Author: admin
ಗಣೇಶ ಕೊಲೆಕಾಡಿಯವರಿಗೆ ಯಕ್ಷಾವಾಸ್ಯಮ್ ಪ್ರಶಸ್ತಿ ಪ್ರದಾನಬಂಟ್ವಾಳ: ಯಕ್ಷಾವಾಸ್ಯಂ ಕಾರಿಂಜ ಇದರ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ.ನ ವಗ್ಗ , ಕಾಡಬೆಟ್ಟು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನ. ೫ರಂದು ನಡೆಯಿತು.ಬೆಳಗ್ಗೆ ಪಚ್ಚಾಜೆಗುತ್ತು ಜಿನರಾಜ ಆರಿಗ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಯಕ್ಷ ಕೂಟ ಮಧ್ವ ಇದರ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ, ಹಿರಿಯ ಯಕ್ಷ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ , ಜನಾರ್ದನ ಭಟ್ ಕಾರಿಂಜ ಆವರು ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಮಕ್ಕಳ ಯಕ್ಷಗಾನ ಗಣಪತಿ ಕೌತುಕ,ಭಾಗವತಿಕೆ ನಡೆಯಿತು.ಬಳಿಕ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಗಣೇಶ ಕೊಲೆಕ್ಕಾಡಿ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಯಕ್ಷಾವಾಸ್ಯಮ್ ಪ್ರಶಸ್ತಿ ಪ್ರದಾನ ನಡೆಸಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಅವರು ಅದ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲೆಯ ಜತೆ ಸಂಸ್ಕೃತಿ ಮತ್ತು ಧರ್ಮವಿದೆ. ಕಲೆಯ ಮೇಲೆ ಅಭಿರುಚಿ ಹೊಂದಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.…
ಬಂಟ್ವಾಳ: ಬಿ.ಸಿ.ರೋಡಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಂಟ್ವಾಳ ನಗರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಬಂಟ್ವಾಳ ಗಿರಿಗುಡ್ಡೆಯ ಸರಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು. ಸ್ಥಳಾಂತರಗೊಂಡ ಹಾಸ್ಟೆಲನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಹಾಸ್ಟೆಲ್ ಪ್ರಸ್ತುತ ಬಾಡಿಗೆ ಕಟ್ಟಡದಿಂದ ವಾಸ್ತವ್ಯ ಯೋಗ್ಯ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಇಲ್ಲಿ ಸುಮಾರು 150 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಕಾಶವಿದೆ. ಮುಂದೆ ಆಟದ ಮೈದಾನ ಸೇರಿದಂತೆ ಅವಕಾಶ ಸಿಕ್ಕಾಗ ಹಾಸ್ಟೆಲ್‌ಗೆ ಬೇಕಾದ ಸೌಲಭ್ಯಗಳನ್ನು ಒದಗಿಸಸಲಾಗುವುದು ಎಂದರು.ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಭಗವಾನ್‌ಪ್ರಸಾದ್, ಪ್ರಮುಖರಾದ ಮೋಹನರಾಜ್ ಜಿ.ಎಸ್, ಭುವನೇಶ್ವರಿ, ಸುಧಾಕರ ಸಿ.ಎಸ್, ಮೋಹನ ಎನ್, ಹಮೀದ್ ಡಿ, ಬಂಟ್ವಾಳ ಹಿಂದುಳಿದ ವರ್ಗಗಳ ಇಲಾಖೆಯ ಸಿಬಂದಿ, ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 13ನೇ ಪುಣಚ ಶಾಖೆ ಭಾನುವಾರ ಪುಣಚ ಪರಿಯಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭ ಗೊಂಡಿತು.ನೂತನ ಶಾಖೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಅವರು ಮಾತನಾಡಿ ದ.ಕ. ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳು ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ತುಲನೆ ಮಾಡಿದರೆ ಇಂದು ಸಹಕಾರಿ ಬ್ಯಾಂಕ್‌ಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ಉದ್ಯಮ ಕ್ಷೇತ್ರ ಪ್ರಗತಿ ಕಂಡಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ, ವ್ಯವಹಾರ ಇದ್ದರೆ ಮಾತ್ರ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತದೆ ಎಂದ ಅವರು ಇಂದು ಸಹಕಾರಿ ಕ್ಷೇತ್ರದಲ್ಲೂ ಸೌಲಭ್ಯಗಳನ್ನು ಕೊಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು. ಮಹಿಳೆಯರಿಂದು ಆರ್ಥಿಕವಾಗಿ ಸಬಲರಾಗುತ್ತಿದ್ದು ಸರಕಾರದ ಗೃಹಲಕ್ಷಿ ಯೋಜನೆಯ ಮೂಲಕ 2 ಸಾವಿರ ಹಣವನ್ನು ಪಡೆಯುತ್ತಿದ್ದಾರೆ. ಅವುಗಳನ್ನು ಸಹಕಾರಿ ಸಂಘಗಳ ಮೂಲಕ ಉಳಿತಾಯ ಮಾಡುವುದರಿಂದ ತಾವು ಸಬಲರಾಗುವುದರ ಜೊತೆಗೆ ಸಹಕಾರಿ ಸಂಘಗಳ ಅಭ್ಯುದಯವೂ ಆಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ…
ಬಂಟ್ವಾಳ: ಬಸ್ತಿಪಡ್ಪುವಿನ ಭದ್ರಾ ಹೋಂ ಅಪ್ಲೈನ್ಸಸ್ ನ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಳಿಗೆಯಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು.ಸಂಸ್ಥೆಯ ಹಿತೈಷಿ ಸ್ವಪ್ನಾ ಹರೀಶ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಹಿರಿಯರಾದ ಆಶಾಲತಾಬಾಯಿ, ಭದ್ರಾ ಹೋಂ ಅಪ್ಲೈನ್ಸಸ್ ಮಾಲಕಿ ಮೇಘಾ ಆಚಾರ್ಯ, ಗ್ರಾಹಕರಾದ ಭವ್ಯ ಪವನ್ ರಾವ್, ಗಾಯತ್ರಿ ಭಟ್ ಈ ಸಂದರ್ಭ ಉಪಸ್ಥಿತರಿದ್ದರು. ನವೆಂಬರ್ 4ರಿಂದ 15ರವರೆಗೆ ದೀಪಾವಳಿ ಮತ್ತು 3ನೇ ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ಒಳಗೊಂಡ ಈ ವರ್ಷದ ಅತಿ ದೊಡ್ಡ ಸೇಲ್ ಇದಾಗಿದೆ ಎಂದು ಕಾರ್ಯಕ್ರಮ ನಿರ್ವಹಿಸಿದ ಭದ್ರಾ ಸಮೂಹ ಸಂಸ್ಥೆಗಳ ಮಾಲೀಕರಾದ ಮಂಜುನಾಥ ಆಚಾರ್ಯ ಈ ಸಂದರ್ಭ ತಿಳಿಸಿದರು. ಭದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥರೂ ಹಿರಿಯರೂ ಆಗಿರುವ ವರದ ಆಚಾರ್ಯ, ಆಶಾಲತಾಬಾಯಿ ದಂಪತಿ ಈ ಸಂದರ್ಭ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಸಂದರ್ಭ ಮೊದಲ ಗ್ರಾಹಕರಿಗೆ ಆಕರ್ಷಕ ಉಡುಗೊರೆ ವಿತರಿಸಲಾಯಿತು. ವಿವಿಧ ಬ್ರಾಂಡ್ ಗಳ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಉತ್ಪನ್ನಗಳ ವಿಶೇಷ ಪ್ರದರ್ಶನ…
ಬಂಟ್ವಾಳ: ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಕೂಡ ಆರೋಗ್ಯ ಕುರಿತು ವಿಶೇಷ ಕಾಳಜಿ ವಹಿಸುವುದು ಅತಿ ಅಗತ್ಯವಾಗಿದ್ದು, ಕ್ಷಯರೋಗಿಗಳು ಯಾವುದೇ ರೀತಿಯಲ್ಲಿ ಮಾನಸಿಕವಾಗಿ ಕುಗ್ಗದೆ ಸಮರ್ಪಕ ಔಷಧ, ಪೌಷ್ಟಿಕ ಆಹಾರ ಸೇವನೆಯಿಂದ ಗುಣಮುಖರಾಗಲು ಸಾಧ್ಯ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಎಚ್.ಆರ್.ಹೇಳಿದರು.ಅವರು ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಗಳಿಗೆ ಆಹಾರ-ಧವಸ ಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರದ ಯೋಜನೆಗೆ ಬೆಂಬಲ ಸೂಚಿಸಿ ಸೇವಾಂಜಲಿ ಪ್ರತಿಷ್ಠಾನವು ಉತ್ತಮ ಕಾರ್ಯ ಮಾಡುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರು. ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಜೀವನದಲ್ಲಿ ಆರೋಗ್ಯ ಅತಿ ಅಗತ್ಯವಾಗಿದ್ದು, ಶುದ್ಧ ನೀರು, ಗಾಳಿ, ಆಹಾರ ಸೇವನೆಯಿಂದ ನಮ್ಮ ಜೀವನ ಸುಂದರವಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ತಕ್ಷಣ ವೈದ್ಯರನ್ನು ಕಂಡು ಕಾಳಜಿ ವಹಿಸಿದಾಗ ಆರೋಗ್ಯ ಸುಧಾರಿಸುತ್ತದೆ. ಕ್ಷಯ ರೋಗಿಗಳ ಕಾಳಜಿಯಿಂದ ಆಹಾರ ವಿತರಿಸುವ ಸೇವಾಂಜಲಿ…
ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವು ಜೀರ್ಣೋದ್ಧಾರ ಹಂತದಲ್ಲಿದ್ದು, ಶ್ರೀ ಮಹಾಲಿಂಗೇಶ್ವರನ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರಯವ ನೂತನ ಧ್ವಜ ಸ್ತಂಭದ ತೈಲಾಧಿವಾಸ ಕಾರ್ಯಕ್ರಮವು ಜರುಗಿತು.ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಧ್ವಜ ಸ್ತಂಭದ ಪ್ರತಿಷ್ಠಾಪನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ, ಉದ್ಯಮಿಗಳಾದ ರಘುನಾಥ ಸೋಮಾಯಾಜಿ, ಪ್ರಶಾಂತ್ ಸನಿಲ್, ಬಂಟ್ವಾಳದ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಂಟ್ವಾಳ ಬಿಲ್ಲವರ ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ.ಪಂ. ಮಾಝಿ ಸದಸ್ಯ ರವೀಂದ್ರ ಕಂಬಳಿ ಮತ್ತಿತತರರು ಉಪಸ್ಥಿತರಿದ್ದರು.
ಬಂಟ್ವಾಳ: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸಿಟ್ಯೂಷನ್ ಪ್ರವರ್ತಿತ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಉದ್ಘಾಟನಾ ಸಮಾರಂಭ ತುಂಬೆಯಲ್ಲಿ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸಿಟ್ಯೂಷನ್‌ನ ಅಧ್ಯಕ್ಷ ರೆ.ಫಾ. ಡಾ. ಪೀಟರ್ ಪೌಲ್ ಸಲ್ದಾನ ನೂತನ ನರ್ಸಿಂಗ್ ಕಾಲೇಜನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮದ ಸಭಾದ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ವೈದ್ಯರೊಂದಿಗೆ ನರ್ಸ್‌ಗಳು ಕೂಡ ರೋಗಿಗಳಿಗೆ ಉತ್ತಮ ಸೇವೆ, ಆರೈಕೆ ನೀಡಿದಾಗ ಸಂಸ್ಥೆ ಬೆಳೆಯಲು ಸಾಧ್ಯವಿದೆ. ನಮ್ಮ ಬಾಹ್ಯ ಸೌಂದರ್ಯಕ್ಕಿಂತ ರೋಗಿಯ ಸೇವೆ ಮಾಡುವಂತ ಆಂತರ್ಯದ ಸೌಂದರ್ಯ ನಮ್ಮನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಇಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಇದನ್ನು ಮನಗಂಡು ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳುವಂತೆ ಶುಭ ಹಾರೈಸಿದರು. ಮುಖ್ಯ ಅತಿಥಿ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಶಿಲಾಫಲಕ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಫಾದರ್ ಮುಲ್ಲರ್ ಆಸ್ಪತ್ರೆ ಉದ್ಘಾಟನೆಗೊಂಡಿರುವುದು ಕೇವಲ ಸಂಸ್ಥೆಗೆ ಮಾತ್ರವಲ್ಲ ಇಡೀ ತುಂಬೆ ಗ್ರಾಮಕ್ಕೆ ಕೀರ್ತಿ…
ಬಂಟ್ವಾಳ: ಅಮಿತ್ ಎಸ್. ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಧ್ಯಾನ ಮತ್ತು ಯೋಗ ಮಂದಿರಪೆರ್ವಾಜೆ ಕಾರ್ಕಳ ಇಲ್ಲಿ ಪ್ರತಿ ಷ್ಠಾಪಿಸಲ್ಪಟ್ಟ ಶ್ರೀ ವಾಲ್ಮೀಕಿ ವಿಗ್ರಹಕ್ಕೆ ವಾಲ್ಮೀಕಿ ಜಯಂತಿ ಯ ಪ್ರಯುಕ್ತ ನಡೆದ ವಿಶೇಷ ಪೂಜೆಯ ಸಂದರ್ಭದಲ್ಲಿ ಕುಕ್ಕೆಶ್ರೀ ಕಲಾಕುಠೀರದ ಮಾಲಕ, ಫೈಬರ್ ಆರ್ಟ್ ಕಲಾವಿದ ಮನೋಜ್ ಕನಪಾಡಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಶ್ರೀನಿವಾಸ್ ಜಿ. ಕೆ. ಪೈ ಮತ್ತು ಟ್ರಸ್ಟ್ ನ ಪ್ರಮುಖರು ಹಾಜರಿದ್ದರು.
ಮೂಡಬಿದಿರೆ; ಡಾ.ಮೋಹನ ಆಳ್ವ ಅವರ ತೀರ್ಥರೂಪ ಶತಾಯುಷಿ ಆನಂದ ಆಳ್ವ ನಿಧನಮೂಡುಬಿದಿರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂ. ಮೋಹನ ಆಳ್ವ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ(106) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಕಂಬಳ ಯಜಮಾನರಾಗಿದ್ದು ಮಿಜಾರಿನಲ್ಲಿ ಕಂಬಳ ಆಯೋಜಿಸಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರಿಂದ ಉದ್ಘಾಟಿಸಿದ್ದರು. ಪ್ರಗತಿಪರ ಕ್ರಷಿಕರಾಗಿದ್ದು ಭತ್ತ, ಅಡಿಕೆ, ತೆಂಗು, ಕೊಕ್ಕೊ ಬೆಳೆಸುತ್ತಿದ್ದರು. ಹೈನುಗಾರಿಕೆಯಲ್ಲು ತೊಡಗಿಸಿಕೊಂಡಿದ್ದರು. ಪುತ್ರ ಡಾ. ಎಂ ಮೋಹನ ಆಳ್ವ ಅವರ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ತಂದೆ ಬೆಂಬಲವಾಗಿದ್ದರು. ಡಾ.ಎಂ. ಮೋಹನ ಆಳ್ವ ಸಹಿತ ಮೂವರು ಪುತ್ರರು ಓರ್ವ ಪುತ್ರಿ ಇದ್ದಾರೆ
ಮುಂಬಯಿ: ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ರಂಗಭೂಮಿ ಪ್ರಯೋಗಗಳ ತಪಾಸಣಾ (ಸೇನ್ಸರ್) ಮಂಡಳಿ ಸದಸ್ಯರನ್ನಾಗಿ ಕಳೆದ ಅನೇಕ ವರ್ಷಗಳಿಂದ ಕನ್ನಡ ಮತ್ತು ತುಳು ಭಾಷಾ ಪರಾಮರ್ಶಕರಾಗಿದ್ದ ರಂಗ ಎಸ್.ಪೂಜಾರಿ ಮತ್ತು ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರನ್ನು ನೇಮಗೊಳಿಸಿದೆ. ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ನಾಟಕಗಳು, ಏಕಾಂಕ ನಾಟಕಗಳು ಮತ್ತು ವಿವಿಧ ಮನರಂಜನೆಗಳ ಸಂಹಿತೆಯನ್ನು ಪೂರ್ವವೀಕ್ಷಿಸಲು ಭಾಷಾತಜ್ಞತರ ನೇಮಕ ನಡೆಸಿ ಮಂಡಳಿ ತನ್ನ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರದಂತೆ ರಾಜ್ಯದ ಮರಾಠಿ ಮತ್ತು ಹಿಂದಿ ಹೊರತುಪಡಿಸಿ ಇತರ ಭಾಷೆಗಳ ಲ್ಲಿ ಸ್ವೀಕರಿಸಿದ ಮನರಂಜನಾ ಪ್ರಯೋಗಗಳ ಸಂಹಿತೆಯನ್ನು ಪರಿಶೀಲಿಸಲು ಇನ್ನಿತರ ಭಾಷೆಗಳಿಗೆ ಭಾಷಾತಜ್ಞರ ಪರಿನಿರೀಕ್ಷಕರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಕನ್ನಡ, ತುಳು ಮತ್ತು ರೋಮನ್ ಲಿಪಿಯನ್ನೊಳಗೊಂಡ (ಗೋವಾ) ಕೊಂಕಣಿ ಭಾಷೆಗಳಿಗೆ ರೋನ್ಸ್ ಬಂಟ್ವಾಳ್ ಅವರನ್ನು ನೇಮಿಸಿದೆ. ಬೆಂಗಾಲಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತೆಲುಗು, ತಮಿಳು, ಮಾಲ್ವಾನಿ, ರಾಜಸ್ಥಾನಿ, ಸಿಂದಿ ಗೋವಾ, ಮಲಯಾಳಂ ಭಾಷೆಗಳಿಗೂ ನುರಿತ ಭಾಷಾತಜ್ಞತರನ್ನು ನೇಮಿಸಿ ಆದೇಶ…








