ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯ ಮಾದರಿಯಾದುದು. ನಾವು ನೀಡಿದ ದೇಣಿಗೆ ಸೇವಾಂಜಲಿ ಸಂಸ್ಥೆಯ ಮೂಲಕ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಎಂದು ರೋಟರಿ ಕ್ಲಬ್ ಮೊಡಂಕಾಪುವಿನ ಮಾಜಿ ಅಧ್ಯಕ್ಷ ಡಾ. ಗೋವರ್ಧನ ರಾವ್ ಹೇಳಿದ್ದಾರೆ.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ದವಸಧಾನ್ಯ ವಿತರಿಸಿ ಮಾತನಾಡಿದರು. ಖಾಲಿ ಸ್ಥಳಗಳು ಇದ್ದಲ್ಲಿ ಗಿಡಗಳನ್ನು ನೆಡುವ ಮೂಲಕ ವಾತವರಣದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ಮಾಡೋಣ ಎಂದರು. ಸೇವಾಂಜಲಿ ಸಂಸ್ಥೆ ಇನ್ನಷ್ಟು ಬೆಳೆಯಲಿ, ಇದರ ಸೇವಾ ಕಾರ್ಯಗಳು ಇನಷ್ಟು ಜನರನ್ನು ತಲುಪಲಿ ಎಂದು ಶುಭ ಹಾರೈಸಿದರು. ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಕುಮಾರ್ ಆರೊಗ್ಯ ಮಾಹಿತಿ ನೀಡಿ ಕ್ಷಯ ರೋಗಿಗಳು ಮಾಸ್ಕ್ ಧರಿಸುವ ಬಗ್ಗೆ, ಕಫ ನಿರ್ವಹಣೆ ಬಗ್ಗೆ ತಿಳಿಸಿದರು
ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಅಲೆಕ್ಸಾಂಡರ್ ಲೋಬೋ ಮಾತನಾಡಿ ಕ್ಷಯ ರೋಗಿಗಳು ಪೌಷ್ಟಿಕ ಆಹಾರವನ್ನು ಸೇವಿಸಿದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೋಗದ ವೈರಸ್ಗಳು ನಾಶವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ
ಉಮಾ ಗೋವರ್ಧನ್, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಂಶೋಧನ ವಿದ್ಯಾರ್ಥಿ ಡಾ. ಮಹಮ್ಮದ್ ಪಾಷಾ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ದೇವಸ್ಯ ಬಾಲಕೃಷ್ಣ ರೈ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ,
ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. 24 ಮಂದಿ ಕ್ಷಯ ರೋಗಿಗಳಿಗೆ ಈ ದಿನ ಆಹಾರದ ಕಿಟ್ ವಿತರಿಸಲಾಯಿತು.
