Author: admin
ಬಂಟ್ವಾಳ: ಇಲ್ಲಿಯ ನಂದನಹಿತ್ಲು ಶ್ರೀ ವೈದ್ಯನಾಥ ಜುಮಾದಿಬಂಟ ದೈವಸ್ಥಾನಕ್ಕೆನೂತನ ಧ್ವಜ ಸ್ತಂಭ( ಕೊಡಿಮರ) ಸಮರ್ಪಣೆಯ ಕುರಿತು ಪೂರ್ವಭಾವಿಸಭೆ ಹಾಗೂ ದೈವನರ್ತಕ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಶೇಖರ ಪಂಬದ ಸಜೀಪಅವರಿ ಅಭಿನಂದನಾ ಕಾರ್ಯಕ್ರಮ ದೈವ ಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು. ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷಗಣೇಶ್ ಸುವರ್ಣ ತುಂಬೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ದೈವ ಇಚ್ಚೆ ಮತ್ತು ದೈವನುಡಿಯಂತೆ ದೈವಸ್ಥಾನದ ಸಮೀಪವೇ ಧ್ವಜಸ್ತಂಭಕ್ಕೆ ಸೂಕ್ತವಾದ ಮರ ದೊರೆತಿದೆ. ಸಂಬಂಧಪಟ್ಟವರ ಜೊತೆ ಮಾತುಕತೆಯು ನಡೆಸಲಾಗಿದ್ದು,ದೈವಸ್ಥಾನಕ್ಕೆ ಮರ ಒದಗಿಸಲು ಒಪ್ಪಿಗೆಯನ್ನು ನೀಡಿದ್ದಾರೆ ಇದನ್ನು ಕ್ಷೇತ್ರಕ್ಜೆ ತರುವ ನಿಟ್ಟಿನಲ್ಲಿ ತಂತ್ರಿಯವರ ಮೂಲಕ ವೈಧಿಕವಿಧಿವಿಧಾನ ಕ್ಕಾಗಿ ಶೀಘ್ರವೇ ದಿನ ನಿಗದಿಪಡಿಸಲಾಗುವುದು 2024 ರ ಎಪ್ರಿಲ್ ಮೊದಲವಾರದಲ್ಲಿ ನಡೆಯುವ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಮುನ್ನ ಧ್ವಜಸ್ತಂಭ ಸಮರ್ಪಣಾ ಕಾರ್ಯ ನಡೆಸಲಾಗುವುದು ಎಂದರು. ಬಾಳಿಗಾ ಮನೆತನದಬಿ. ಸುಧೀರ್ ಬಾಳಿಗಾ ಅವರು ಮಾತನಾಡಿ, ಸ್ಥಳೀಯ ಕಾಮತ್ ಎಂಬವರು ಕೊಡಿಮರವನ್ನು ದೈವಸ್ಥಾನಕ್ಕೆ ಉಚಿತವಾಗಿ ನೀಡಲಿದ್ದಾರೆ.ಮರವನ್ನು ಕ್ಷೇತ್ರಕ್ಕೆ ತಲುಪಿಸುವ ಮತ್ರು ಮುಂದಿನ ವ್ಯವಸ್ಥೆಯ ಬಗ್ಗೆ…
ಪುಂಜಾಲಕಟ್ಟೆ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೩೯ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಂಜು ವಿಟ್ಲ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.ಗುತ್ತಿಗೆದಾರ ಮೋಹನ್ ಶೆಟ್ಟಿ ನರ‍್ವಲ್ದಡ್ಡ ಹಾಗೂ ಪ್ರಗತಿಪರ ಕೃಷಿಕ ಜಯಚಂದ್ರ ಬೊಳ್ಮಾರು ಅವರು ಕ್ರೀಡಾ ಜ್ಯೋತಿ ಪ್ರಜ್ವಲನಗೊಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕರಾದ ತುಂಗಪ್ಪ ಬಂಗೇರ ,ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರ ನೇತೃತ್ವದಲ್ಲಿ ನಡೆಯವ ಸಮಾಜಮುಖಿ ಚಟುವಟಿಕೆಗಳು, ಕಬಡ್ಡಿ ಪಂದ್ಯಾಟ,ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು. ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ದೇಶೀಯ ಮಣ್ಣಿನ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ದಾನಿಗಳ ಸಹಕಾರದಿಂದ ೩೯…
ಬಂಟ್ವಾಳ: ಭದ್ರಾ ಹೋಂ ಅಪ್ಲೈಯೆನ್ಸಸ್ ಮೂರನೇ ವಾರ್ಷಿಕೊತ್ಸವದ ಪ್ರಯುಕ್ತ ಗ್ರಾಹಕರಿಗೆ ಸೆಲ್ಫಿ ವಿದ್ ಭದ್ರಾ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ.ಭದ್ರಾ ಶೋರೂಂ ಮುಂಭಾಗದ ಆನಿವರ್ಸರಿ ಲೋಗೋ ದ ಮುಂಭಾಗದಲ್ಲಿ ಸೆಲ್ಸಿ ತೆಗೆದುಕೊಳ್ಳಬೇಕು. ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಸ್ಟೇಟಸ್ ನಲ್ಲಿ ಹಂಚಬೇಕು. ಸಿಂಗಲ್, ಕಪಲ್, ಫ್ಯಾಮಿಲಿ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಗ್ರಾಹಕರು ಮೂರೂ ವಿಭಾಗದಲ್ಲಿಯೂ ಸ್ಪರ್ಧಿಸಬಹುದು. ಒಂದು ವಿಭಾಗದಲ್ಲಿ ಮಾತ್ರ ಬಹುಮಾನ ಗೆಲ್ಲಲು ಅವಕಾಶ.ಫ್ಯಾಮಿಲಿ ವಿಭಾಗದ ಸೆಲ್ಸಿಯಲ್ಲಿ 2+ ಸದಸ್ಯರು ಕಡ್ಡಾಯ.ಸೆಲ್ಲೀ ಫೊಟೋವನ್ನು ನ.12 ರಂದು ಕಳಿಸಬೇಕು.. ಅದನ್ನು ಸಂಸ್ಥೆ ಇನ್ಷ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಲಿದೆ. ನ.12 ಮತ್ತು 13ರಂದು ಸೆಲ್ಸಿ ಕಳಿಸಲು ಅವಕಾಶ. ನ.14 ರವರೆಗೆ ಅತ್ಯಂತ ಹೆಚ್ಚು ಶೇರ್, ಲೈಕ್ ದೊರೆತವರನ್ನು ವಿಜೇತರೆಂದು ಪರಿಗಣಿಸಲಾಗುವುದು. ನ.14 ರ ಅಪರಾಹ್ನ 2 ರವರೆಗೆ ಅವಕಾಶ. ನೀವು ತೆಗೆದ ಸೆಲ್ಫಿ ಫೊಟೋವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಕಟಿಸಬೇಕು. ಅತ್ಯಂತ ಹೆಚ್ಚು ವೀಕ್ಷಣೆಮಾಡಿದ ಸ್ಟೇಟಸ್ ನ ಸ್ಟೀನ್ ಶಾಟ್…
ಬಂಟ್ವಾಳ: ದ.ಕ. ಜಿ.ಪಂ. ಹಿ. ಪ್ರಾ ಶಾಲೆ ಬಾಳ್ತಿಲ ಇಲ್ಲಿ ಶಾಲೆಯ ನೂತನ ೭ತರಗತಿ ಕೊಠಡಿ, ಬಯಲು ರಂಗ ಮಂದಿರ ಮತ್ತು ಶಾಲಾ ಉದ್ಯಾನವನದ ಉದ್ಘಾಟನೆ, ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ, ಪೀಠೋಪಕರಣ ಹಸ್ತಾಂತರ, ಶಾಲಾ ವಾರ್ಷಿಕೋತ್ಸವ, ಆಯುರ್ವೇದ ವನ ಉದ್ಘಾಟನೆ, ಕೈ ತೊಳೆಯುವ ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.ಬೆಳಿಗ್ಗೆ ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಅಣ್ಣು ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಶಾಲೆಯಿಂದ ಶೈಕ್ಷಣಿಕ ಜಾಗೃತಿಯ ಆಕರ್ಷಕ ಮೆರವಣಿಗೆ ಹೊರಟು ನೀರಪಾದೆಯವರೆಗೆ ಸಾಗಿ ಶಾಲೆಗೆ ಮರಳಿತು. ಗೊಂಬೆ, ಬಣ್ಣದ ಕೊಡೆ, ಚೆಂಡೆ , ವಾದ್ಯ ಬ್ಯಾಂಡ್ ನ ಹಿಮ್ಮೇಳ ಮೆರವಣಿಗೆಗೆ ಮೆರುಗು ನೀಡಿತು. ನೂತನ ಕೊಠಡಿಯನ್ನು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಸುಂದರ ವಾತವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಗೊಂಡಿರುವುದು ಊರಿಗೆ ಸಿಕ್ಕ ಗೌರವವಾಗಿದೆ. ಊರವರು ಹಾಗೂ ಅಧ್ಯಾಪಕ ವೃಂದದವರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.…
Imaginaire image ಬಂಟ್ವಾಳ: ಅಂಗನವಾಡಿ ಕೇಂದ್ರದ ಬೀಗ ಮುರಿದ ಕಳ್ಳರು ಪಾತ್ರೆ ವಸ್ತುಗಳು ಸಹಿತ ದಿನಸಿ ಹಾಗೂ ನಗದು ಕಳವು ನಡೆಸಿದ ಘಟನೆ ತಾಲೂಕಿನ ಬೊಂಡಾಲ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ರಾತ್ರಿ ನಡೆದಿದೆ.ಕುಕ್ಕರ್, 1 ಸಾವಿರ ರೂಪಾಯಿ ನಗದು ಹಾಗೂ ದಿನಸಿ ಸಾಮಾಗ್ರಿ ಕಳ್ಳರ ಪಾಲಾಗಿದೆ. ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದ ದೇವಕಿಯವರು ಬುಧವಾರ ಕಚೇರಿಯಲ್ಲಿ ಮಿಟಿಂಗ್ ಇದ್ದ ಕಾರಣ ಅಂಗನವಾಡಿಗೆ ಬಾರದೇ, ಅಡುಗೆ ಸಹಾಯಕಿಯಾದ ವಿಜಯಶ್ರೀಯವರು ಅಂಗನವಾಡಿಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿ ಅಂಗನವಾಡಿಗೆ ಬೀಗ ಹಾಕಿ ತೆರಳಿದ್ದಾರೆ. ಗುರುವಾರ ಬೆಳಿಗ್ಗೆ 9 ಗಂಟೆಗೆ ಅಡುಗೆ ಸಹಾಯಕಿ ವಿಜಯಶ್ರೀ ಅಂಗನವಾಡಿಗೆ ಬಂದಾಗ, ಕಳ್ಳರು ಬಾಗಿಲ ಬೀಗ ಮುರಿದು ಅಂಗನವಾಡಿ ಒಳಗೆ ಇದ್ದ 2 ಅಲ್ಯುಮಿನಿಯಂ ಕುಕ್ಕರ್ 1ಅಲ್ಯುಮಿನಿಯಂ ಡಬ್ಬ , ರೂ, 1000ನಗದು ಹಾಗೂ ದಿನಸಿ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್…
ಬಂಟ್ವಾಳ : ಇಲ್ಲಿನ ಬಂಟ್ವಾಳ ಕಸ್ಬಾ ಗ್ರಾಮದ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಗೌಜಿದ ಲೇಸ್ ಕಾರ್ಯಕ್ರಮ ನ.12ರಂದು ನೇರಂಬೋಳಿನ ಶ್ರೀ ರಕ್ತೇಶ್ವರಿ ಸಭಾಭವನದಲ್ಲಿ ನಡೆಯಲಿದೆ.ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ನೇರಂಬೋಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಸಾಹಿತಿ ಕುವಿಕು ಕಣ್ವತೀರ್ಥ, ಪಣೋಲಿಬೈಲು ಭಂಡಾರದ ಮನೆಯ ರಮೇಶ್ ಕುಲಾಲ್ ಪಣೋಲಿಬೈಲು, ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯಶಂಕರ ಕಾನ್ಸಾಲೆ, ಉದ್ಯಮಿ ನಾಗೇಶ್ ಸಾಲ್ಯಾನ್, ಭಾರತ ಸೇವಾದಳದ ಅಧ್ಯಕ್ಷ ಸೇಸಪ್ಪ ಮಾಸ್ತರ್ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಸನಾತನ ಸತ್ಸಂಗ ಧಾರ್ಮಿಕ ಭಾಷಣ, ತುಳುನಾಡಿನ ಆಯ್ದ ಸ್ಥಳೀಯ ಕ್ರೀಡಾಕೂಟ, ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನದ ನಂತರ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಪಾಪಣ್ಣ ವಿಜಯ ಗುಣಸುಂದರಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸಚಿನ್ ನೇರಂಬೋಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಣಿ.ನ.10ಅಂಟಿದ ಬಂದಣಿಕೆಯಿಂದಾಗಿ ಮರ ಬೇಗನೆ ಸಾಯುವಂತೆ ದುಶ್ಚಟಗಳಿಗೆ ಬಲಿಯಾದವರು ನರಕಯಾತನೆ ಅನುಭವಿಸಿ ಸಾಯಬೇಕಾಗುತ್ತದೆ.ಒಳ್ಳೆಯ ಚಟ ಇರಲಿ ಆದರೆ ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಜಯಾನಂದ ಪೆರಾಜೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಡಾ. ಮನೋಹರ್ ರೈ ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷಬಾಲಕೃಷ್ಣ ಆಳ್ವ ಕೊಡಾಜೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಸಂಚಾಲಕ ಇಬ್ರಾಹಿಂ ಕೆ.ಮಾಣಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ಚೆನ್ನಪ್ಪ ಗೌಡ, ಹಿರಿಯ ಶಿಕ್ಷಕಿ ಜಯಲಕ್ಷ್ಮಿ, ಶ್ಯಾಮಲ ಕೆ.,ಸುಶ್ಮಿತಾ ಉಪಸ್ಥಿತರಿದ್ದರು. ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾಪಾರ್ವತಿ ಸ್ವಾಗತಿಸಿದರು. ಶಿಕ್ಷಕ ಎನ್. ಗಂಗಾಧರ ಗೌಡ ವಂದಿಸಿ, ಜಯರಾಮ ಕಾಂಚನ ನಿರೂಪಿಸಿದರು.ಯೋಜನೆಯ ಸೇವಾ ಪ್ರತಿನಿಧಿ ಲೈಲಾಬಿ ಸಹಕರಿಸಿದರು.
ಬಂಟ್ವಾಳ: ಮಡಿವಾಳ ಯುವ ಬಳಗ ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಸಂದೇಶ್ ಕೊಯಿಲ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ನಿತಿನ್ ಕೆಲಿಂಜ, ಪ್ರಧಾನ ಕಾರ್ಯದರ್ಶಿಯಾಗಿ ವಕ್ಷೀತ್ ಇನೋಳಿ, ಜತೆ ಕಾರ್ಯದರ್ಶಿಯಾಗಿ ತಿಲಕ್ ಮಡಿವಾಳಪಡ್ಪು, ಕೋಶಾಧಿಕಾರಿಯಾಗಿ ಗಣೇಶ್ ಅಬೀರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಂಗಳೂರು, ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ಚಿತ್ರಕಲಾ ಶಿಕ್ಷಕ ಸಂಘ ಬಂಟ್ವಾಳ ತಾಲೂಕು ಘಟಕ ಇದರ ಸಹಯೋಗದಲ್ಲಿ ಚಿತ್ರಕಲಾ ಶಿಕ್ಷಕರಿಗೆ ಶೈಕ್ಷಣಿಕ ಕಲಾ ಕಾರ್ಯಗಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಬುಧವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಕಾರ್ಯಗಾರ ಉದ್ಘಾಟಿಸಿದರು. ಅವರು ಮಾತನಾಡಿ ಪ್ರಕೃತಿಯೇ ಒಂದು ಚಿತ್ರ. ಪ್ರಕೃತಿಯ ಸೌಂದರ್ಯವನ್ನು ಆಸ್ವಾಸಿದವರೇ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಚಿತ್ರಕಲೆ ಸುಂದರ ಹಾಗೂ ಅದ್ಭುತವಾದ ಕೆಲಸ. ಇದು ಎಲ್ಲರಿಗೂ ಒಲಿಯುವುದಿಲ್ಲ. ನನ್ನ ಬಾಲ್ಯದಲ್ಲೂ ಚಿತ್ರಕಲಾ ಶಿಕ್ಷಕರು ಪ್ರಭಾವ ಬೀರಿದ್ದರು ಎಂದು ತಿಳಿಸಿದರು.ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವೆಲ್ಲರು ಒಟ್ಟಿ ಸೇರಿ ನಮ್ಮೊಳಗೆ ಚರ್ಚೆಗಳು ನಡೆದಾಗ ಹೊಸ ವಿಷಯ ಕಲಿಯಲು ವೇದಿಕೆ ದೊರೆಯುತ್ತದೆ. ಆ ಕಾರಣಕ್ಕಾಗಿ ಇಂತಹ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾವು ಎಲ್ಲಾ ಸರಕಾರಿ ಕಚೇರಿಗಳನ್ನು ಸುಂದರಗೊಳಿಸಿದ್ದೇವೆ. ಅಂತೆಯೇ ಚಿತ್ರಕಲಾ ಶಿಕ್ಷಕನ ಬದುಕು ಸುಂದರಗೊಳ್ಳುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕಾಗಿದೆ. ಇಲಾಕೆಯಿಂದ…
ಬಂಟ್ವಾಳ: ಹೊಟೇಲ್ ಉದ್ಯಮದಲ್ಲಿ ಹೊಸ ಮೈಲು ಗಲ್ಲು ಸಾಧಿಸಿರುವ ಆನಿಯಾ ದರ್ಬಾರ್ ಗ್ರೂಫ್ ಆಪ್ ಹೊಟೇಲ್ಸ್ ಇದರ ನೂತನ ಆಲಿಯಾ ಸಾಗರ್ ಮಲ್ಟಿ ಕುಶನ್ ವೆಜ್ ರೆಸ್ಟೊರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್ ಸಿಟಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಧರ್ಮಗುರುಗಳಾದ ಬಂಬ್ರಾಣ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಉಸ್ತಾದ್ ದುವಾಶಿರ್ವಾಚನಗೈದರು. ಇರ್ಷಾದ್ ದಾರಿಮಿ ಮಿತ್ತಬೈಲ್, ಎಂ.ವೈ. ಅಶ್ರಫ್ ಫೈಝಿ ಮಿತ್ತಬೈಲ್, ಎಂ.ಕೆ. ಅಝೀಝ್ ಅಮ್ಝದಿ ಮಾವಿನಕಟ್ಟೆ, ಉಪಸ್ಥಿತಿಯಲ್ಲಿ ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ, ಎಂ. ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಪತ್ರಕರ್ತ ಲತೀಫ್ ನೇರಳಕಟ್ಟೆ, ಮಹಮ್ಮದ್ ಕಳವಾರು, ಸಂಚಾರಿ ಠಾಣೆ ಎಸೈ ಸುತೇಶ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್,…








