
ಬಂಟ್ವಾಳ: ಮೆಲ್ಕಾರ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದರ ಕಕ್ಯಪದವುಶಾಖೆಯು ಕಕ್ಯಪದವಿನ ಬಿತ್ತ ಕಾಂಪ್ಲೆಕ್ಸ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು ಇದರ ಉದ್ಘಾಟನಾ ಸಮಾರಂಭ ಭಾನುವಾರನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಸ್ಥಳಾಂತರಿತ ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕೇವಲ15 ವರ್ಷದ ಅವಧಿಯಲ್ಲಿ 6 ಶಾಖೆ ಮಾಡುವುದು ದೊಡ್ಡ ಸಾಧನೆ. ಸೊಸೈಟಿ 190 ಕೋಟಿ ವ್ಯವಹಾರ ನಡೆಸಿ ಜನಸಾಮಾನ್ಯರಿಗೆಸೇವೆ ಸಲ್ಲಿಸಿದೆ. 26 ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸಿ ಕೊಟ್ಟಿದೆ ಎಂದು ತಿಳಿಸಿದರು. ದ.ಕ. ಜಿಲ್ಲೆಯಲ್ಲಿ ೪ ರಾಷ್ಟ್ರೀಕೃತ ಬ್ಯಾಂಕ್ಗಳು ಆರಂಭವಾಗಿದೆ. ಸಹಕಾರಿ ಬ್ಯಾಂಕ್ಗಳು ಯಶಸ್ವಿಯಾಗಿ ನಮ್ಮ ಜಿಲ್ಲೆಯಲ್ಲಿ ಮುನ್ನಡೆಯುತಿದ್ದು ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ವಿಶ್ವಾಸದಲ್ಲಿ ನಡೆಯುತ್ತಿದ್ದು ಶ್ರೀಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಎಲ್ಲಾ ಕಚೇರಿಗಳು ಸ್ವಂತ ಕಟ್ಟಡದಲ್ಲಿ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.


ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ, ವೈದ್ಯ ಡಾ. ಸತ್ಯಶಂಕರ್ ಶೆಟ್ಟಿ ಸಭಾ ಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ ಮಾತನಾಡಿ ಗ್ರಾಹಕರಿಗೆ ಒಳಿತಾಗಬೇಕು ಎನ್ನುವ ಸದುದ್ದೇಶ ಇದ್ದಾಗ ಅಂತಹ ಸಂಸ್ಥೆ ಬೆಳೆಯಲು ಸಾಧ್ಯವಿದೆ. ಕಕ್ಯಪದವಿನಂತ ಗ್ರಾಮೀಣ ಪ್ರದೇಶದ ಶ್ರಮಜೀವಿಗಳಿಗೆ ನಗು ಮೊಗದ ಸೇವೆ ಈ ಸಹಕಾರಿ ಸಂಘದಿಂದ ಸಿಗಲಿ ಎಂದು ಶುಭಹಾರೈಸಿದರು.
ಭದ್ರತಾ ಕೊಠಡಿಯನ್ನು ಉದ್ಯಮಿ ರಾಜೇಂದ್ರ ಕಕ್ಯಪದವು ಉದ್ಘಾಟಿಸಿದರು. ಅವರು ಮಾತನಾಡಿ ಸೊಸೈಟಿಯ ಅಭಿವೃದ್ಧಿಯಲ್ಲಿಸಿಬ್ಬಂದಿಗಳ ಪಾತ್ರ ಮುಖ್ಯವಾದುದು. ಸಿಬ್ಬಂದಿಗಳು ನಗುಮೊಗದ ಸೇವೆ ನೀಡಿದಾಗ ಗ್ರಾಹಕರು ಸೊಸೈಟಿಯತ್ತಆಕರ್ಷಿತರಾಗುತ್ತಾರೆ ಎಂದರು.

ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿಕುಗ್ರಾಮವಾಗಿದ್ದ ಉಳಿ ಗ್ರಾಮ ಇಂದು ತಿಳಿಯಾಗಿದೆ. ದೃಢ ನಿರ್ಧಾರ ಇದ್ದಾಗ ಬದಲಾವಣೆ ತರಲು ಸಾಧ್ಯವಿದೆ ಎನ್ನುವುದು ಉಳಿಗ್ರಾಮದಲ್ಲಿ ಕಾಣಲು ಸಾಧ್ಯವಿದೆ. ಬಡತನ ಎಂದಿಗೂ ಶಾಪವಲ್ಲ. ದೇವರು ವರ ಹಾಗೂ ಶಾಪವನ್ನು ಎಂದಿಗೂ ನೀಡುವುದಿಲ್ಲ. ಆದರೆ ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಆತ ಬಡವಾಗಿ ಉಳಿಯಲು ಸಾಧ್ಯವಿಲ್ಲ. ಇತಿಹಾಸಅಧ್ಯಯನ ಮಾಡದೆ ಇದ್ದಾಗ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ದೇವರ ಸೃಷ್ಟಿಯಲ್ಲಿ ಜಾತಿ ಮತ, ಧರ್ಮದಭೇದವಿಲ್ಲ. ನಮ್ಮ ಸ್ವಾರ್ಥಕ್ಕಾಗಿ ನಾವು ಮಾಡಿ ಕೊಂಡಿದ್ದೇವೆ. ಸ್ವರ್ಗ, ನರಕ ಇಲ್ಲೇ ಇದೆ. ದುಡಿಯುವವನ ಮನೆಯಲ್ಲಿ ಲಕ್ಷ್ಮೀ ಒಲಿದು ಬರುತ್ತಾಳೆ, ಕಷ್ಟ ಪಡದವನ ಮನೆಗೆ ದರಿದ್ರ ಲಕ್ಷ್ಮೀ ಬರುತ್ತಾಳೆ ಎಂದು ತಿಳಿಸಿದರು.
ಕಕ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಉಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ಮೈರಾ, ಉಳಿ ಸಹಕಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ
ಚೆನ್ನಪ್ಪ ಸಾಲ್ಯಾನ್ ಅಜೋಡಿ, ವಕೀಲ ಚಿದಾನಂದ ಕಡೇಶ್ವಾಲ್ಯ ಕಟ್ಟಡ ಮಾಲಕ ವಿಶ್ವನಾಥ ಸಾಲ್ಯಾನ್ ಬಿತ್ತ, ಉಳಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಕೊರಡಿಂಗೇರಿ, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಲೆಕ್ಕಿಗಯಶೋಧರ ಗೌಡ ಅಗ್ಫಲ, , ಬಡಗ ಕಜೆಕಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಡೀಕಯ್ಯ ಬಂಗೇರ, ಸಲಹಾ ಸಮಿತಿ ಸದಸ್ಯ ಅಣ್ಣಿ ಯಾನೆನೋಣಯ್ಯ ಪೂಜಾರಿ ಚೀಮುಲ್ಲು, ಪ್ರಗತಿಪರ ಕೃಷಿಕ ಚಂದ್ರ ಯಾನೆ ಕೊರಗಪ್ಪ ಪೂಜಾರಿ ಜಾರಿಗೆ ಉಪಸ್ಥಿತರಿದ್ದರು.
ನಿರ್ದೇಶಕರಾದ ಕೆ. ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಭುವನೇಶ್ ಪಚ್ಚಿನಡ್ಕ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಶೈಲೇಶ್ಪೂಜಾರಿ ಕುಚ್ಚಿಗುಡ್ಡೆ, ಹರೀಶ್ ಸಿ. ಎಚ್., ಲಕ್ಷ್ಮೀ ಪೆರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚರಣ್ ಕಂರ್ಬಡ್ಕ ಶಾಖಾ ವ್ಯವಸ್ಥಾಪಕಿಹರಿಣಾಕ್ಷಿ ಎಂ. ಉಪಸ್ಥಿತರಿದ್ದರು.
ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು, ನಿರ್ದೇಶಕ ರತ್ನಾಕರ ಪೂಜಾರಿ ನಾಡಾರು ವಂದಿಸಿದರು, ಪ್ರಕಾಶ್ ಕಾರ್ಯಕ್ರಮನಿರೂಪಿಸಿದರು
Advertisement







