ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಜೆಸಿಐ ಬಂಟ್ವಾಳ ಇದರ ಆಶ್ರಯದಲ್ಲಿ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಂಯೋಗದೊಂದಿಗೆ 123 ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ, ರಿಕ್ಷಾ ಚಾಲಕರ ಸಂಘದ ನೀಲನ್ ಡಿಸೋಜ, ಪೊಲೀಸ್ ಸಿಬ್ಬಂದಿ ಪ್ರಮೋದ್, ನೃತ್ಯಗುರು, ವಿದೂಷಿ ಮಂಜುಳಾ ಸುಬ್ರಹ್ಮಣ್ಯ ಸ್ವಯಂ ರಕ್ತದಾನ ಮಾಡುವ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಂಜೀವ ಪೂಜಾರಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ವು ಕಳೆದ 29 ವರ್ಷಗಳಿಂದ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿದ್ದು ಈವರೆಗೆ 123 ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು. ಪ್ರತಿಯೊಬ್ಬ ವ್ಯಕ್ತಿಯ ಮೈಯಲ್ಲಿ ಹರಿಯುವ ರಕ್ತ ಒಂದೇ. ಆದ್ದರಿಂದ ಜಾತಿ ಧರ್ಮದ ಬೇಧವಿಲ್ಲದೆ ಎಲ್ಲರೂ ಈ ರಕ್ತದಾನ ಮಾಡಬೇಕು, ಇದು ದೇವರು ಮೆಚ್ಚುವ ಕೆಲಸ ಎಂದರು.
ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರುತ್ತಿದ್ದು ಈ ಬಾರಿ ಜೆಸಿಐ ಬಂಟ್ವಾಳಕ್ಕೂ ಅವಕಾಶ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಒರ್ವ ವ್ಯಕ್ತಿ ರಕ್ತದಾನ ಮಾಡುವುದರಿಂದ ಆತನಿಗೆ ಮರು ಜೀವ ನೀಡಿದಂತಾಗುವುದರ ಜೊತೆಗೆ ಆತನ ಕುಟುಂಬವೂ ನೆಮ್ಮದಿಯಿಂದ ಇರಲು ಸಾಧ್ಯವಿದೆ ಎಂದರು.
ನಿಕಟಪೂರ್ವಾಧ್ಯಕ್ಷ ರೋಷನ್ ರೈ ಶುಭ ಕೋರಿದರು.
ವೇದಿಕೆಯಲ್ಲಿ ಪುಂಚಮೆ ಪದ್ಮನಾಭ ಶೆಟ್ಟಿ, ಮಂಟಮೆ ಜಯರಾಜ ಕರ್ಕೆರಾ, ಪ್ರಕಾಶ್ ಕಿದೆಬೆಟ್ಟು ಉಪಸ್ಥಿತರಿದ್ದರು.
ಪ್ರಮುಖರಾದ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಜಯರಾಂ ತುಂಬೆ,
ಪದ್ಮನಾಭ ಕಿದೆಬೆಟ್ಟು, ಪುನೀತ್ ಸೇಮಿತ
ದೇವದಾಸ್ ಶೆಟ್ಟಿ , ಅರ್ಜುನ್ ಪೂಂಜ, ಮಹಮದ್ ಅಲ್ತಾಫ್ ಅರ್ಕುಳ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ,
ಸುರೇಶ್ ಕುಚ್ಚೂರು, ಸತ್ಯರಾಜ ಶೆಟ್ಟಿ ಕುಂಜತ್ಕಲ
ದಿನೇಶ್ ಎನ್ ತುಂಬೆ, ಬಾಲಕೃಷ್ಣ ರೈ ದೇವಸ್ಯ,
ಶಿವರಾಜ್ ಸುಜೀರ್, ಪಟಾವು ಡಿ ಸರ್ಫುದ್ದೀನ್, ಸುನೀಲ್ ಫೆರ್ನಾಂಡೀಸ್ ಅಬ್ಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 102 ಯುನಿಟ್ ರಕ್ತ ಸಂಗ್ರಹವಾಯಿತು.