
ಬಂಟ್ವಾಳ: ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ , ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಆಶ್ರಯದಲ್ಲಿಅಂತರಾಷ್ಟ್ರೀಯ ನರ್ಸಸ್ ಡೇ ಯನ್ನು ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಶನುವಾರ ಸಂಜೆಆಚರಿಸಲಾಯಿತು.
ಸಂಸ್ಥಾಪಕರಾದ ಫಾದರ್ ಮುಲ್ಲರ್ ಹಾಗೂ ಫ್ಲೋರೆನ್ಸ್ ನೈಂಟಿಗೇಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಎಲೋಸಿಯಷ್ ಕುವೆಲ್ಲೋ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನ ಅತ್ಯಂತ ಮೌಲ್ಯಯುತವಾದುದು, ದೇವರು ನಮಗೆ ಜೀವನ ನೀಡಿದ್ದಾನೆ, ಈ ಜೀವನವನ್ನುಅತ್ಯುತ್ತಮವಾಗಿ ಜೀವಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು. ಮತ್ತೊಬ್ಬರನ್ನು ಪ್ರೀತಿಸಿ ಗೌರವಿಸಿದಾಗ ದೇವರು ನಮ್ಮನ್ನುಆಶೀರ್ವದಿಸುತ್ತಾನೆ, ಅಂತೆಯೇ ನರ್ಸ್ ವೃತ್ತಿ ಅತ್ಯಂತ ಪವಿತ್ರವಾದುದು, ಪ್ರತೀ ರೋಗಿಗಳನ್ನು ಪೀತಿಸಿ ಅವರನ್ನು ಉತ್ತಮವಾಗಿಆರೈಕೆ ಮಾಡುವ ಸಂಕಲ್ಪ ನರ್ಸ್ ಗಳದ್ದಾಗ ಬೇಕು, ಆಗ ದೇವರು ನಮ್ಮನ್ನು ಅನುಗ್ರಹಿಸುತ್ತಾನೆ ಎಂದರು

ಸಂಸ್ಥೆಯ ಪ್ರಾಂಶುಪಾಲರು ಹಾಗೂ ನರ್ಸಿಂಗ್ ಸೂಪರಿಂಟೆಂಡ್ ಭಗಿನಿ ಡಾ. ಜೂಡಿ ಮಾತನಾಡಿ ನರ್ಸಿಂಗ್ ಕೇವಲ ವೃತ್ತಿಯಲ್ಲ, ಅದೊಂದು ಸೇವೆ. ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ನರ್ಸ್ ಗಳ ಪಾತ್ರ ಮಹತ್ವವಾದುದು ಎಂದ ಅವರು ನರ್ಸಿಂಗ್ ದಿನದ ಮಹತ್ವತಿಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಮೆಡಿಕಲ್ ಸೂಪರಿಂಟೆಂಡೆಟ್ ಡಾ.ಕಿರಣ್ ಶೆಟ್ಟಿಉಪಸ್ಥಿತರಿದ್ದರು.
ರಿಲಿಶಾ ಸಿಕ್ವೇರಾ ವಿವಿಧ ಮನೋರಂಜನಾ ಆಟಗಳನ್ನು ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಿಲ್ವಿಯಾ ನಿಶಾ ಲೋಬೋ ಸ್ವಾಗತಿಸಿದರು, ರೇಷ್ಮಾ ಫರ್ನಾಂಡೀಸ್ ವಂದಿಸಿದರು, ವಿನೂತ ವೇಗಸ್ ಕಾರ್ಯಕ್ರಮ ನಿರೂಪಿಸಿದರು.
Advertisement







