ಬಂಟ್ವಾಳ: ಜೆಸಿಐ ಬಂಟ್ವಾಳ ಇದರ ಜೂನಿಯರ್ ಜೇಸಿ ವಿಭಾಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇಲ್ಲಿ ನಡೆಯಿತು.
ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಮಾತನಾಡಿ ಯುವ ಸಮುದಾಯವನ್ನು ಸಶಕ್ತಗೊಳಿಸಿ ಉತ್ತಮ ನಾಗರಿಕ ಸಮುದಾಯವನ್ನು ನಿರ್ಮಿಸುವ ಉದ್ದೇಶದಿಂದ ಜೆಸಿಐ ಬಂಟ್ವಾಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಭಾ ನಿರ್ವಹಣೆ, ಮಾನವೀಯ ಸಂಬಂಧ, ಜೀವನ ಮೌಲ್ಯಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
Advertisement
ಕಾಲೇಜಿನ ಪ್ರಾಂಶುಪಾಲ ಯುಸೂಫ್ ವಿಟ್ಲ ತರಬೇತಿ ಕಾರ್ಯಗಾರಕ್ಕೆ ಶುಭ ಕೋರಿದರು. ಜೆಜೆಸಿ ಅಧ್ಯಕ್ಷ ಜಯರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯ ತರಬೇತುದಾರರಾದ ಸ್ವಾತಿ ಜಗನ್ನಾಥ ರೈ ತರಬೇತಿ ನೀಡಿದರು.
ಅಬ್ದುಲ್ ರಝಾಕ್ ಸ್ವಾಗತಿಸಿದರು, ಪೂರ್ವಾಧ್ಯಕ್ಷ ಸದಾನಂದ ಬಂಗೇರ ವಂದಿಸಿದರು, ಕಾರ್ಯದರ್ಶಿ ರಶ್ಮಿ ಶೆಟ್ಟಿ ತರಬೇತುದಾರರನ್ನು ಪರಿಚಯಿಸಿದರು.
Advertisement