ಬಂಟ್ವಾಳ: ದೇವ ದೇವತೆಗಳ ಜತೆಯಲ್ಲಿ ತನ್ನ ಅಳಿಲ ಸೇವೆ ಗೈದ ಎಲ್ಲಾ ಪುರಾಣ ಕಾಲದಲ್ಲೂ ಪ್ರಾಮಾಣಿಕ ಸೇವೆಗೈದವರು ಕುಂಬಾರ ಕುಲಾಲ ಸಮುದಾಯದ ಜನರು ಎಂದು ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಭಾರ ಗುಂಡಯ್ಯ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ಬಿ.ಸಿ.ರೋಡಿನ ಕುಲಾಲ ಭವನದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಮಹಾಸಭೆ ಹಾಗೂ ಮರಿಯಾಲದ ನೆಂಪು- ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬೆಳಿಗ್ಗೆ ಮಹಾಸಭೆಯನ್ನು ಛಾಯಾಗ್ರಾಹಕ ದಯಾನಂದ ಬಂಟ್ವಾಳ ಉದ್ಘಾಟಿಸಿ ಶುಭ ಹಾರೈಸಿದರು. ಚುನಾವಣಾ ಅಧಿಕಾರಿಯಾಗಿ ಮಹಾಬಲ ಮಾಸ್ಟರ್ ಸಹಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ದಿನಕರ್ ನೀರುಮಾರ್ಗ, ಅಧ್ಯಕ್ಷ ಸಂತೋಷ್ ಮರ್ತಾಜೆ. ಕಾರ್ಯದರ್ಶಿ ನಿತೇಶ್ ಪಲ್ಲಿಕಂಡ, ಗೌರವಾಧ್ಯಕ್ಷ ಮಾಧವ ಬಿ.ಸಿ.ರೋಡ್ ಉಪಸ್ಥಿತರಿದ್ದರು. ಅಧ್ಯಕ್ಷ ಸಂತೋಷ್ ಮರ್ತಾಜೆ ಸ್ವಾಗತಿಸಿ, ಗತ ವರ್ಷಗಳ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ ಮತ್ತು ಕಾರ್ತಿಕ್ ಮಯ್ಯರಬೈಲು ವಾಚಿಸಿದರು. ಹಿರಿಯರ ಸಮ್ಮಿಲನ ಕಾರ್ಯ ಕ್ರಮದಲ್ಲಿ ಹಿರಿಯರಿಗೆ ಆರೋಗ್ಯ ಮಾಹಿತಿಯನ್ನು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ. ಅಂಕಿತಾ ಪ್ರೇಮ್ ನೀಡಿದರು. ಹಿರಿಯ ನ್ಯಾಯವಾದಿ ರಾಮ್ ಪ್ರಸಾದ್ ಕುಟುಂಬದಲ್ಲಿ ಹಿರಿಯರ ಪಾತ್ರ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಭಾರತಿ ಶೇಷಪ್ಪ ಹಿರಿಯರಿಗೆ ತೆಲಿಕೆ ನಲಿಕೆ ವಿಭಿನ್ನ ಕಾರ್ಯಕ್ರಮ ನೀಡಿದರು. ಮತ್ತು ಸ್ವಜಾತಿ ಭಾಂದವರು ಮನೆಯಲ್ಲಿ ತಯಾರಿಸಿ ತಂದ 80 ಕ್ಕೂ ಹೆಚ್ಚು ಪದಾರ್ಥಗಳು ಊಟ ತಿನಿಸುಗಳು ಗಮನ ಸೆಳೆಯಿತು. ಮಕ್ಕಳು, ಮಹಿಳೆಯರು, ಹಾಗೂ ಪುರುಷರಿಗೆ ಒಳಾಂಗಣ ಹೊರಾಂಗಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಅಪರಾಹ್ನ ನಡೆದ ಸಭಾಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ದೇವಂದಬೆಟ್ಟು ಕನಪಾಡಿತ್ತಾಯಿ ದೈವಸ್ಥಾನದ ದೈವ ಮಾನಿ ಸದಾಶಿವ ಮೂಲ್ಯ ಯಾನೆ ಧೂಮ ಮೂಲ್ಯ ನೆರವೇರಿಸಿದರು. ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಸಂತೋಷ್ ಮರ್ತಾಜೆ ವಹಿಸಿದ್ದರು. ಸೇವೆಯಲ್ಲಿ ಇಳಿ ವಯಸಿನಲ್ಲೂ ಸಾಧನೆಗೈಯುವ ನಾರಾಯಣ ಮೂಲ್ಯ ಇಜ್ಜದೊಟ್ಟು ಕಾವಳಕಟ್ಟೆ ಇವರಿಗೆ ಕುಲಾಲ ಭೀಷ್ಮ ಬಿರುದು ನೀಡಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಮಡಿಕೇರಿ ಕೊಡಗು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ, ಕಂಜ್ಯೂಮರ್ ಕೋರ್ಟಿನ ನ್ಯಾಯಾಧೀಶೆ ರೇಣುಕಾಂಬ, ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಹಿಂದಳಿದ ವರ್ಗಗಳ ಆಯೋಗದ ಅಧ್ಯಕ್ಷ ಸುಪ್ರಿಂ ಮಂಜು. ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಬಂಜನ್, ಮಹಿಳಾ ಸಂಘಟನೆಯ ಆದ್ಯಕ್ಷೆ ಬಬಿತಾ ರವೀಂದ್ರ ಬೊಲ್ಪುಗುಡ್ಡೆ, ಮಂಗಳೂರು ದಾಸ್ ಪ್ರಮೋಶನ್ನ ಆಡಳಿತ ನಿರ್ದೇಶಕ ಅನಿಲ್ ದಾಸ್. ಪುಟ್ಟಣ್ಣ ಕುಲಾಲ್ ಪ್ರತಿಷ್ಟಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್. ಜಿಲ್ಲಾ ಕು.ಕುಂ. ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಬಂಟ್ವಾಳದ ಅಧ್ಯಕ್ಷ ಟಿ.ಶೇಷಪ್ಪ ಮೂಲ್ಯ, ಕರ್ನಾಟಕ ರಾಜ್ಯ ಕುಂಬಾರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಶೇಷಪ್ಪ., ಗೌರವಾಧ್ಯಕ್ಷ ಮಾಧವ ಕುಲಾಲ್, ಕಿಶೋರ್ ಕುಲಾಲ್, ಅರುಣ್ ಕುಲಾಲ್, ವಿತೇಶ್ ಕಾಮಾಜೆ, ಸುರೇಶ್ ಕುಲಾಲ್, ಜಿಲ್ಲಾ ವಲಯ ಸಂಚಾಲಕ ಪುನೀತ್ ಎಸ್ ಮೈರನಪಾದೆ ಉಪಸ್ಥಿತರಿದ್ದರು.ಮನೋಜ್ ಸಿದ್ದಕಟ್ಟೆ,ಸದಾಶಿವ ವಗ್ಗ, ಅಶೋಕ್ ಟೈಲರ್, ಮಹಿಳಾ ಸಂಘಟನೆಯ ನೂತನ ಅಧ್ಯಕ್ಷೆ ವಿಜಯಶ್ರಿ, ಪುನೀತ್, ನಾಗೇಶ್ ಬಾಳೆಹಿತ್ಲು, ವಿಠಲ ಪಲ್ಲಿಕಂಡ, ನಾರಾಯಣ ಹೊಸ್ಮಾರು, ಅಶೋಕ್ ಭಂಡಾರಿಬೆಟ್ಟು, ಗಣೇಶ್ ಕಾಮಾಜೆ, ರಾಮಚಂದ್ರ ದೈಪಲ, ಶ್ರೀಕಾಂತ್, ರಾಧಾಕೃಷ್ಣ, ಸಂತೋಷ್ ಮೈಯರಬೈಲ್, ಕಿಶೋರ್ ಏರ್ಯ, ಜಯಗಣೇಶ್ ಸಹಕರಿಸಿದರು. ನಿತೀಶ್ ಪಲ್ಲಿಕಂಡ ಸ್ವಾಗತಿಸಿ, ಕಿಶೋರ್ ಮೊಡಂಕಾಪು ವಂದಿಸಿದರು. ಎಚ್ಕೆ ನಯನಾಡು ಮತ್ತು ಮಂಜುನಾಥ ದೆಚ್ಚಾರು ನಿರೂಪಿಸಿದರು.