
ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ಇದರ 2025-26ನೇ ಸಾಲಿನ ನೂತನ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಕೈಕಂಬದ ಸೂರ್ಯವಂಶ ಕಟ್ಟಡದ ಕೆ.ಎಲ್.ರಾವ್ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಕ್ಲಬ್ ಲೆಫ್ಟಿನೆಂಟ್ ಆಗಿ ಎಲಿಯಾಸ್ ಸ್ಯಾಂಕ್ತಿಸ್ಟ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ನೂತನ ಅಧ್ಯಕ್ಷರಾಗಿ ಕ್ಲಬ್ ನ ಪ್ರಥಮ ಮಹಿಳಾ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿಯಾಗಿ ಪಸನ್ನ ರಾವ್ ಅಧಿಕಾರ ಸ್ವೀಕರಿಸಿದರು.

ಬಳಿಕ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನಡೆಯಿತು. ಬಳಿಕ ಪ್ರಕಾಶ್ ಕಾರಂತ್ ಮಾತನಾಡಿ ರೋಟರಿ ಸದಸ್ಯರಿಗೆ ಜುಲೈ ತಿಂಗಳು ಹೊಸ ವರ್ಷವಿದ್ದಂತೆ. ಆ ತಿಂಗಳು ರೋಟರಿ ಸದಸ್ಯರಿಗೆ ವಿಶೇಷ ಚೈತನ್ಯ ನೀಡುತ್ತದೆ. ಒಳ್ಳೆಯದ್ದಕ್ಕಾಗಿ ಒಗ್ಗಟ್ಟಾಗಬೇಕು ಎನ್ನುವ ಅಂತರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಕೆಲಸ ನಿರ್ವಹಿಸಿ ಈ ವರ್ಷ ಡೈಮಂಡ್ ಪ್ಲಸ್ ಪುರಸ್ಕಾರವನ್ನು ಗೆಲ್ಲಬೇಕು ಎಂದರು.



ಕ್ಲಬ್ ಯಶಸ್ವಿಯಾಗಿ ಮುನ್ನಡೆಯಲು ಸದಸ್ಯರೊಂದಿಗೆ ಸಂಪರ್ಕಕ್ಕಿಂತ ಸಂಬಂಧ ಇಟ್ಟುಕೊಂಡು ಮುನ್ನಡೆಯಬೇಕು
ನಿಮ್ಮ ಯಶಸ್ಸು ನಮ್ಮ ಕನಸಾಗಿರಬೇಕು, ಹಿಂದಿನ ಅಧ್ಯಕ್ಷರ ಹೆಜ್ಜೆಗುರುತು ನಿಮಗೆ ದಾರಿದೀಪವಾಗಿದ್ದು ಮಾಡಬೇಕೆನ್ನುವ ಇಚ್ಛಾಶಕ್ತಿ ಇದ್ದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಸಲಹೆ ನೀಡಿದ ಅವರು ಸೇವೆಯೊಂದಿಗೆ ಸದಸ್ಯತನವನ್ನು ಹೆಚ್ಚಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.
ನಿರ್ಗಮನ ಅಧ್ಯಕ್ಷ ಅಲೆಕ್ಸಾಂಡರ್ ಲೋಬೋ ಮಾತನಾಡಿ
ಉಳ್ಳವರು ಇಲ್ಲದವರಿಗೆ ನೀಡಿ ದೇವರಿಗೆ ಪ್ರಿಯರಾಗೋಣ ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಆಶಯ ಭಾಷಣ ಮಾಡಿ ಕ್ಲಬ್ ನ ಸದಸ್ಯರ ಮಾರ್ಗದರ್ಶನ ಸಹಕಾರದೊಂದಿಗೆ ಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ರೋಟರಿ ಸಂಸ್ಥೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವಾ ಕಾರ್ಯಗಳು ಸಮಾಜದ ಎಲ್ಲಾ ಜನರಿಗೂ ತಲುಪುವಂತೆ ಮಾಡುವುದಲ್ಲದೆ ಕ್ಲಬ್ ಗೆ ಹೊಸ ಸದಸ್ಯರ ಸೇರ್ಪಡೆ ಮಾಡಲು ಪ್ರಯತ್ನಿಸಸುವುದಾಗಿ ತಿಳಿಸಿದರು.
ಈ ಸಂದರ್ಭ ನೂತನ ಓರ್ವ ಸದಸ್ಯನನ್ನು ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಅಧ್ಯಕ್ಷೆ ಪ್ರಿಮಾ ಫೆರ್ನಾಂಡೀಸ್ ಹಾಗೂ ಕಾರ್ಯದರ್ಶಿ ಪಸನ್ನ ರಾವ್ ಅವರಿಗೆ ಪಿಎಚ್ ಎಫ್ ಪ್ರದಾನ ಮಾಡಲಾಯಿತು. ನಿರ್ಗಮನ ಅಧ್ಯಕ್ಷ ಅಲೆಗ್ಸಾಂಡರ್ ಲೋಬೋ ಹಾಗೂ ಪೂರ್ವಾಧ್ಯಕ್ಷ ಡಾ. ಗೋವರ್ಧನ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು.
ಸೇವಾ ಕಾರ್ಯಕ್ರಮ ದ ಅಂಗವಾಗಿ ವಿದ್ಯಾ ಡಿಸೋಜಾ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಸಹಾಯಕ ಗವರ್ನರ್ ಕೆ.ಪದ್ಮನಾಭ ರೈ ಮಾತನಾಡಿ
ಸಹಾಯಕ ಗವರ್ನರ್ ಪದ್ಮನಾಭ ರೈ ಮಾತನಾಡಿ ಮಹಿಳಾ ಅಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಅವರು ಹೆಚ್ಚಿನ ಸಾಧನೆ ಮಾಡಲು ಸಹಕರಿಸುವಂತೆ ತಿಳಿಸಿದರು. ಅರಿಥಿಯಾಗಿ ಭಾಗವಹಿಸಿದ್ದ ಧರ್ಮಗುರುಗಳಾದ ಅತಿ ವಂದನೀಯ ರೆವರೆಂಡ್ ಫಾದರ್ ವಲೇರಿಯನ್ ಡಿಸೋಜಾ ಅವರನ್ನು ಗೌರವಿಸಲಾಯಿತು.
ಝೋನಲ್ ಲೆಪ್ಟಿನೆಂಟ್ ಸುರೇಂದ್ರ ಕಂಬಳಿ, ಕ್ಲಬ್ ಸಲಹೆಗಾರ ಸಂಜೀವ ಪೂಜಾರಿ ಉಪಸ್ಥಿತರಿದ್ದು ಶುಭಹಾರೈಸಿದರು.
ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರಸನ್ನ ರಾವ್ ವಂದಿಸಿದರು.
Advertisement







