
ಬಂಟ್ವಾಳ: ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಇದರ ನೂತನ ಸ್ಥಳಾಂತರಿತ ಕೇಂದ್ರ ಕಚೇರಿಯು ಸೆ.೫ರಂದು ಶುಕ್ರವಾರ ಬಿ.ಸಿ.ರೋಡಿನ ಕೃಷಿಕ ಸಮಾಜದ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಕೇಂದ್ರ ಕಚೇರಿ ಉದ್ಘಾಟಿಸುವರು. ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭದ್ರತಾ ಕೋಶ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ದ.ಕ.ಜಿಲ್ಲಾ ಸಹಕಾರ ಸಂಗಗಳ ಉಪನಿಬಂಧಕ ಎಚ್.ಎನ್. ರಮೇಶ್, ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸುಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಭಾಗವಹಿಸುವರು.

ಮೂರ್ತೆದಾರರ ಸಹಕಾರಿ ಮಹಾಮಂಡಲಕ್ಕೆ 80 ವರ್ಷಗಳ ಇತಿಹಾಸವಿದ್ದು ವರದಿ ಸಾಲಿನಲ್ಲಿ 30 ಕೋಟಿ ವ್ಯವಹಾರ ನಡೆಸಿ 9 ಕೋಟಿ ರೂ. ಠೇವಣಿ ಹೊಂದಿ ಒಟ್ಟು 5,19,60,723 ರೂಪಾಯಿ ಸಾಲವನ್ನು ನೀಡಿದೆ.31 ಮೂರ್ತೆದಾರರ ಸಹಕಾರಿ ಸಂಘಗಳಿಗೆ ಮಾತೃಸ್ಥಾನದಲ್ಲಿರುವ ಮೂರ್ತೆದಾರರ ಮಹಾಮಂಡಲದ ಪ್ರಸ್ತುತ ಕಾರ್ಯವ್ಯಾಪ್ತಿಯು ದ.ಕ. ಜಿಲ್ಲೆಗೆ ಜೀಮಿತಗೊಂಡಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಹೊಸ ಶಾಖೆಗಳನ್ನು ತೆರೆದು ಸೇವೆ ಸಲ್ಲಿಸುವ ಯೋಜನೆ ಇದೆ. ಸಂಘದ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ, ನಿರ್ದೇಶಕರಾಗಿ ವಿಜಯ್ ಕುಮಾರ್ ಸೊರಕೆ, ಆರ್.ಸಿ. ನಾರಾಯಣ್, ಪುರುಷ ಎನ್.ಸಾಲ್ಯಾನ್, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ವಿಶ್ವನಾಥ ಪೂಜಾರಿ ಪಂಜ, ಬೇಬಿ ಕುಂದರ್, ವಿಶ್ವನಾಥ ಬಿ., ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಪೂಜಾರಿ, ಗಣೇಶ್ ಪೂಜಾರಿ, ಉಷಾ ಅಂಚನ್, ಶೈಲಜಾ ಕೆ., ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕಿಶೋರ್ ಕುಮಾರ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
Advertisement







