
ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಂಚಿಕೆ ಬಾಳಪಥ ಪುಸ್ತಕ ಬಿಡುಗಡೆ ಹಾಗೂ ಸಂಘದ ಮೂರು ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ ಬಂಟ್ವಾಳ ಬೈಪಾಸ್ ಜಂಕ್ಷನ್ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.

ಬಾಳಪಥ ಸ್ಮರಣ ಸಂಚಿಕೆಯನ್ನು ಬೆಂಗಳೂರಿನ ಸಹಕಾರಿ ಧುರೀಣ ಮೋಹನದೇವ ಆಳ್ವ ಬಿಡುಗಡೆಗೊಳಿಸಿ ಮಾತನಾಡಿ ಮೃದು ಸ್ವಭಾವದವರಾದ ತುಳುವರು ಮಾತೃ ಭಾಷೆಯನ್ನು ಪ್ರೀತಿಸುವ ಜೊತೆಗೆ ಎಲ್ಲಾ ಭಾಷೆಯನ್ನು ಗೌರವಿಸುವ ಮನೋಸ್ಥಿತಿಯನ್ನು ಹೊಂದಿದ್ದಾರೆ. ಸತ್ಯ ನಿಷ್ಠರಾಗಿದ್ದ ಅಮ್ಮೆಂಬಳ ಬಾಳಪ್ಪ ಅವರ ಸ್ಮರಣೆಯು ತುಳುವರ ಹೆಮ್ಮೆಯಾಗಿದ್ದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜನಸ್ನೇಹಿಗಳಾಗಬೇಕು ಎಂದರು.



ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ, ದ.ಕ. ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಿಎಸ್ಎಫ್ ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ಜನಾರ್ದನ ಬೊಂಡಾಲ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಬಾಳಪಥ ಪುಸ್ತಕದ ಪ್ರಧಾನ ಸಂಪಾದಕ, ಮಂಗಳೂರು ರಥಬೀದಿ ಸರಕಾರಿ ಪದವಿ ಕಾಲೇಜಿನ ಉಪಪ್ರಾಂಶುಪಾಲ ಡಾ. ದುಗ್ಗಪ್ಪ ಕಜೆಕಾರ್ ಪುಸ್ತಕದ ಕುರಿತು ಮಾತನಾಡಿದರು. ಸಂಘದ ನಿರ್ದೇಶಕ ಕಿರಣ್ ಅಟ್ಲೂರು ಸ್ವಾಗತಿಸಿದರು. ಪ್ರಧಾನ ವ್ಯ್ಸತಾಫಕ ಭೋಜ ಮೂಲ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.
Advertisement







