ಬಂಟ್ವಾಳ: ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಮಹಾಸಭೆಯು ಬಿರ್ವಸೆಂಟರ್ನ ಅರ್ಚಿಡ್ ಮಿನಿ ಹಾಲ್ನಲ್ಲಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅವರು ಮಾತನಾಡಿ ಮಹಾಮಂಡಲವು ಪ್ರಸ್ತುತ ಲಾಭದಲ್ಲಿ ಮುಂದುವರೆಯುತ್ತಿದ್ದು ಮುಂದಿನ ವರ್ಷದಲ್ಲಿ ಮಹಾಮಂಡಲದ ವತಿಯಿಂದ ಶಾಖೆಯನ್ನು ತೆರೆದು ಕಾರ್ಯನಿರ್ವಹಿಸಲಾಗುವುದೆಂದು ತಿಳಿಸಿದರು.
ಪ್ರಾಥಮಿಕ ಮೂರ್ತೆದಾರರ ಸಹಕಾರ ಸಂಘಗಳು ಹಾಗೂ ಸದಸ್ಯರ ಸಹಕಾರದಿಂದ ಮಹಾಮಂಡಲವು ಬೆಳೆಯುತ್ತಿದ್ದು ಎಲ್ಲರ ಸಹಾಯದಿಂದ ಮಹಾಮಂಡಲವು ಇನ್ನಷ್ಟುಅಭಿವೃದ್ಧಿಯಾಗಲಿ ಎಂದು ಆಶಿಸಿದರು. ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘದವರ ಕ್ಷೇಮನಿಧಿ ಮತ್ತು ನಿರಖುಠೇವಣಿಯನ್ನು ಮಹಾಮಂಡದಲ್ಲಿ ತೊಡಗಿಸಿಕೊಳ್ಳುವುದರಿಂದ ಮಹಾಮಂಡಲದ ಬೆಳವಣಿಗೆ ಸಾಧ್ಯ ಎಂದ ಅವರು ದ.ಕ.ಜಿಲ್ಲೆಯಲ್ಲಿ 18 ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘಗಳು ಬ್ಯಾಂಕಿಂಗ್ ಕಾರ್ಯನಿರ್ವಹಿಸುತ್ತಿದ್ದು ನಿರ್ಜೀವ ಸ್ಥಿತಿಯಲ್ಲಿ ಇರುವ ಎಲ್ಲಾ ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘವನ್ನು ಕಾರ್ಯರೂಪಕ್ಕೆ ತರುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಮೂರ್ತೆದಾರರ ಮಹಾಮಂಡಲವು ಅಭಿವೃದ್ದಿ ಆದರೆ ಎಲ್ಲಾ ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘಗಳು ಅಭಿವೃದಿಗೊಂಡಂತೆ, ಇನ್ನಷ್ಡು ಶಾಖೆಗಳನ್ನು ವಿಸ್ತರಿಸಿ ಅಭಿವೃದ್ದಿಗೊಳಿಸಿ ಸಮಾಜ ಬಾಂಧವರಿಗೆ ಉದ್ಯೋಗ ನೀಡಲು ಸಾಧ್ಯವಿದೆ ಎಂದರು.
ವರದಿ ಸಾಲಿನಲ್ಲಿ ಅತ್ಯುತ್ತಮ ವ್ಯವಹಾರಗಳಿಸಿದ ಅಲಂಕಾರು ಮೂರ್ತೆದಾರರ ಸಹಕಾರಿ ಸಂಘ ಹಾಗೂ ಸಜಿಪಮನ್ನೂರು ಮೂರ್ತೆದಾರರ ಸಹಕಾರಿ ಸಂಘಗಳಿಗೆ ದ.ಕ.ಜಿಲ್ಲಾ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ವಿಜಯ್ಕುಮಾರ್ ಸೊರಕೆ, ಆರ್ ಸಿ ನಾರಯಣ್, ಅಣ್ಣಿಯಾನೆ ನೋಣಯ್ಯ, ವಿಶ್ವನಾಥ ಪೂಜಾರಿ ಪಂಜ, ಶಿವಪ್ಪ ಸುವರ್ಣ, ಪುರುಷ ಸಾಲ್ಯಾನ್, ವಿಶ್ವನಾಥ ಬಿ, , ಪದ್ಮನಾಭ ಕೋಟ್ಯಾನ್, ಹರೀಶ್ ಸುವರ್ಣ, ಗಣೇಶ್ ಪೂಜಾರಿ, ಉಷಾ ಅಂಚನ್, ಉಪಸ್ಥಿತರಿದ್ದರು. ನಿರ್ದೇಶ ಬೇಬಿ ಕುಂದರ್ ಸ್ವಾಗತಿಸಿದರು . ಸಂಘದ ಕಾರ್ಯನಿರ್ವಹಣಾಧಿಕಾರಿ ಕಿಶೋರ್ಕುಮಾರ್ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಶೈಲಜಾರಾಜೇಶ್ ವಂದಿಸಿದರು.