
ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ ಇದರ ಪ್ರೌಢಶಾಲಾ ವಿಭಾಗದ
2025-26 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಯೋತಿಯು ಕತ್ತಲೆಯನ್ನು ಹೊಡೆದೋಡಿಸಿ ಎಲ್ಲೆಡೆ ಬೆಳಕನ್ನು ಪಸರಿಸುವಂತೆ ನಮ್ಮ ಶಾಲೆಯ ಸಂಘಗಳು ವಿದ್ಯಾರ್ಥಿಗಳಲ್ಲಿ ಜ್ಞಾನಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಆಶಿಸಿದರು.
ಶಾಲೆಯ ಹಿರಿ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ವಿವಿಧ ಸಂಘಗಳನ್ನು ಉದ್ಘಾಟಿಸಿದರು.


ವಿಜ್ಞಾನ ಸಹಶಿಕ್ಷಕರಾದ ವೆಂಕಟರಮಣ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಸಂಘಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನವೀಯ ಮೌಲ್ಯಗಳಾದ ಶಿಸ್ತು ಸಂಯಮ ನಾಯಕತ್ವ ಸೃಜನಶೀಲತೆ ಪ್ರಾಯೋಗಿಕ ಮನೋಭಾವನೆಗಳು ಮತ್ತು ತಾರ್ಕಿಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬೆಳೆದುಬಂದು ಪರಿಪೂರ್ಣವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.


ಸಹ ಶಿಕ್ಷಕಿ ಹೇಮಾವತಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಸಹ ಶಿಕ್ಷಕರಾದ ಸುಲೋಚನಾ ನಿರೂಪಿಸಿ, ಗಣೇಶ್ ವಂದಿಸಿದರು.
.
Advertisement







