Author: admin
ಬಂಟ್ವಾಳ: ಮೂಲತಃ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ತಾಲೂಕಿನ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಧನೇಶ್ ಶೆಟ್ಟಿ ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಷಿಯದ್ದಲ್ಲಿದ್ದು ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟು ಆಗಿರುವ ಅವರಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಇದೀಗ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ್ದಿದ್ದು ಊರಿನ ಜನರಲ್ಲಿ ಸಂಭ್ರಮ ಮನೆ ಮಾಡಿದೆ.
ಬಂಟ್ವಾಳ: ಐಡಿಯಲ್ ಕಾಶ್ಯು ಇಂಡಸ್ಟ್ರೀಸ್ ಶೇರಾ ಇಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಹಿರಿಯ ಮಾರ್ಗದರ್ಶಕ ಜೆ ಕೆ ನಾಯರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಕೆಲಸಮಾಡುವ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಅಗತ್ಯ ಅಂತಹ ಸಿಬ್ಬಂದಿಗಳು ನಮ್ಮಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಸಹೃದಯಿ ಸಿಬ್ಬಂದಿಗಳ ಬೇಕು ಬೇಡ ಗಳಿಗೆ ಸ್ಪಂದಿಸುವ ಮಾಲಕರು ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಪರವಾಗಿ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವೇದಿಕೆ (ರಿ) ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ನಿವೃತ್ತ ಪ್ರಾಚಾರ್ಯ ಎಸ್.ಮಹೇಶ್ವರ ಭಟ್, ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್.ರಾವ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮಾಲಕರಾದ ಎಸ್. ಗಂಗಾಧರ್ ಶೇರಾ ಸ್ವಾಗತಿಸಿದರು. ಮಲ್ಲಿಕಾ ಗಂಗಾಧರ್, ನೂತನ್ ಕುಮಾರ್, ವತನ್ ಕುಮಾರ್ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶ್ರೀಧರ್ ಶೆಟ್ಟಿ, ಚಂದ್ರಶೇಖರ್, ಪುರುಷೋತ್ತಮ್, ಕೃಷ್ಣಪ್ಪ ಪೂಜಾರಿ, ಸುಭಾಸ್, ಉಮೇಶ್,ದೇಜಪ್ಪ ಪೂಜಾರಿ, ಸೌಮ್ಯ, ಶ್ರೀಜಾ,ಧನಲಕ್ಶ್ಮೀ,…
ಬಂಟ್ವಾಳ: ಭಾನುವಾರ ಬ್ರಾಹ್ಮೀಮುಹೂರ್ತದಲ್ಲಿ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ೨೨ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು ನಡೆಸಲಾಯಿತು. ಬೆಳಗ್ಗೆ ಹಣತೆ ಮೂಲಕ ದೀಪ ಬೆಳಗಿಸಿ ವಿವಿಧ ರೂಪಗಳಲ್ಲಿ ದೇವಸ್ಥಾನವನ್ನು ಅಲಂಕರಿಸಲಾಯಿತು. ಕಾಕಡಾರತಿ, ಜಾಗರ ಪೂಜೆ, ವಿಶೇಶಾಲಂಕಾರ ಬಳಿಕ ವಿಶ್ವರೂಪದರ್ಶನ, ಪ್ರಸಾದ ವಿತರಣೆ ನಡೆಯಿತು. ವಿಶ್ವಕಪ್ ಪಂದ್ಯಾದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಆಶಿಸುವ ಹೂವು ಹಾಗೂ ದೀಪಗಳಿಂದ ಅಲಂಕರಿಸಿದ ಕಲಾಕೃತಿ ಗಮನ ಸೆಳೆಯಿತು. ಈ ಸಂದರ್ಭ ಶಿಲೆ ಶಿಲೆ ಹಕ್ಕಿನ ಮೋಕ್ತೇಸರರಾದ ಬಿ. ಸೂರ್ಯನಾರಾಯಣ ಬಾಳಿಗ, ಆಡಳಿತ ಮೋಕ್ತೇಸರ ಬಿ. ಅಶೋಕ್ ಶೆಣೈ, ಮೋಕ್ತೇಸರರಾದ ಭಾಮಿ ನಾಗೇಂದರ ಶೆಣೈ, ಬಿ.ಸುರೇಶ್ ವಿ. ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕಮಲಾಕ್ಷಿ ಕಾಂಪ್ಲೆಕ್ಸ್ ನ ಉದ್ಘಾಟನಾ ಸಮಾರಂಭ ನಡೆಯಿತು.ಮಾಣಿಲ ಶ್ರೀ ಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ ಆಶೀರ್ವಚನ ನೀಡಿಕಮಲಾಕ್ಷಿ ಕಾಂಪ್ಲೆಕ್ಸ್ ಆದರ್ಶ ಕಟ್ಟಡ. ಪಣೋಲಿಬೈಲು ಕ್ಷೇತ್ರದಲ್ಲಿ ಇಂತಹ ಕಟ್ಟಡ ನಿರ್ಮಾಣವಾಗಿರುವುದು ಮಾಲಕರ ಅತೀ ದೊಡ್ಡ ಯೋಗ ಎಂದರು. ಯಾರೇ ಅಭಿವೃದ್ಧಿ ಕೆಲಸ ಮಾಡಿದರೂ ಮತ್ಸರ ಬಿಟ್ಟು ಎಲ್ಲರೂ ನಮ್ಮವರೆಂದು ತಿಳಿದು ಸಹಕಾರ ನೀಡಬೇಕು ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ ಹಿಂದುಳಿದ ವರ್ಗದಲ್ಲಿ ಹುಟ್ಟಿ ಕಟ್ಟಡ ನಿರ್ಮಿಸುವಂತಹ ಸಾಧನೆ ಮಾಡಲು ಹಿರಿಯರ ಆಶೀರ್ವಾದದಿಂದ ಸಾಧ್ಯವಾಗಿದೆ. ಪಣೋಲಿಬೈಲು ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣಗೊಂಡಿರುವುದರಿಂದ ಊರಿನ ಅಭಿವೃದಿಯ ಜೊತೆಗೆ ಈ ದೈವಸ್ಥಾನಕ್ಕೆ ಬರುವ ಭಕ್ತರಿಗೂ ಅನುಕೂಲವಾಗಲಿದೆ ಎಂದರು.ಅರ್ಚಕ ಶಿವಾನಂದ ಐತಾಳ್, ಸಜೀಪಮೂಡ ಗ್ರಾ.ಪಂ.ಮಾಜಿ ದೇವಿ ಪ್ರಸಾದ್ ಪೂಂಜಅರ್ಚಕ ಶಿವಾನಂದ ಐತಾಳ್, ಸಜೀಪಮೂಡ…
ಬಂಟ್ವಾಳ :ಕಂಬಳ ಋತುವಿನ ಮೊದಲ ಕಂಬಳ ಕೂಟ ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ದೂರಿಯ ಚಾಲನೆ ನೀಡಲಾಯಿತು. ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರು ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು. ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಽಕಾರಿ ಜಗನ್ನಾಥ ಬಂಗೇರ ನಿರ್ಮಲ್ ನರಿಕೊಂಬು ಅವರು ಸತ್ಯ-ಧರ್ಮ ಜೋಡುಕರೆಯನ್ನು ಉದ್ಘಾಟಿಸಿ ಮಾತನಾಡಿ,ಆಧುನಿಕ ಟಿ.ವಿ.ಸಂಸ್ಕೃತಿಯ ಈ ಕಾಲಘಟ್ಟದಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕಂಬಳ, ದೈವಾರಾಧನೆಯನ್ನು ಉಳಿಸುವ ಕಾರ್ಯ ನಡೆಸುತ್ತಿರುವ ಮೈರದ ಯುವಕರ ಕಾರ್ಯ ಅಭಿನಂದನೀಯವಾಗಿದೆ ಎಂದರು. ಪ್ರಗತಿಪರ ಕೃಷಿಕ ಚಯಚಂದ್ರ ಬೊಳ್ಮಾರು ಅವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಅತಿಥಿಯಾಗಿದ್ದ ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಕಂಬಳ ತುಳುನಾಡಿನ ಅದ್ಭುತ ಸಂಸ್ಕೃತಿಯಾಗಿದ್ದು,ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು. ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ…
ಬಂಟ್ವಾಳ: ವಿಶ್ವಕಪ್ ಕ್ರಿಕೆಟ್ ನಲ್ಲಿ ಸೆಮಿಫೈನಲ್ಸ್ ಅನ್ನು ಜಯಗಳಿಸಿ, ಭಾರತ ಫೈನಲ್ಸ್ ನತ್ತ ಮುನ್ನುಗ್ಗಿದ್ದು, ಈ ಸಂತಸದ ಕ್ಷಣದಲ್ಲಿ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಭದ್ರಾ ಹೋಂ ಅಪ್ಲೈಯನ್ಸಸ್ ಗ್ರಾಹಕರಿಗೆ ‘ವಿಜಯೀಭವ’ ಹೆಸರಲ್ಲಿ ಭರ್ಜರಿ ಆಫರ್ ನೀಡಿದೆ. ಗ್ರಾಹಕರು 32 ಇಂಚು ಮೇಲ್ಪಟ್ಟು ಖರೀದಿಸುವ ಟಿ.ವಿ.ಗಳಿಗೆ ಖರೀದಿಯ ಸಂದರ್ಭ ಹೇಗೂ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ, ಜತೆಗೆ ಭದ್ರಾ ವಾರ್ಷಿಕೋತ್ಸವದ ಆಕರ್ಷಕ ಬಹುಮಾನಗಳು ಇರುತ್ತವೆ. ವಿಶ್ವಕಪ್ ಫೈನಲ್ ಪಂದ್ಯಾಟವನ್ನೂ ಭಾರತ ಗೆದ್ದರೆ, ನವೆಂಬರ್ 16ರಿಂದ 19ರವರೆಗೆ ಯಾರೆಲ್ಲಾ ಎಲ್.ಇ.ಡಿ. ಟಿವಿಯನ್ನು ಭದ್ರಾದಲ್ಲಿ ಖರೀದಿ ಮಾಡುತ್ತಾರೋ ಅವರಿಗೆಲ್ಲಾ ಎಕ್ಸ್ ಟ್ರಾ ಆಫರ್ ನೀಡಲಾಗುತ್ತದೆ. ವಿಶ್ವಕಪ್ ವಿಜಯದ ಖುಷಿಗಾಗಿ 1500 ರೂಗಳ ಎಕ್ಸ್ಟ್ರಾ ಕ್ಯಾಷ್ ಬ್ಯಾಕ್ ನೀಡಲಾಗುತ್ತದೆ ಎಂದು ಭದ್ರಾದ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ. ವಿಶ್ವಕಪ್ ಗೆಲ್ಲುವ ಖುಷಿಗಾಗಿ ಇದು ನಮ್ಮ ಕೊಡುಗೆ ಹಾಗೂ ಸಂಭ್ರಮಾಚರಣೆಯಾಗಿದೆ ಎಂದು ಹೇಳಿರುವ ಅವರು ಈ ಮೂಲಕ ಗ್ರಾಹಕರ ಖರೀದಿ ಖುಷಿಯ ಜೊತೆಗೆ ನಾವೂ ವಿಶ್ವಕಪ್ ಗೆಲುವಿನ ಹಾರೈಕೆಯಲ್ಲಿರುತ್ತೇವೆ ಎಂದಿದ್ದಾರೆ.
ಬಂಟ್ವಾಳ: ಕಾರ್ಮಿಕ ವಿದ್ಯಾರ್ಥಿ ವೇತನ ಪರಿಷ್ಕರಣೆ ಪ್ರಸ್ತಾಪ ಕೈಬಿಡುವಂತೆ ತಾ.ಒಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಕಾಂಇಕ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಹಲವಾರು ವರ್ಷಗಳಿಂದ ಸರಕಾರದಿಂದ ನೀಡಲಾಗುತ್ತಿತ್ತು. ಇದರಿಂದ ಕಾರ್ಮಿಕರ ಮಕ್ಕಳಿಗೆ ಉನ್ನತ ವ್ಯಾಸಂಗ ಸೇರಿದಂತೆ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಇನ್ನಿತರ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಬರುತ್ತಿರುವುದರಿಂದ ಆರ್ಥಿಕ ತೊಂದರೆ ಇರುವ ವಿದ್ಯಾರ್ಥಿಗಳಿಗೆ ತುಂಬಾ ಅನೂಕೂಲವಾಗುತ್ತಿತ್ತು . ಆದರೆ ಸರಕಾರ ಅಭಿವೃದ್ದಿ ಯೋಜನೆ ಮತ್ತು ಗ್ಯಾರಂಟಿ ಪೂರೈಕೆಯ ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನಿಮಿತ್ತ ಸಿಗುವ ವಿದ್ಯಾರ್ಥಿ ವೇತನವನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದು ಎಂದು ತಿಳಿದು ಬಂದಿರುತ್ತದೆ. ಈ ರೀತಿಯ ಸರಕಾರದ ನಿರ್ಧಾರವು ಅಕ್ಷಮ್ಯ ಅಪರಾಧದ ಪರಮಾವಧಿಯಾಗಿದೆ. ಆದುದರಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನಿಮಿತ್ತ ನೀಡಲಾಗುತ್ತಿರುವ ವಿವಿಧ ಸ್ತರದ ವಿದ್ಯಾರ್ಥಿ ವೇತನಗಳನ್ನು ಈ ಹಿಂದಿನ ಪ್ರಮಾಣದಲ್ಲಿ…
ಬಂಟ್ವಾಳ: ಕಳೆದ ಮೂರು ದಿನಗಳಿಂದ ಫರಂಗಿಪೇಟೆ ಬೀದಿಯಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಫರಂಗಿಪೇಟೆಯ ಸೇವಾಂಜಲಿ ಸಂಸ್ಥೆ ಮಾನವೀಯತೆ ಮೆರೆದಿದೆ.ಬುಧವಾರ ಬೆಳಿಗ್ಗೆ ಫರಂಗಿಪೇಟೆಯ ಶ್ರೀರಾಮ ವಿದ್ಯಾಕೇಂದ್ರದ ಆವರಣದ ಬಳಿ ಹಳೆ ಬಟ್ಟೆ ಧರಿಸಿಕೊಂಡು ಮರಳಿನಲ್ಲಿ ಹೊರಳಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ವಿಚಾರಿಸಿದಾಗ ಆತ ಮಾನಸಿಕ ಸ್ಥಿಮಿತ ಕಳಕೊಂಡಿರುವುದು ತಿಳಿದು ಬಂದಿದೆ. ತನ್ನ ಹೆಸರನ್ನು ಉಮಾಮಹೇಶ್ವರ ಎಂದು ಹೇಳುವ ಆತ ಊರು ಯಾವುದು ಎಂದು ವಿಚಾರಿಸಿದಾಗ ಊರಿನ ಹೆಸರು ಹೇಳುವ ಬದಲು ಆ ಊರು ಸರಿ ಇಲ್ಲ, ಅಲ್ಲಿನ ಜನರು ಸರಿ ಇಲ್ಲ ಎಂದಷ್ಟೇ ಹೇಳುತ್ತಿದ್ದ. ತಕ್ಷಣ ಕೃಷ್ಣ ಕುಮಾರ್ ಪೂಂಜ ಅವರು ಆತನಿಗೆ ಊಟೋಪಚಾರ ನೀಡಿದರು. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮುಂದಿನ ಚಿಕಿತ್ಸೆಯ ಉದ್ದೇಶಕ್ಕಾಗಿ ಅಂಬ್ಯುಲೆನ್ಸ್ ಮೂಲಕ ಕರೆದೊಯ್ದು ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಬಟ್ಟೆಬರೆಗಳನ್ನು ಸೇವಾಂಜಲಿ ವತಿಯಿಂದ…
ಬಂಟ್ವಾಳ: ಪುದು ಗ್ರಾಮದ ಗೋವಿನ ತೋಟ ಬ್ರಹ್ಮಗಿರಿಯ ಶ್ರೀ ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಸನಾತನ ಧರ್ಮದ ಉಳಿವಿಗಾಗಿ, ಭಕ್ತಜನರಲ್ಲಿ ಶ್ರೀಮಧ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಂಟ್ವಾಳ ತಾಲೂಕಿನ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ (108) ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ ಮತ್ತು ಗೋ ನವರಾತ್ರಿ ಉತ್ಸವ ಹಾಗೂ 1108 ನಾರಾಯಣ ಕವಚ ಯಾಗ ನ.14ರಿಂದ ನ.22ರವರೆಗೆ ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರ ಗೌರವ ಮಾರ್ಗದರ್ಶನದಲ್ಲಿ ಭಕ್ತಿಭೂಷಣದಾಸ ಪ್ರಭೂಜಿ ಹಾಗೂ ವೃಂದಾವನದ ಶ್ರೀ ರಮೇಶ ಗೋಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಷ್ಟೋತ್ತರ ಶತ ಶ್ರೀಂದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಸಮಿತಿ ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ತಿಳಿಸಿದರು. ನ.14 ಮಂಗಳವಾರ ತೋರಣ ಮುಹೂರ್ತ, ಗಣಪತಿ…
ಬಂಟ್ವಾಳ: ಇಲ್ಲಿನ ಪ್ರತಿಷ್ಠಿತ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆ ಭದ್ರಾ ಹೋಂ ಅಪ್ಲೈಯೆನ್ಸಸ್ ನ 3 ನೇ ವಾರ್ಷಿಕೋತ್ಸವದ ಪ್ರಯುಕ್ತ ಅಳವಡಿಸಲಾಗಿರುವ ಐ ಲವ್ ಬಂಟ್ವಾಳ ಸೆಲ್ಪೀ ಕಾರ್ನರ್ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.ಸಂಸ್ಥೆಗೆ ಭೇಟಿ ನೀಡುವ ಗ್ರಾಹಕರು ಇದರ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಭದ್ರಾ ಹೋಂ ಅಪ್ಲೈಯೆನ್ಸಸ್ ನ 3ನೇ ವರ್ಷದ ಅಂಗವಾಗಿ ವಿಶೇಷ ಮಾರಾಟ ಮೇಳ ಆರಂಭವಾಗಿದ್ದು ಹಲವಾರು ವಿಶೇಷತೆಗಳೊಂದಿಗೆ ನಡೆಯುತ್ತಿದೆ. ರಿಯಾಯತಿ ದರದಲ್ಲಿ ಎಲೆಕ್ಟ್ರಾನಿಕ್ಸ್, ಫರ್ನಿಚರ್ಸ್ ಸಹಿತ ಗೃಹೋಪಯೋಗಿ ವಸ್ತುಗಳನ್ನು ಮನೆಗೆ ಕೊಂಡೊಯ್ಯ ಬಹುದಾಗಿದೆ. ಈ ವಿಶೇಷ ಅವಕಾಶವನ್ನು ಬಳಸಿಕೊಳ್ಳುವಂತೆ ಭದ್ರಾ ಹೋಂ ಅಪ್ಲೈಯೆನ್ಸಸ್ ಮಾಲಕಿ ಮೇಘಾ ಆಚಾರ್ಯ ತಿಳಿಸಿದ್ದಾರೆ.








