

ಬಂಟ್ವಾಳ: ಭಾರತ ಮಾತೆಗೆ ವಿಜಯದ ಸಿಂಧೂರವಿಟ್ಟ ಭಾರತ ದೇಶದ ಮಹಾ ಸೈನಿಕರ ಶ್ರೀರಕ್ಷೆಗಾಗಿ ಮತ್ತಷ್ಟು ವಿಜಯ ತಂದುಕೊಡುವಂತೆ, ಅಟ್ಟಹಾಸ ಮೆರೆದ ಜಿಹಾದೀ ದೇಶ ಪಾಕಿಸ್ತಾನದ ಶತ್ರುಗಳ ಸಂಹಾರಕ್ಕೆ ಮತ್ತು ಪಾಕಿಸ್ತಾನದ ಪರವಿರುವ ದೇಶವಿರೋಧಿಗಳನ್ನ ಸಂಪೂರ್ಣವಾಗಿ ನಾಶಗೊಳಿಸುವಂತೆ ಅಮ್ಟೂರು ಬಿಜೆಪಿ ಸಮಿತಿಯ ವತಿಯಿಂದ ಮೊಗರ್ನಾಡು ಸಾವಿರಸೀಮೆಯ ಒಡೆಯ ನಿಟಿಲಾಕ್ಷ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಸಂಪ್ರೀತ್ ಭಟ್ ಇವರು ವಿಶೇಷಪ್ರಾರ್ಥನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಪಕ್ಷದ ಹಿರಿಯ ನಾಯಕರಾದ ವಿಠಲ ಪ್ರಭು, ಪ್ರಮುಖರಾದ ಬಿ.ಎನ್. ಪ್ರಭಾಕರ ಶೆಟ್ಟಿ ಬೈದರಡ್ಕ, ಶೇಖರ್ ಕೊಟ್ಟಾರಿ, ಮಹಾಬಲ ಸಾಲಿಯಾನ್, ನವೀನ್ ಶೆಟ್ಟಿ ನೆಟ್ಲ, ನವೀನ್ಗಟ್ಟಿ ನೆಟ್ಲ, ಗುರುವಪ್ಪ ಗೌಡ ನೆಟ್ಲ, ಪ್ರೇಮ ಗುರುಪ್ರಸಾದ್, ಸಂದೀಪ್ ಶೆಟ್ಟಿ ಬೈದರಡ್ಕ, ಕೌಶಿಲ್ ಶೆಟ್ಟಿ ಬಾಳಿಕೆ, ಹರಿಣಾಕ್ಷಿ ನೆಟ್ಲ, ಪ್ರಶಾಂತ್ ನಾಯ್ಕ್ ನೆಟ್ಲ, ಕಿಶೋರ್ ಕಟ್ಟೆಮಾರ್, ದಿವಾಕರ ಪಡೀಲ್, ಅಮಿತ್ ಕಲ್ಲಡ್ಕ, ದೇವಕಿ ದಿವಾಕರ ಪೂಜಾರಿ, ಕಾರ್ತಿಕ್ಕುಲಾಲ್, ವಿಶ್ವನಾಥ್ ಕುಲಾಲ್, ತ್ರಿವೇಣಿ ದಿನೇಶ್ ಮತ್ತಿತರು ಕಾರ್ಯಕರ್ತರು ಉಪಸ್ಥಿತರಿದ್ದರು
Advertisement







