

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ನಗರ ಸಜೀಪಮೂಡ ಇದರ ಆಶ್ರಯದಲ್ಲಿ ಕಂಪಾನಿಯೋ ಮಂಗಳೂರು ಇವರ ಸಹಯೋಗದೊಂದಿಗೆ ಗುರು ಜಯಂತಿಯ ಪ್ರಯುಕ್ತ ಆ.10 ರಿಂದ ಆ.30ರವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿಗೆ ಸಜೀಪಮೂಡ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಚಾಲನೆ ನೀಡಲಾಯಿತು.



ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ದೀಪ ಪ್ರಜ್ವಲಿಸಿದರು, ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಉಪಾಧ್ಯಕ್ಷ ಮೋಹನದಾಸ್ ಪೂಜಾರಿ ಬೊಳ್ಳಾಯಿ ಲೆಕ್ಕ ಪರಿಶೋಧಕ ರಮೇಶ್ ಅನ್ನಪ್ಪಾಡಿ ಪ್ರಮುಖರಾದ ಶ್ರೀಧರ ಪೂಜಾರಿ, ಜಯಶಂಕರ್ ಕಾಂಸಲೆ ಶೈಲೇಶ್ ಪೂಜಾರಿ , ಲೋಕೇಶ್ ಪೂಜಾರಿ, ಅಶ್ವಿನ್ ಪೂಜಾರಿ ಕಾರಜೆ, ಸತೀಶ್ ಪೂಜಾರಿ ಸೌಜನ್ಯಾ ಹಾಗೂ ಸುನೀತ ಉಪಸ್ಥಿತರಿದ್ದರು.
