ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಬಿ. ವೋಕ್ ವಿಭಾಗದ ಆಶ್ರಯದಲ್ಲಿ ರಾಜ್ಯ ಮಟ್ಟದ ಎಜು ಕಲ್ಚರಲ್ ಫೆಸ್ಟ್ ಬಿ. ವೋಕ್ ಉತ್ಸವ ಜೂನ್ 22 ಹಾಗೂ 23 ರಂದು ಉಜಿರೆಯಲ್ಲಿ ನಡೆಯಲಿದೆ.
ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದ್ದು, ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.
ಮಾರ್ಕೆಟಿಂಗ್, ಸ್ಟಾರ್ಟ್ಅಪ್ ಪಿಚ್, ಬೆಸ್ಟ್ ಸಿ.ಇ.ಓ, ಮೂವಿ ಕ್ವಿಜ್, ಮೂವಿ ಸ್ಪೂಫ್, ಮೂವಿ ಆಕ್ಷನ್, ಮೋಟರ್ ಮೌತ್, ಬಗ್ ಎಪಿಕ್ಸ್, ಟೆಕ್ ಇಟ್ ಔಟ್, ಫ್ಯಾಶನ್ ಶೋ, ಬಿಜಿಎಂಐ ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿವೆ. ಅದಲ್ಲದೇ, ಬಿ. ವೋಕ್ ಉತ್ಸವದ ಅಂಗವಾಗಿ ರಾಜ್ಯಮಟ್ಟದ ಮುಕ್ತ ಕಿರುಚಿತ್ರ ಸ್ಪರ್ಧೆ, ಸಿನಿಮೋತ್ಸವವೂ ನಡೆಯಲಿಕ್ಕಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8310545772 / 8618097459 / 9019872866
Advertisement
Advertisement