ಬಂಟ್ವಾಳ: ಇಲ್ಲಿನ ತುಂಬೆಯ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ, ಶ್ರೀಶಾರದಾ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಅಂದಾಜು1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿಸ್ತೃತ ಕಟ್ಟಡ ನಿರ್ಮಾಣದ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮಭಾನುವಾರ ತುಂಬೆಯ ಶ್ರೀ ಶಾರದಾ ಪ್ರತಿಷ್ಠಾನದ ಸಭಾಂಗಣದದಲ್ಲಿ ನಡೆಯಿತು.
ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿಯವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತನಾಡಿಸಂಕಲ್ಪಿತ ವ್ಯವಸ್ಥೆಯಡಿ ಸಭಾಭವನ ನಿರ್ಮಾಣಕ್ಕೆ ಪ್ರತಿಷ್ಠಾನ ಹಾಗೂ ರಜತ ಮಹೋತ್ಸವ ಸಮಿತಿ ಸದಸ್ಯರು ಮುಂದಾಗಿದ್ದುಎಲ್ಲರೂ ವಿಸ್ತೃತ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಮಾಡಿದರು.
ಸಮಿತಿಯ ಕಾರ್ಯಧ್ಯಕ್ಷ ಅನಿಲ್ ಪಂಡಿತ್ ರೂ.10 ಲಕ್ಷ ನೀಡುವುದಾಗಿ ಘೋಷಿಸಿದರೆ ಅತಿಥಿಗಳಾಗಿ ಭಾಗವಹಿಸಿದ್ದಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ ಹಾಗೂ ಅಜಿತ್ ಚೌಟ ದೇವಸ್ಯ ತಮ್ಮಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು ಹಾಗೂ ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಾರ್ಯಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಕಾಶ್ಚಂದ್ರ ರೈ ದೇವಸ್ಯ, ರಾಮಚಂದ್ರ ಸುವರ್ಣ, ಜಗದೀಶ್ಪೂಜಾರಿ ಕುಮ್ಡೇಲು, ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಸಾಲ್ಯಾನ್ ತುಂಬೆ, ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ಸುವರ್ಣ ತುಂಬೆ
ಶ್ರೀ ಶಾರದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು,ಉಪಾಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದನ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕುಮ್ಡೇಲು, ಕೋಶಾಧಿಕಾರಿ ವಿನೋದ್ ಬೊಳ್ಳಾರಿ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ಕಜೆಕಂಡ, ಜಗದೀಶ್ ಕಡೆಗೋಳಿಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ ಸ್ವಾಗತಿಸಿದರು, ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವುಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು. ಸುಶಾಂತ್ ಬೊಳ್ಳಾರಿ ವಂದಿಸಿದರು.
ಸಂತೋಷ್ ಕುಮಾರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
