Author: admin
ಬಂಟ್ವಾಳ: ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ಭಾನುವಾರ ಏರ್ಯಬೀಡುವಿನಲ್ಲಿ ನಡೆಯಿತು, ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳುಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತ್ ಗೌರವ ಕಾರ್ಯದರ್ಶಿ ವಿ.ಸು. ಭಟ್, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್‌ಕುಮಾರ್,ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ರತ್ನಾಕರ ಶೆಟ್ಟಿ ಮಂಡ್ಯಡ್ಕ ಗುತ್ತು ಕಲಾವಿದ ಸದಾಶಿವ ಡಿ. ತುಂಬೆ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಶಿಕ್ಷಕ ಜಯರಾಮ ಪಡ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಶವ ಎಚ್.ಕಟೀಲು ಸ್ವಾಗತಿಸಿ, ಏರ್ಯರ ನೆನಪುಗಳನ್ನು ಮೆಲುಕು ಹಾಕಿದರು. ನಲ್ಕೆಮಾರು ಶಾಲೆಯ ಶಿಕ್ಷಕ ಜಗನ್ನಾಥ ವಂದಿಸಿದರು. ಕಾರ್ಯಕ್ರಮ ಸಂಯೋಜಕ ದಾಮೋದರ್ ಮಾಸ್ತರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಬಲೇಶ್ವರ ಹೆಬ್ಬಾರ್ ಓದುವ ಹವ್ಯಾಸ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಚಿತ್ರ…
ಬಂಟ್ವಾಳ: ವೆಲಂಕಣಿ ಮಾತೆ ದೇವಾಲ ಫರ್ಲಾ, ಮಹಿಳಾ ಸಂಘಟನೆ ಫರ್ಲಾ ಘಟಕ, ಮತ್ತು ಸ್ತ್ರೀ ಆಯೋಗ ಫರ್ಲಾ ಇವರ ಸಹಭಾಗಿತ್ವದಲ್ಲಿ ಹಿರಿಯರ ದಿನ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮ ಭಾನುವಾರ ನಡೆಯಿತು. ಚರ್ಚ್ ಧರ್ಮಗುರು ಅತೀ ವಂದನೀಯ ತಿಯೊದೊರಾ ಡಿ ಕ್ಹುನರವರ ಮುಂದಾಳತ್ವದಲ್ಲಿ ಬಲಿ ಪೂಜೆ ನಡೆಯಿತು.. ಚರ್ಚ್ ನ ಸಭಭವನದಲ್ಲಿ ಸಂಘಟನೆಯ ಸ್ತ್ರೀಯರಿಗಾಗಿ ಗಿಡಮೂಲಿಕೆ ಆಯುರ್ವೆದ ಸಸ್ಯಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅತೀ ವಂದನೀಯ ಫಾ.ಮಾರ್ಕ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತೀ ವಂದನೀಯ ಫಾ.ಗಿಲ್ಬರ್ಟ್ ಮಸ್ಕರೇನ್ಹಸ್, ಸಂಪನ್ಮೂಲ ವ್ಯಕ್ತಿಯಾಗಿ ಭಗಿನಿ ಆಗ್ನೇಸ್ ಫ್ರ್ಯಾಂಕ್ (ಬೆಥನಿ) ಭಾಗವಹಿಸಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಧ್ಯಾಕ್ಷ ನವಿನ್ ಮಿನೇಜಸ್, ಕಾರ್ಯದರ್ಶಿ ಹಿಲ್ಡಾ ಪಿರೇರಾ, ಆಯೋಗ ಸಂಯೋಜಕಿ ಸುನಿತಾ ರೊಡ್ರಿಗಸ್, ಹಿರಿಯರಾದ ಲಿಯೊ ಮಿನೇಜಸ್, ಸಂಘಟನೆ ಅಧ್ಯಕ್ಷೆ ಐರಿನ್ ಯಂ. ಡಿಸೋಜ, ಕಾರ್ಯದರ್ಶಿ ಜೋಯ್ಸ್ ಡಿಸೋಜಾ ಉಪಸ್ಥಿತಿದ್ದರು. ಸುನಿತಾ ಬ್ಯಾಪ್ಟಿಸ್ಟ್, ಜ್ಯೋತಿ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘಟನೆಯ ಸದಸ್ಯರು ತಾವೇ ತಯಾರಿಸಿದ ಮಳೆಗಾಲದ…
ಮಂಗಳೂರು: ಕರ್ನಾಟಕ ಅಮೆಚೂರು ಜೂಡೋ ಅಸೋಸಿಯೇಷನ್ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಅಮೆಚೂರು ಜೂಡೋ ಅಸೋಷಿಯೇಷನ್ ಸಹಯೋಗದಲ್ಲಿ ಬಾಲಕ, ಬಾಲಕಿಯರಿಗಾಗಿ ನಡೆದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಜೂಡೋ ಪಂದ್ಯಾಟದ ಮಿನಿ ಕಿಡ್ಸ್ ವಿಭಾಗದಲ್ಲಿ ಮಂಗಳೂರಿನ ವಿಭಾ ಕಂಚಿನ ಪದಕ ಗೆದ್ದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಳಗಾವಿಯ ಗಾಂಧಿ ಭವನದಲ್ಲಿ ಜುಲೈ 25 ರಿಂದ 27ರವರೆಗೆ ಜೂಡೋ ಪಂದ್ಯಾಟ ನಡೆದಿದೆ. ಈಕೆ ಎಸ್‌ಇಎಫ್ಎಲ್‌ಸಿ ವಿದ್ಯಾಸಂಸ್ಥೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದು ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ನಂದಾದೀಪಾ ಅಪಾರ್ಟ್‌ಮೆಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬಂಟ್ವಾಳ: ಕರ್ನಾಟಕ ಅಮೆಚೂರು ಜೂಡೋ ಅಸೋಸಿಯೇಷನ್ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಅಮೆಚೂರು ಜೂಡೋ ಅಸೋಷಿಯೇಷನ್ ಸಹಯೋಗದಲ್ಲಿ ಬಾಲಕ, ಬಾಲಕಿಯರಿಗಾಗಿ ನಡೆದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಜೂಡೋ ಪಂಟ್ಯಾಟದಲ್ಲಿ ಯಶ್ವಿನಿ ಬೆಳ್ಳಿ ಪದಕ ಹಾಗೂ ಹಂಸಿಕಾ ಕಂಚಿನ ಪದಕವನ್ನು ಗೆದ್ದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಳಗಾವಿಯ ಗಾಂಧಿ ಭವನದಲ್ಲಿ ಜುಲೈ 25 ರಿಂದ 27ರವರೆಗೆ ಜೂಡೋ ಪಂಟ್ಯಾಟ ನಡೆದಿದ್ದು ಬಹುಮಾನ ವಿಜೇತ ಇಬ್ಬರೂ ವಿದ್ಯಾರ್ಥಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ತರಬೇತಿ ನೀಡಿದ್ದಾರೆ.
ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಜಯಪ್ರಕಾಶ್ ಜೆ ಎಸ್ ಜಕ್ರಿಬೆಟ್ಟು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಜೊತೆ ಕಾರ್ಯದರ್ಶಿಯಾಗಿ ಆನಂದ್ ಸಾಲಿಯಾನ್ ಶಂಭೂರು ಕೋಶಾಧಿಕಾರಿಯಾಗಿ ಸುನೀಲ್ ಕುಂದರ್ ಮೊಡಂಕಾಪು ಲೆಕ್ಕ ಪರಿಶೋಧಕರಾಗಿ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ, ಮಾಜಿ ಅಧ್ಯಕ್ಷರಾದ ಕೆ. ಹರಿಕೃಷ್ಣ ಬಂಟ್ವಾಳ್, ರಾಮಪ್ಪ ಪೂಜಾರಿ ಮಾರ್ನಬೈಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೀರೇಂದ್ರ ಅಮೀನ್ ವಗ್ಗ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಸತೀಶ್ ಬಿ. ಮಿತ್ತಬೈಲ್, ರಮೇಶ್ ತುಂಬೆ, ಗೋಪಾಲ್ ಪೂಜಾರಿ ಕಣೆಜಾಲು, ಬೇಬಿ ಕುಂದರ್ ಅಜ್ಜಿಬೆಟ್ಟು, ಲೋಕೇಶ್ ಕೋಟ್ಯಾನ್ ಎಕ್ಕುಡೇಲ್, ರಾಮಚಂದ್ರ ಸುವರ್ಣ ತುಂಬೆ, ಗಣೇಶ್ ಪೂಜಾರಿ ಪೂಂಜಾರೆಕೋಡಿ, ಹರೀಶ್ ಕೋಟ್ಯಾನ್ ಕುದನೆ, ರಾಜೇಶ್ ಸುವರ್ಣ ರಾಜಲಕ್ಷ್ಮಿ, ಪ್ರೇಮನಾಥ್…
ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆದ ಪಂಚಾರತಿ ಸೇವೆ ಯಶಸ್ವಿಯಾಗಿ ಸಮಾಪನಗೊಂಡಿತು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ ಕಲಿಯುಗದಲ್ಲಿ ಸಮಸ್ಯೆಗಳು ಸಾಮಾನ್ಯ. ಅವುಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕಾದುದು ನಮ್ಮ ಧರ್ಮ. ನಮಗೆ ಈ ಮಾನವ ಧರ್ಮವು ದೊರಕಿರುವುದು ಪೂರ್ವ ಜನ್ಮದ ಪುಣ್ಯ. ನಾವು ಮಾಡುತ್ತಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ವ ಜನ್ಮದ ಪುಣ್ಯದ ಕಾರ್ಯದಲ್ಲಿ ನಿರ್ಧರಿತ ವಾಗಿದೆ. ಅಯ್ಯಪ್ಪ ಮಂದಿರಕ್ಕೆ ಜಾಗ ಖರೀದಿ ಮಾಡುವ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದರು. ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಕುಕ್ಕಾಜೆ ಮಾತನಾಡಿ ಪಂಚಾರತಿ ಸೇವೆಯ ಪರಿಕಲ್ಪನೆಯೇ ಅತ್ಯಂತ ವಿಶಿಷ್ಠವಾದುದು. 18 ಗುರುವಾರದ ಪಂಚಾರತಿ ಸೇವೆಯನ್ನು ಭಕ್ತರಿಗಾಗಿ ಈ ಮಂದಿರದಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಅದು ಈ ಮಂದಿರದ ವಿಶೇಷ ಸೇವೆಯಾಗಿ ಮುಂದುವರಿಯಬೇಕು ಎಂದು ಆಶಿಸಿದರು ಪಂಚಾರತಿ…
ಬಂಟ್ವಾಳ: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಹಾಗೂ ರಕ್ಷಕ ಶಿಕ್ಷಕ ಸಂಘ ದ ಆಶ್ರಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಹಳೇ ವಿದ್ಯಾರ್ಥಿ ಗಳಿಗೆ, ಪೋಷಕರಿಗೆ ಸಿಬ್ಬಂದಿ ವರ್ಗದವರಿಗೆ ಕೆಸರ್ಡ್ ಒಂಜಿ ದಿನ ಕೆಸರು ಗದ್ದೆ ಕ್ರೀಡಾಕೂಟ ಸ್ಪರ್ಶ ಕಲಾ ಮಂದಿರದ ಗದ್ದೆಯಲ್ಲಿ ನಡೆಯಿತು. ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ಸೇವಾ ಸಮಿತಿ ಅಧ್ಯಕ್ಷ ರಾದ ವಿಶ್ವನಾಥ್ ಬಿ. ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಸಂಜೀವ ಪೂಜಾರಿ ಗುರುಕೃಪ ಇವರು ತೆಂಗಿನ ಹೂ ಅರಳಿಸಿ ಕ್ರೀಡಾ ಕೂಟ ಕ್ಕೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಸುನೀಲ್ ಆಚಾರ್ಯ ಅಪೂರ್ವ ಜ್ಯುವೆಲ್ಲರ್ಸ್ ಬಿ ಸಿ ರೋಡ್ ಗದ್ದೆಗೆ ಹಾಲು ಹಾಕುವ ಮುಖೇನ ಕ್ರೀಡಾ ಕೂಟಕ್ಕೆ ಯಶಸ್ಸನ್ನು ಕೋರಿದರು.ಗೌರವ ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಮ್ಯಾಥ್ಯೂ ಫ್ರಾನ್ಸಿಸ್ ಡಿ ಕುನ್ಹಾ , ಸವಿತಾ ಅರುಣ್ ಪ್ರಕಾಶ್ ಮೊಡoಕಾಪು, ಅಭಿಲಾಶ್ ಭಟ್ , ಜ್ಞಾನೇಶ್ ರಾವ್,ರಕ್ಷಕ ಶಿಕ್ಷಕ ಸಂಘದ…
ಬಂಟ್ವಾಳ: ಮಂಗಳೂರಿನ ವಾಮಂಜೂರ್ ಚರ್ಚ್ ಹಾಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ನಾಲ್ಕು ಕಂದಾಯ ಜಿಲ್ಲೆಯೆಗನ್ನೊಳಗೊಂಡ ಲಯನ್ಸ್ ಜಿಲ್ಲೆ 317ಡಿ ಇದರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಪ್ರತಿಷ್ಠಿತ ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ “ತೃತೀಯ ಅತ್ಯುತ್ತಮ ಕ್ಲಬ್ ಪ್ರಶಸ್ತಿ” ಲಭಿಸಿರುತ್ತದೆ. ವರ್ಷವಿಡೀ ಸಂಯೋಜಿಸಿದ ಆಡಳಿತಾತ್ಮಕ ಕಾರ್ಯಕ್ರಮಗಳು, ನಿರಂತರ ಸೇವಾ ಕಾರ್ಯಕ್ರಮಗಳು, ದೇಣಿಗೆಗಳು, ಶಾಶ್ವತ ಯೋಜನೆಗಳು, ಸಾರ್ವಜನಿಕ ಸಂಪರ್ಕ ಜನಸ್ನೇಹಿ ಕಾರ್ಯಕ್ರಮಗಳ ಸಂಯೋಜನೆಯಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಲಯನ್ಸ್ ಜಿಲ್ಲೆಯ ರಾಜ್ಯಪಾಲರಾದ ಲಯನ್ ಭಾರತಿ ಬಿ ಎಂ ಪ್ರಶಸ್ತಿ ನೀಡಿದ್ದು, ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ, ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ ಮತ್ತು ಕ್ಲಬ್ ಸದಸ್ಯರುಗಳು ಜತೆಯಾಗಿ ಈ ಗೌರವ ಸ್ವೀಕರಿಸಿದರು. ಲಯನ್ಸ್ ಜಿಲ್ಲೆಯ ಪೂರ್ವ ರಾಜ್ಯಪಾಲರಾದ ವಸಂತ ಕುಮಾರ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಪೂಜಾರಿ, ಸಂಪುಟ ಸದಸ್ಯರಾದ ಜಗದೀಶ್ ಎಡಪಡಿತ್ತಾಯ, ನಿಯೋಜಿತ ಅಧ್ಯಕ್ಷರಾದ ರೋಹಿತಾಶ್ವ , ನಿಯೋಜಿತ ಕೋಶಾಧಿಕಾರಿ ರಾಮಕೃಷ್ಣ ರಾವ್, ಸದಸ್ಯರುಗಳಾದ ಮುಕುಂದ್ ಪ್ರಭು,…
ಬಂಟ್ವಾಳ: ತರವಾಡು ಮನೆಗಳಲ್ಲಿ ಕುಟುಂಬಿಕರ ಜೊತೆ ವೈವಿಧ್ಯಮಯ ಮನರಂಜನೆಯ ಆಟಗಳು ನಡೆಯುವುದರಿಂದ ಯುವಕ ಯುವತಿಯರು ಮತ್ತು ಮಕ್ಕಳಲ್ಲಿ ತರವಾಡು ಮನೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಎಂದು ತಾರಾನಾಥ ಬಿ.ಸಿ.ರೋಡು ಹೇಳಿದರು. ಕುಲಾಲ್ ಬಂಗೇರಾ ಕುಟುಂಬದ ತರವಾಡು ಮನೆ ಬೊಳ್ಮಾ ಇಲ್ಲಿ ನಡೆದ ಕುಟುಂಬಿಕರ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕುಟುಂಬದ ಗುರಿಕಾರ ಹರೀಶ್ ಕೊಡ್ಡೆ ಉದ್ಘಾಟಿಸಿದರು. ಕುಟುಂಬದ ಹಿರಿಯರಾದ ರಾಘವ್ ವಿಟ್ಲ, ಪದ್ಮನಾಭ ಉರ್ವ, ಸೋಮನಾಥ ಓರ್ಕಡಿ, ದೇಜಪ್ಪ ಬಸ್ರಾ,ಉಪಸ್ಥಿತರಿದ್ದರು ಉಪಾಧ್ಯಕ್ಷರಾದ ನವೀನ್ ಸ್ವಾಗತಿಸಿ ಅಕ್ಷಯ್ ವಂದಿಸಿ ಕಾರ್ಯದರ್ಶಿ ರವೀನಾ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ: ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ ಇದರ ಬಂಟ್ವಾಳ ಘಟಕದ 8ನೇ ವಾರ್ಷಿಕ ಮಹಸಭೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ಮಾತನಾಡಿ ಸಂಘ ಗಟ್ಟಿಯಾಗಬೇಕು, ಸಂಘಟನೆಯ ಜೊತೆ ಇದ್ದುಕೊಂಡು ಉದ್ಯಮ ಮಾಡಿದಾಗ ಸಂಘಟನೆಯೊಂದಿಗೆ ನಮಗೂ ಬಲ ಬರುತ್ತದೆ . ಸಂಘದ ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗಾಗಿ ಸಹಕರಿಸುವಂತೆ ತಿಳಿಸಿದರು. ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಕ್ತದಾನ ಶಿಬಿರದಲ್ಲಿ ಸಂಘದ ಸದಸ್ಯರು ಸೇರಿದಂತೆ ಮಹಿಳೆಯರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಶಾಮಿಯಾನ ಮಾಲಕರ ಸಂಘವೂ ಸದೃಡವಾಗಿದ್ದು ಜಿಲ್ಲಾಧ್ಯಕ್ಷರ ಕಾರ್ಯ ವೈಖರಿ ತೃಪ್ತಿ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಶಾಮಿಯಾನ ಮಾಲಕರಾದ ಅಬ್ದುಲ್ ಕರೀಂ, ಸುರೇಶ್ ಪೂಜಾರಿ, ತಿಮ್ಮಪ್ಪ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ…








