Author: admin

ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶ್ರಯದಲ್ಲಿ ಅಭಿಮಾನಿಗಳಿಂದ ಪರಿಸರವಾದಿ, ಸ್ವಚ್ಚತಾ ರಾಯಭಾರಿ ಹಿರಿಯರಾದ ಎ. ದಾಮೋದರ ಅವರ ಜನ್ಮದಿನದ ಸಂಭ್ರಮ ದಾಮೋದರ ಸತಾಭಿಷೇಕ ಕಾರ್ಯಕ್ರಮ ಸಂಚಯಗಿರಿಯ ಡಾ. ಎನ್. ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ನಡೆಯಿತು. ದೀಪಿಕಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ವಾರ್ ಅಭಿನಂದನಾ ಭಾಷಣ ಮಾಡಿ ಕೈಕಂಬ ಜನರಿಗೆ ದಿಕ್ಕುಗಳನ್ನು ಸೂಚಿಸುತ್ತದೆ. ಆದರೆ‌ ಇಂತಹ ಸರಿಯಾದ ಕೆಲಸಗಳನ್ನು ಮಾಡಿ ಎನ್ನುವ ದಿಕ್ಕನ್ನು ಸೂಚಿಸುವ ದಿಕ್ಸೂಚಿಯಾಗಿದ್ದವರು ದಾಮೋದರ್ ಎಂದು ತಿಳಿಸಿದರು. ಬಳಿಕ ದಾಮೋದರ್ ಅವರನ್ನು ಅಭಿಮಾನಿಗಳ ವತಿಯಿಂದ ಗೌರವಿಸಲಾಯಿತು. ಹಿರಿಯ ಆರೋಗ್ಯ ಸಹಾಯಕ ರತ್ನಪ್ರಸಾದ್ ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪರಿಸರವನ್ನು ಸ್ಬಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಯುವ ಸಮುದಾಯಕ್ಕೆ ಮಾದರಿ ಜೀವನ ನಡೆಸಿದವರು ದಾಮೋದರ್. ನಮಗೂ ಅವರ ಆದರ್ಶ ಪ್ರೇರಣೆಯಾಗಿದೆ ಎಂದರು. ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ದಾಮೋದರ್ ಅವರು ಆರೋಗ್ಯಯುತಾಗಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದರು.…

Read More

ಬಂಟ್ವಾಳ: ಕಲೆಯೆಂಬುದು ದೇವರ ವರ. ಕಲೆ ಸಾಂಸ್ಕೃತಿಕವಾಗಿ ಊರನ್ನು ಬೆಳಗುತ್ತದೆ. ಶಿಕ್ಷಣದ ಜೊತೆಗೆ ವಿವಿಧ ಕಲೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯವಿದೆ ಎಂದು ಪುತ್ತೂರು ವಿಶ್ವ ಕಲಾನಿಕೇತನ ಆರ್ಟ್ ಆಂಡ್ ಕಲ್ಚರಲ್ ಇನ್‌ಸ್ಟಿಟ್ಯೂಷನ್ ಇಲ್ಲಿನ ನೃತ್ಯಗುರು ಕರ್ನಾಟಕ ಕಲಾಶ್ರೀ ಪುರಸ್ಕೃತೆ ವಿದುಷಿ ನಯನ ವಿ.ರೈ ಕುದ್ಕಾಡಿ ಹೇಳಿದರು. ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದೊಂದಿಗೆ ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ನೃತ್ಯಧಾರಾ ಮತ್ತು ಯಕ್ಷಗಾನ ಹಾಸ್ಯ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನಕುಮಾರ್ ಸ್ಮರಣಾರ್ಥ ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭರತನಾಟ್ಯ ಕಲೆಗೆ ಅವಕಾಶಗಳೊಂದಿಗೆ ಪ್ರೋತ್ಸಾಹಗಳು ದೊರಕುತ್ತಿದ್ದು, ಸಾಂಸ್ಕೃತಿಕವಾಗಿ ನಮ್ಮ ಬೆಳವಣಿಗೆಗೆ ಇದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶುಭ ಹಾರೈಸಿದರು. ಕಲಾನಯನ ಪ್ರಶಸ್ತಿಯನ್ನು ಸಂಶೋಧಕ, ವಿಶ್ರಾಂತ ಪ್ರಾಧ್ಯಾಪಕ ಡಾ. ವೈ.ಉಮಾನಾಥ ಶೆಣೈ…

Read More

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದ ಶ್ರೀ ರಾಮ ಭಕ್ತಾಂಜನೇಯ ಮಂದಿರ ಇಲ್ಲಿ ಚೆಕ್ ಮೇಟ್ ಚೆಸ್ ತರಗತಿ ಶನಿವಾರ ಪ್ರಾರಂಭಗೊಂಡಿತು. ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ನಾ ಅಧ್ಯಕ್ಷ ಲೋಕನಾಥ ಶೆಟ್ಟಿ ಚೆಸ್ ತರಗತಿ ಉದ್ಘಾಟಿಸಿದರು. ಚೆಸ್ ತರಬೇತುದಾರರಾದ ವಜ್ರಾಕ್ಷಿ, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Read More

ಬಂಟ್ವಾಳ: ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಧಾರಾ ಮತ್ತು ಖ್ಯಾತ ಯಕ್ಷಗಾನ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನ ಕುಮಾರ್ ಸ್ಮರಣಾರ್ಥ ನೀಡುವ ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ನ.1ರಂದು ಶನಿವಾರ ಸಂಜೆ 3.30ರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ. ಸಂಜೆ 3.30ಕ್ಕೆ ದೀಪ ಪ್ರಜ್ವಲನೆ ನಡೆಯಲಿದೆ. 4 ಗಂಟೆಗೆ ನೃತ್ಯಧಾರ, 6ಕ್ಕೆ ಸಭಾಕಲಾಪ ನಡೆಯಲಿದೆ. ಪುತ್ತೂರಿನ ವಿಶ್ವ ಕಲಾನಿಕೇತನ ಆರ್ಟ್ಸ್ ಆಂಡ್ ಕಲ್ಚರಲ್ ಇನ್‌ಸ್ಟಿಟ್ಯೂಷನ್ ಇಲ್ಲಿನ ನೃತ್ಯ ಗುರು ವಿದೂಷಿ ನಯನ ವಿ. ರೈ ಕುದ್ಕಾಡಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಬೃಜೇಶ್ ಚೌಟ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ವಾಳ ಶ್ರೀ ತಿರುಮಲಕ ವೆಂಕಟರಮಣ ಸ್ವಾಮೀ ದೇವಸ್ಥಾನದ ಅಧ್ಯಕ್ಷ ಅಶೋಕ್ ಶೆಣೈ ಭಾಗವಹಿಸುವರು. ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ವೈ ಉಮಾನಾಥ ಶೆಣೈ ಅವರಿಗೆ ಕಲಾನಯನ ಪ್ರಶಸ್ತಿ ನೀಡಿ ಗೌರವಿಸಲಾಗುವುದು,…

Read More

ಬಂಟ್ವಾಳ: ಮೆಲ್ಕಾರ್ ಫ್ಲೈ ಓವರ್‌ನ ಮೇಲೆ ಕಾರೊಂದು ರಸ್ತೆ ವಿಭಾಜಕ್ಕಕೆ ಡಿಕ್ಕಿಯಾಗಿ ಉರುಳಿ ಬಿದ್ದು ಯುವಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜೋಲ್ತಡ್ಕ ನಿವಾಸಿ ಕರುಣಾಕರ ಗೌಡ ಹಾಗೂ ರೇವತಿ ದಂಪತಿ ಪುತ್ರ ಕಾರ್ತಿಕ್ ಗೌಡ (೨೩) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಫ್ಲೈ ಓವರ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿದೆ. ಬಳಿಕ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಕಾರ್ತಿಕ್ ಹಾಗೂ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕಾರ್ತಿಕ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ತಿಕ್ ಮಂಗಳೂರಿನಲ್ಲಿ ಉದ್ಯೋಗದ ಸಂದರ್ಶನಕ್ಕೆ ತೆರಳಿದ್ದು ಸಂದರ್ಶನ ಮುಗಿಸಿ ಉದ್ಯೋಗಕ್ಕೆ ಆಯ್ಕೆಯಾಗಿ ಸ್ನೇಹಿತರ ಜೊತೆ ವಾಪಾಸ್ಸು ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.

Read More

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ಬಂಟ್ವಾಳ ವಲಯ ರಜತ ಸಂಭ್ರಮದ ಪ್ರಯುಕ್ತ ತಾಲೂಕಿನ ಪೊಟೊಗ್ರಾಫ್ಸ್ ಸದಸ್ಯರಿಗೆ ಆಯೋಜಿಸಿದ ದಸರಾ ಸಂಭ್ರಮ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದಯಾನಂದ್ ಬಂಟ್ವಾಳ್, ದ್ವಿತೀಯ ನವೀನ್, ತೃತೀಯ ದೀಪಕ್ ನಾಯಕ್ ಗೆದ್ದುಕೊಂಡಿದ್ದಾರೆ.

Read More

ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇದರ ಆಶ್ರಯದಲ್ಲಿ ಅ.26 ರಿಂದ 27 ರವೆರೆಗೆ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟ 2025-26ರಲ್ಲಿ ಕಲ್ಲಡ್ಕ ಶ್ರೀ ರಾಮ‌ ವಿದ್ಯಾಕೇಂದ್ರದ ದ್ವಿತೀಯ ಪಿಯೂಸಿ ವಿದ್ಯಾರ್ಥಿ ಬೆವಜೆರ್ ಲಿಂಗ್ ದೋದ್ ಜೂಡೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮೂಲತ ಮೇಘಾಲಯದ ನಿವಾಸಿಯಾಗಿರುವ ಬೆವಜೆರ್ ಲಿಂಗ್ ದೋದ್, ಟೀನಾ ಲಿಂಗ್ ದೋದ್ ಅವರ ಪುತ್ರ. ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾನೆ.

Read More

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದ ಸರಕಾರಿ ಕ್ವಾರ್ಟರ್ಸ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಶ್ರೀ ಲಕ್ಷ್ಮೀ ಪೂಜೆ ವಿಜ್ರಂಭಣೆಯಿಂದ ನಡೆಯಿತು. ಮಂಗಳವಾರ ಬೆಳಿಗ್ಗೆ ಶ್ರೀ ಲಕ್ಷ್ಮೀ ಪೂಜೆ ನೆರವೇರಿದ್ದು ಸಂಸ್ಥೆಯ ಮಾಲಕ ಕಿಶೋರ್ ಕುಮಾರ್ ಆಚಾರ್ಯ, ಅವರ ಕುಟುಂಬ ಬಳಗ, ಹಿತೈಷಿಗಳು ಹಾಗೂ ಗ್ರಾಹಕರು ಈ ಸಂದರ್ಭ ಉಪಸ್ಥಿತರಿದ್ದು ಶುಭ ಹಾರೈಸಿದರು. ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ನವ ನವೀನ ಶೈಲಿಯ ಹಾಲ್ ಮಾರ್ಕ್ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ತಯಾರಿಸಿ ಕೊಡಲಾಗುವುದು. ಗ್ರಾಹಕರ ಮನಕ್ಕೊಪ್ಪುವ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾಗ್ರಿಗಳು ಇಲ್ಲಿ ಲಭ್ಯವಿದ್ದು ಕಳೆದ 27 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದೆ. 25 ವರ್ಷಗಳಿಂದ ಶ್ರೀ ಲಕ್ಷ್ಮೀ ಗೋಲ್ಡ್ ಗಿಫ್ಟ್ ಸ್ಕೀಂ ಮೂಲಕ ಪರಿಶುದ್ಧತೆಯ 916 ಹಾಲ್ ಮಾರ್ಕ್ ಚಿನ್ನಾಭರಣಗಳನ್ನು ತಯಾರಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.

Read More

ಬಂಟ್ವಾಳ: ತುಳುನಾಡಿನ ಶೈಲಿಯ ತಿಂಡಿ ತಿನಿಸುಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ಕೈಕಂಬದ ಪೊಳಲಿ ದ್ವಾರದ ಬಳಿಯಿರುವ ರಾಜಶ್ರೀ ಗ್ರಾಂಡ್ಯೂರ್ ನಲ್ಲಿರುವ ಸಾಯಿಲೀಲಾ ಶುದ್ದ ಸಸ್ಯಹಾರಿ ಹೋಟೇಲ್ ನಲ್ಲಿ ಶ್ರೀ ಲಕ್ಷ್ಮೀ ಪೂಜೆ ವಿಜೃಂಭಣೆಯಿಂದ ನಡೆಯಿತು. ಸಂಜೆ ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮೀ ಪೂಜೆ ನೆರೆವೇರಿದ್ದು ಹೊಟೇಲ್ ಮಾಲಕ ಸದಾನಂದ ಬಂಗೇರ, ಅವರ ಕುಟುಂಬ ವರ್ಗ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಬಳಿಕ ಖ್ಯಾತ ಗಾಯಕ ಕೆ.ಜೆ. ಏಸುದಾಸ್ ಅವರ ಶಿಷ್ಯ ವೆಂಕಟಕೃಷ್ಣ ಬಳಗದಿಂದ ನಡೆದ ಭಾವ ಭಕ್ತಿಗಾನ ವೈಭವ ನೆರೆದ ಪ್ರೇಕ್ಷಕರ ಮನ ಸೂರೆಗೊಳಿಸಿತು. ಸದಾನಂದ ಬಂಗೇರ ಅವರ ಮಾಲಕತ್ವದ ಹೊಟೇಲ್‌ ಸಾಯಿಲೀಲಾ ತುಳು ಚಿತ್ರನಟ ಭೋಜರಾಜ್ ವಾಮಂಜೂರು ಅವರಿಂದ ಉದ್ಘಾಟನೆಗೊಂಡು ಯಶಸ್ವಿ ಎಂಟು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಳುನಾಡು ಶೈಲಿಯ ಮನೆ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದ್ದು ಊರ ಪರವೂರ ಗ್ರಾಹಕರು ವಿಶೇಷ ತಿಂಡಿ, ತಿನಿಸು ಖಾದ್ಯಗಳನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಾರೆ. ತುಳುನಾಡಿನ…

Read More

ಬಂಟ್ವಾಳ: ಸಾಧನೆ ಮಾಡುವ ಮನಸಿದ್ದರೆ ಪ್ರಕೃತಿಯೇ ನಮಗೆ ಬೆಂಬಲವಾಗಿ ನಿಲ್ಲುತ್ತದೆ. ಸಮಸ್ಯೆಯನ್ನು ಮೀರಿ ನಿಲ್ಲುತ್ತೇವೆ ಎನ್ನವ ಛಲ ಇದ್ದಾಗ ಸಾಧನೆ ಮಾಡಲು ಸಾಧ್ಯ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕಿ ಯಶಸ್ವಿನಿ ಶೆಟ್ಟಿ ಹೇಳಿದರು. ಬಂಟರ ಸಂಘ ಬಂಟ್ವಾಳ ತಾಲೂಕು ಇದರ ವತಿಯಂದ ಅಲ್ ಕಾರ್ಗೋ ಲಾಜಿಸ್ಟಿಕ್ ಮುಂಬೈ ಇದರ ಅಧ್ಯಕ್ಷ ಡಾ. ಶಶಿಕಿರಣ್ ಶೆಟ್ಟಿ ಇವರ ಸಹಕಾರದೊಂದಿಗೆ ರಾಮಲ್ ಕಟ್ಟೆಯ ಬಂಟವಾಳ ಬಂಟರ ಭವನದಲ್ಲಿ ನಡೆದ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಕೊರತೆಯಿಂದಾಗಿ ನಾಗರಿಕ ಸೇವೆಯತ್ತ ಯುವ ಸಮುದಾಯ ಬರುತ್ತಿಲ್ಲ. ಇಚ್ಚಾಶಕ್ತಿ, ಅವಿರತ ಶ್ರಮ‌ ಇದ್ಸಾಗ ಇಂತಹ ಸರಕಾರಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬಂಟರ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಗಾರ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ವಿಶಾಲ್ ಹೆಗ್ಡೆ ಮಾತನಾಡಿ ನಿರಂತರ ಪ್ರಯತ್ನ ಇಲ್ಲದೆ ಯಾವುದೇ ಸಾಧನೆ ಮಾಡಲು…

Read More