳ ಬೆಳ್ಳಿ ಹಬ್ಬ ಮಹೋತ್ಸವ ಸಮಿತಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಸಂಜೆ ನಡೆಯಿತು. Advertisement ಬೆಳ್ಳಿಹಬ್ಬ ಮಹೋತ್ಸವ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಹೊರೆಕಾಣಿಕೆ ಮರವಣಿಗೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ, ಕೇಂದ್ರ ಸಮಿತಿ ಕಾರ್ಯಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ತಾಲೂಕು ಸಮಿತಿ ಕಾರ್ಯಧ್ಯಕ್ಷ ಸುಧಾಕರ ಸಾಲ್ಯಾನ್, ತಾಲೂಕು ಸಮಿತಿ ಕಾರ್ಯದರ್ಶಿ ನಾರಾಯಣ ಸಿ. ಪೆರ್ನೆ, ಜಿಲ್ಲಾ. ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ಸಮಾಜ ಸೇವಾ ಸಹಕಾರಿ…
Advertisement ತುಂಬೆ ಆಶೀರ್ವಾದ್ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ, ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿಸಿದ ಗ್ರಾಮಸ್ಥರು ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸೇವಾ ಸಂಘ ತುಂಬೆ ಇದರ ಆಶ್ರಯದಲ್ಲಿ ಮುದಲ್ಮೆಯಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ಭಾನುವಾರ ವಿಜ್ರಂಭನೆಯಿಂದ ನಡೆಯಿತು.ಸಂಘದ ಕಚೇರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯ ಡಾ. ಕಿರಣ್ ಶೆಟ್ಟಿ ಉದ್ಘಾಟಿಸಿದರು. ಭಾರತ ಮಾತಾ ಪೂಜನಾ ಕಾರ್ಯಕ್ರಮ ನೆರವೇರಿಸಲಾಯಿತು. Advertisement ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿ ಊರಿನ ಎಲ್ಲರನ್ನು ಸೇರಿಸಿಕೊಂಡು ಮಾಡುವ ಈ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಉಳಿದು ಬರಲಿದೆ ಎಂದರು. ಹಿಂದೆ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಕೃಷಿ ಕಾರ್ಯ ನಡೆಸಿ ವಿಶ್ರಾಂತಿ ಪಡೆಯುವ ತಿಂಗಳಾಗಿದ್ದು ತುಂಬಾ ಕಷ್ಟದ ದಿನಗಳನ್ನು ನಮ್ಮ ಹಿರಿಯರು ಅನುಭವಿಸುತ್ತಿದ್ದರು. ಪ್ರಕೃತಿಯಲ್ಲಿಯೇ ಸಿಗುತ್ತಿದ್ದ ಸೊಪ್ಪು ಮೂಲಿಕೆಗಳನ್ನು ತಿಂದು ಬದುಕುತ್ತಿದ್ದರು ಇಂದು…
ಭಾಗ್ಯೋದಯ ಮಿತ್ರ ಕಲಾವೃಂದ ಅಧ್ಯಕ್ಷರಾಗಿ ಸೋಮಶೇಖರ ಪರ್ಲಕ್ಕೆ ಆಯ್ಕೆ Advertisement ಬಂಟ್ವಾಳ: ಭಾಗ್ಯೋದಯ ಮಿತ್ರ ಕಲಾವೃಂದ ತುಂಬೆ ಹನುಮನಗರ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಸೋಮಶೇಖರ ಪರ್ಲಕ್ಕೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಗೌರೀಶ್ ಕುಲಾಲ್ ತುಂಬೆ, ಕೋಶಾಧಿಕಾರಿಯಾಗಿ ರಾಜೇಶ್ ಪರ್ಲಕ್ಕೆ, ಉಪಾಧ್ಯಕ್ಷರಾಗಿ ಮನೋಹರ ಪರ್ಲಕ್ಕೆ, ಸತೀಶ್ ಕೋಡ್ಯಡ್ಕ, ಜತೆಕಾರ್ಯದರ್ಶಿಯಾಗಿ ಮಿಥುನ್ ದರ್ಖಾಸು, ಯುವರಾಜ್ ಹಳೇನೀರು, ಕ್ರೀಡಾಕಾರ್ಯದರ್ಶಿಯಾಗಿ ಜೀವಿತ್ ಹಳೇನೀರು, ಮನೀಶ್ ಪರ್ಲಕ್ಕೆ, ಸಂಘಟನಾ ಕಾರ್ಯದರ್ಶಿಯಾಗಿ ಜೀವನ್ ಹಳೇನೀರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತೀನ್ ತುಂಬೆ, ಸುಧೀರ್ ಮುಳಿಕmಡ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪುನೀತ್ ತುಂಬೆ, ಹರ್ಷಿತ್ ತುಂಬೆ ಆಯ್ಕೆಯಾದರು Advertisement Advertisement
ಫರಂಗಿಪೇಟೆ ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಆಹಾರ-ದವಸಧಾನ್ಯ ವಿತರಣಾ ಕಾರ್ಯಕ್ರಮ ಬಂಟ್ವಾಳ: ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ದವಸಧಾನ್ಯ ವಿತರಣಾ ಕಾರ್ಯಕ್ರಮ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. Advertisement ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಕಾರ್ಯಕ್ರಮದಂಗವಾಗಿ ಪ್ರಧಾನಮಂತ್ರಿಯವರ ಕರೆಯಂತೆ ನಿಕ್ಷಯ ಮಿತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ವೈದ್ಯರು, ಸಮಾಜಸೇವಾ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಹುಟ್ಟುವಾಗ ಯಾರಿಗೂ ರೋಗಗಳಿರುವುದಿಲ್ಲ. ಬಳಿಕ ನಮ್ನ ಆಹಾರ, ಪರಿಸರದಲ್ಲಿನ ಅಸ್ವಚ್ಚತೆಯಿಂದಾಗಿ ರೋಗಕ್ಕೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಉತ್ತಮ ಆಹಾರ ಪದ್ದತಿ, ಸರಿಯಾದ ಔಷಧಿ ಸೇವನೆ, ಒತ್ತಡಗಳನ್ನು ನಿವಾರಿಸಿ ಮನಸ್ಸನ್ನು ಕೇಂದ್ರೀಕರಿಸಿದರೆ ನಮ್ಮ ಆರೋಗ್ಯ ಉತ್ತಮವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಠಿಕ ಆಹಾರವನ್ನು ಸದ್ಬಳಕೆ ಮಾಡಿಕೊಂಡಾಗ ರೋಗ ನಿವಾರಿಸಿಕೊಂಡು ಸಮಾಜದಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.ಸೇವಾಂಜಲಿ…
Advertisement ಪರಬೇರ್ ಪೊಸ ತೆಗ್‌ಲ್’ ಜಿಲ್ಲಾ ಮಟ್ಟದ ಪೋಟೊ ಸ್ಪರ್ಧೆ ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಸೆ. 3ರಂದು ಆದಿತ್ಯವಾರ ಮರಿಯಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ಈ ಪ್ರಯುಕ್ತ ಪರಬೇರ್ ಪೊಸ ತೆಗ್‌ಲ್ ಎನ್ನುವ ಜಿಲ್ಲಾ ಮಟ್ಟದ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ವಜಾತಿ ಸಮಾಜ ಬಾಂಧವರು ವೃದ್ದರೊಂದಿಗೆ ತೆಗೆದ ಪೊಟೋಗಳನ್ನು ಆ. 27ರಂದು ಸಂಜೆ 4 ಗಂಟೆಯ ಒಳಗಾಗಿ ಕಳಹಿಸತಕ್ಕದ್ದು. Advertisement ಹಳ್ಳಿ ಸೊಗಡಿನ, ಮಳೆಗಾಲದ ನಮ್ಮ ಹಿರಿಯರ ಜೀವನ ಶೈಲಿಯ ಮಾದರಿ ಪೋಟೋಗಳಿರಬೇಕು. ಒಬ್ಬ ಸ್ಪರ್ಧಿಗೆ ಒಂದು ಪೊಟೋ ಮಾತ್ರ ಕಳುಹಿಸಲು ಅವಕಾಶವಿದ್ದು, 9964280079 ದೂರವಾಣಿಯ ವಾಟ್ಸಪ್‌ಗೆ ಕಳುಹಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತೀಮ ತೀರ್ಮಾನವಾಗಿದ್ದು ವಿಜೇತರಿಗೆ ಸೆ. 3 ರಂದು ನಡೆಯುವ ಮರಿಯಾಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ (…








