ಬಂಟ್ವಾಳ: ಮಹಿಳೆಯರು ಗಂಡಸರನ್ನೆ ಅವಲಂಬಿಸುವ ಕಾಲಘಟ್ಟವೊಂದಿತ್ತು. ಆದರೆ ಇಂದು ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿದ್ದು ಸ್ವಸಹಾಯ ಗುಂಪು ಚಟುವಟಿಕೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಿತ್ಯಾನಂದ ಕಾಂಪ್ಲೆಕ್ಸ್ ನಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ನೂತನ ತೊಕ್ಕೊಟ್ಟು ದೇರಳಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಡಾ.ಅಮ್ಮೆಂಬಳ ಬಾಳಪ್ಪ ರು ಕಟ್ಟಿ ಬೆಳೆಸಿದ ಬ್ಯಾಂಕ್ ಹಲವರಿಗೆ ದಾರಿದೀಪವಾಗಿದೆ. ಜೀವನದ ಬದ್ಧತೆಗೆ ಸಿಕ್ಕಿರುವ ಶಕ್ತಿಕೇಂದ್ರವಾಗಿ ಬ್ಯಾಂಕ್ ಹೊರಹೊಮ್ಮಿದೆ. ಅಮ್ಮೆಂಬಳ ಬಾಳಪ್ಪರ ಸರಳತೆ, ನಿರಾಂಡಬರದ ಜೀವನ, ಅವರ ತತ್ವ, ಸಿದ್ದಾಂತವನ್ನು ಮಕ್ಕಳಿಗೆ ತಿಳಿಸಿಕೊಡವ ಕಾರ್ಯ ಆಗಬೇಕಾಗಿದೆ ಎಂದರು.
ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ ಜನರಿಗೆ ಈ ಬ್ಯಾಂಕಿನ ಮೇಲೆ ಅಪಾರವಾದ ಪ್ರೀತಿ ಇರುವುದು ಈ ಕಾರ್ಯಕ್ರಮದ ಮೂಲಕ ಸಾಬೀತಾಗಿದೆ. ಆಡಳಿತ ಮಂಡಳಿ, ಹಾಗೂ ಸಿಬ್ಬಂದಿಗಳ ಅತ್ಯುತ್ತಮವಾದ ಸೇವೆಯಿಂದ ಇಂದು ಬ್ಯಾಂಕ್ ೧೬ ಶಾಖೆಗಳನ್ನು ತೆರದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರಧಾನಿ ಮೋದಿಯವರ ಫಸಲ್ ಭೀಮಾ ಯೋಜನೆ ಸೇರಿದಂತೆ ಕೇಂದ್ರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ಮಾ ಗ್ರಾಮ ಪಂಚಾಯತಿ ಅಧ್ಯಕ್ಷೆ ರಜಿಯಾ ಗಣಕಯಂತ್ರ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಗ್ರಾ.ಪಂ ಸದಸ್ಯೆ ರಮ್ಲತ್ ಉದ್ಘಾಟಿಸಿದರು. ಕುಂಭೇಶ್ವರ ವಿ.ಸ.ಸಂಘ ನಿ. ಕೊಲ್ಯ ಇದರ ಅಧ್ಯಕ್ಷ ಗೋಪಾಲ ಕಣ್ವತೀರ್ಥ ಠೇವಣಿ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ದೇರಳಕಟ್ಟೆಯ ರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ ಆಡಳಿತ ಮೊಕೇಸರ ಚಂದ್ರಹಾಸ ಅಡ್ಯಂತಾಯ, ಕಂಪ ದೈವದ ಮೂಲ್ಯಣ್ಣ ಕೆ. ಬಾಲಕೃಷ್ಣ ಸಾಲಿಯಾನ್ ,
ಬೆಳ್ಮಾ ಗ್ರಾ.ಪಂ ಸದಸ್ಯ ಇಕ್ವಾಲ್ ಎಚ್.ಆರ್., ಉದ್ಯಮಿ ರವಿರಾಜ್ ಶೆಟ್ಟಿ, ಕಟ್ಟಡ ಮಾಲಕಿ ವೀಣಾ ಉಪಸ್ಥಿತರಿದ್ದರು.
ನಿರ್ದೇಶಕರಾದ ವಿಶ್ವನಾಥ ಕೆ.ಬಿ, ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ಜನಾರ್ದನ ಬೊಂಡಾಲ, ಎಂ. ವಾಮನ ಟೈಲರ್, ಬಿ. ರಮೇಶ್ ಸಾಲ್ಯಾನ್, ಸುರೇಶ್ ಎನ್., ವಿ. ವಿಜಯಕುಮಾರ್, ಜಗನ್ನಿವಾಸ ಗೌಡ, ಎಂ.ಕೆ. ಗಣೇಶ ಸಮಗಾರ, ಜಯಂತಿ, ವಿದ್ಯಾ,
ಶಾಖಾ ವ್ಯವಸ್ಥಾಪಕಿ ನಳಿನಿ ಹಾಜರಿದ್ದರು.
ಉಪಾಧ್ಯಕ್ಷ ಪದ್ಮನಾಭ ವಿ. ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಪಟ್ಟಿ ವಾಚಿಸಿದರು. ಸತೀಶ್ ಪಲ್ಲಮಜಲು ವಂದಿಸಿದರು, ಶಿವರಾಮ ಮರ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡಲಾಯಿತು.ಅಮೂಲ್ಯ ಸ್ವಸಹಾಯ ಗುಂಪುಗಳನ್ನು ಗೌರವಿಸಲಾಯಿತು.