
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಈ ವರ್ಷದಲ್ಲಿ ಸಾಧಿಸಿದ ಅತ್ಯುತ್ತಮ ಸೇವಾ ಕಾರ್ಯಗಳಿಗೆ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಮಂಗಳೂರಿನ ಸೈಂಟ್ ಸೆಬೆಸ್ಟಿಯನ್ ಹಾಲ್ ನಲ್ಲಿ ನಡೆದ ಸಂಪ್ರಾಪ್ತಿ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಚಿತ್ರನಟಿ ನಿರೀಕ್ಷಾ ರೈ ಅವರಿಂದ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಕಟಪೂರ್ವ ಗವರ್ನರ್ ರವೀಂದ್ರ ಭಟ್, ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಕ್ಲಬ್ ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ, ಸದಸ್ಯರಾದ ಮಹಮ್ಮದ್ ವಳವೂರು, ಸಂಜೀವ ಪೂಜಾರಿ, ರಿತೇಶ್ ಬಾಳಿಗ, ವಸಂತ ಪ್ರಭು, ಮುರಳೀಧರ ಪ್ರಭು, ಕರುಣಾಕರ ಶೆಟ್ಟಿ, ಸದಾಶಿವ ಬಾಳಿಗ, ಡಾ. ಆತ್ಮರಂಜನ್ ರೈ, ರಾಮಣ್ಣ ರೈ, ಡಾ. ಪ್ರತಿಭಾ ರೈ, ಮಾಧವ ಶೆಣೈ, ಸ್ಟೀವನ್ ಉಪಸ್ಥಿತರಿದರು.


