
ಬಂಟ್ವಾಳ: ಸಬ್ ರಿಜಿಸ್ಟ್ರಾರ್
ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಉಪನೋಂದಾಣಿ ಕಚೇರಿಯಲ್ಲಿ ಗುರುವಾರ ನಡೆಯಿತು.
ದ.ಕ ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ ಎಸ್. ಕಾವೇರಿ 2.0 ತಂತ್ರಾಂಶ ಉದ್ಘಾಟಿಸಿದರು.
ಬಂಟ್ವಾಳ ಉಪನೋಂದಣಾಧಿಕಾರಿ ಕವಿತಾ ಎ.ಸಿ. ಉಪಸ್ಥಿತರಿದ್ದರು. ಪ್ರಥಮ ನೋಂದಣಿಯನ್ನು ಆಶಿಕ್ ಕುಕ್ಕಾಜೆ ಅವರು ಶೌಕತ್ ಅಲಿ ಅವರಿಗೆ ದಸ್ತಾವೇಜು ನೋಂದಾಯಿಸಿದರು. ಈ ಸಂದರ್ಭ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


