ಬಂಟ್ವಾಳ: ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯ ವತಿಯಿಂದ ವೈವಿಧ್ಯಮಯ ಹಾಗೂ ಆಕರ್ಷಕ ಶೈಲಿಯ ವಸ್ತ್ರಗಳ ಮಾರಾಟ ಮೇಳ ಸೋಮವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆರಂಭಗೊಂಡಿದ್ದು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಬಿ.ಸಿ.ರೋಡು ಪರಿಸರದಲ್ಲಿ ನ್ಯೂ ಚೆನ್ನೈ ಶಾಂಪಿಂಗ್ ಸಂಸ್ಥೆಯ ವತಿಯಿಂದ ಮೂರನೇ ಬಾರಿಗೆ ಬೃಹತ್ ಬಟ್ಟೆಗಳ ಮಾರಾಟ ಮೇಳ ಆರಂಭಗೊಂಡಿದ್ದು ಗ್ರಾಹಕರು ಖರೀದಿಸುವ ಪ್ರತಿಯೊಂದು ಬಟ್ಟೆಯ ಬೆಲೆ ಕೇವಲ 199 ಆಗಿದ್ದು ಗುಣಮಟ್ಟದ ಹಾಗೂ ಎಲ್ಲಾ ವಯೋಮಾನದ ಜನರಿಗೆ ಬೇಕಾಗುವ ಬಟ್ಟೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಕಾರಣ ಗ್ರಾಹಕರು ಬಟ್ಟೆಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಎಲ್ಲಾ ಬಗೆಯ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಫ್ಲಾಝಾ ಫ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆರ್ಕಿನ್, ಬಾಬಾಸೂಟ್, ಚಪ್ಪಲಿಗಳು, ಬ್ಯಾಗ್ಗಳು ಇಲ್ಲಿ ಮಾರಾಟಕ್ಕಿವೆ. ಆ.7 ರಂದು ಆರಂಭಗೊಂಡಿರುವ ಈ ಮಾರಟ ಮೇಳ ಸೆ.3ರವರೆಗೆ ನಡೆಯಲಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಸ್ತ್ರ ಖರೀದಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ