ಕರ್ನಾಟಕ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ರಾಷ್ಟ್ರ ಪ್ರೇಮ ಮೂಡಬೇಕು, ರಾಷ್ಟಿಯತೆ ಜಾಗೃತಿ ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಳೆಯ ವಯಸ್ಸಿನ ಮಕ್ಕಳಿಂದಲೇ ಇದು ಪ್ರೇರಣೆ ಗೊಳ್ಳಬೇಕು ಎಂಬುದಾಗಿ ಮನಗಂಡ ಬಿಜೆಪಿ ಸರಕಾರವು ರಾಷ್ಟ್ರ ಭಕ್ತರಾದ ವೀರ ಸಾವರ್ಕರ್ ಕುರಿತು ಚಕ್ರವರ್ತಿ ಸೂಲಿಬೆಲೆ ರಚಿಸಿದ ಪಾಠ ರಾಜಗುರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡಗೇವಾರ್ ಭಾಷಣದ ತುಣುಕಾದ “ಆದರ್ಶ ಪುರುಷ ಯಾರಾಗಬೇಕು ಸುಖ್ ದೇವ್, ಭಗತ್ ಸಿಂಗ್ ಕುರಿತಾದ ತಾಯಿ ಭಾರತೀಯರ ಅಮರ ಪುತ್ರರು ಮತ್ತು ಶತಾವಧಾನಿ ಗಣೇಶ್ ರವರ ಯಜ್ಞಯುಗಾದಿ
ಇಂತದೆಲ್ಲ ಭಾರತೀಯ ಪರಂಪರೆ ಯನ್ನು ರಾಜ್ಯದ ಜನರಿಗೆ ಪುನರಪಿ ತಿಳಿಯ ಪಡಿಸುವ ಬಹುಜನಪಯೋಗಿ ಅಭಿವ್ಯಕ್ತಿತ್ವದ ಪಾಠಗಳನ್ನು ಕೈ ಬಿಡುವ ನಿರ್ಧಾರ ಮಾಡಿರುವುದು ರಾಷ್ಟ್ರ ದ್ರೋಹ ವಲ್ಲದೇ ಬಹು ಸಂಖ್ಯಾತ ಹಿಂದುಗಳ ಮನೋ ಭಾವನೆಗಳಿಗೆ ದಕ್ಕೆ ತರುವ ಕೆಲಸವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ರವರು ಪತ್ರಿಕಾ ಹೇಳಿಕೆ ಮೂಲಕ ಕರ್ನಾಟಕ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.
ಇದೊಂದು ದ್ವೇಷದ ರಾಜಕೀಯ ಕಾರ್ಯಕ್ರಮವಾಗಿದ್ದು ಕರ್ನಾಟಕದ ಜನತೆ ಮೆಚ್ಚುವುದಿಲ್ಲ.
ಅಧಿಕಾರ ಶಾಶ್ವತ ಅಲ್ಲ ಆದ್ರೆ ಆಯಾ ಸರಕಾರಗಳು ಕೈ ಗೊಳ್ಳುವ ನಿರ್ಧಾರಗಳು ಶಾಶ್ವತವಾಗುತ್ತವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಐತಿಹಾಸಿಕವಾಗಿ ಜನವಿರೋಧಿ ಕೆಟ್ಟದಾಗಿ ನಡೆದುಕೊಂಡಿದೆ.ಹೀಗೆ ಅಧರ್ಮದ ದಾರಿಯಲ್ಲಿ ನಡೆದರೆ ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಅವನತಿಯತ್ತ ಸಾಗಲಿದೆ.
ಕೇವಲ ಕೆಲವೇ ಕೆಲವು ಜನರನ್ನು ಖುಷಿ ಪಡುವುದಗೋಸ್ಕೊರ ನೆಹರು ಬಗ್ಗೆಗಿನ ಇತಿಹಾಸ ನೆಹರು ರವರು ಮಗಳಿಗೆ ಬರೆದ ಪತ್ರ ಹಾಗೂ ಟಿಪ್ಪುವಿನ ವೈಭವಿಕರಣ, ಹೈದರಾಲಿ ಬಗ್ಗೆ ವ್ಯಾಖ್ಯಾನ ಇತ್ಯಾದಿ ಎಡ ಪಂಥಿಯ ಮನಸ್ಥಿತಿಯ ಸಾಹಿತಿಗಳ ಅನಗತ್ಯ ವಿಷಯ ಗಳನ್ನು ಪಠ್ಯ ಪುಸ್ತಕ ದಲ್ಲಿ ಸೇರಿಸಿ ಜನರನ್ನು ಗೊಂದಲದಲ್ಲಿ ಸಿಲುಕಿಸುವ ಹುನ್ನಾರ ಮಾಡುವುದನ್ನು ನೋಡಿದರೆ
ಈ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ರಾಷ್ಟ್ರಿಯತೆಯಲ್ಲದೇ ಜಾತ್ಯತೀತ ಲಕ್ಷಣವೂ ಇಲ್ಲದಂತೆ ಕಂಡುಬರುತ್ತಿದೆ.
ಇನ್ನಾದರೂ ಕರ್ನಾಟಕದ ಸಮಸ್ತ ಜನತೆ ಎಚ್ಚೆತ್ತುಕೊಂಡು ಯಾವುದೇ ಆಶೆ ಆಮಿಷ ಗಳಿಗೆ ಬಲಿಯಾಗದೆ ರಾಷ್ಟ್ರಿಯ ಚಿಂತನೆಗೆ, ರಾಷ್ಟ್ರ ಪ್ರೇಮದ ವಿಚಾರ ಧಾರೆಗಳತ್ತ ಗಮನ ಹರಿಸಬೇಕು ಎಂದು ಪ್ರಭಾಕರ ಪ್ರಭು ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರಲ್ಲಿ ಪತ್ರಿಕಾ ಹೇಳಿಕೆ ಮೂಲಾಕ ಮನವಿ ಮಾಡಿದ್ದಾರೆ.