
ಬಂಟ್ವಾಳ: ತುಂಬೆಯ ಹರಿನಾಥ್ ಭಂಡಾರಿ ವಳವೂರುಗುತ್ತು(೯೦) ಸೆ. ೪ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸಾಮಾಜಿಕ ಮುಂದಾಳುವಾಗಿ, ಪ್ರಗತಿಪರ ಕೃಷಿಕರಾಗಿದ್ದ ಅವರು ತುಂಬೆ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾಗಿದ್ದರು. ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಮ್ಮ ಗುತ್ತಿಗೆ ಸಂಬಂಧಪಟ್ಟ ದೈವಸ್ಥಾನಗಳ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ಮೃತರು ಪತ್ನಿ, ಪುತ್ರಿ, ಅಳಿಯ, ಪುತ್ರ, ಸೊಸೆ, ನಾಲ್ಕು ಮಂದಿ ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ
