
ಸಜೀಪ: ಇಲ್ಲಿನ ಸಜೀಪಮುನ್ನೂರು ಗ್ರಾಮದ ಮರ್ತಾಜೆ ಶ್ರೀ ಮಲರಾಯ ಗ್ರಾಮ ಸಮಿತಿ ವತಿಯಿಂದ ಮರ್ತಾಜೆದ ಮಣ್ಣ್ ಡ್ ಕೆಸರ್ದ ಗೊಬ್ಬು ಕಾರ್ಯಕ್ರಮ ಸೆ.7 ರಂದು ಭಾನುವಾರ ಬೆಳಿಗ್ಗೆ 8.30 ರಿಂದ ಮರ್ತಾಜೆಯ ಮಲರಾಯ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಸಜೀಪ ಮುನ್ನೂರಿನ ತಂತ್ರಿ ಸೂರ್ಯನಾರಾಯಣ ಭಟ್ ಉದ್ಘಾಟಿಸುವರು, ಮಲರಾಯ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಕುಲಾಲ್ ಅಧ್ಯಕ್ಷತೆ ವಹಿಸುವರು, ಆಳ್ವರ ಪಾಲು ಗಡಿಪ್ರಧಾನರಾದ ದುಗ್ಗಪ್ಪ ಶೆಟ್ಟಿ ಯಾನೆ ಗಂಗಾಧರ್ ಭಂಡಾರಿ ಕೆಸರು ಗದ್ದೆ ಉದ್ಘಾಟಿಸುವರು. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement







