
ಬಂಟ್ವಾಳ: ಇಲ್ಲಿನ ಸಂಚಯಗಿರಿಯಲ್ಲಿರುವ ನಾಗರಿಕ ಕ್ರಿಯಾ ಸಮಿತಿ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿ ಪರಿಸರದ ಸ್ವಚ್ಚತೆಯನ್ನು ಕಾಪಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು.





ಸಮಿತಿಯ ಮಾಜಿ ಅಧ್ಯಕ್ಷ ಸುಧಾಕರ ಸಾಲ್ಯಾನ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಸ್ವಾತಂತ್ರ್ಯ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ದೇಶಕ್ಕಾಗಿ ಹೋರಾಡಿದವರನ್ನು ಅನುದಿನವೂ ನೆನೆಪಿಸಿಕೊಳ್ಳಬೇಕು ಎಂದರು.

ಸಮಿತಿಯ ಪ್ರಮುಖರಾದ ನರಸಿಂಹ ರಾಜ ಹೊಳ್ಳ, ಹರೀಶ್ ಶೆಣೈ ತಾಯಮ್ಮ, ಎ. ದಾಮೋದರ್ ಸಂಚಯಗಿರಿ, ಧನಂಜಯ ಬಾಳಿಗ ಹಾಗೂ ಸದಸ್ಯರು ಹಾಗೂ ಸಂಚಯಗಿರಿ ನಿವಾಸಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Advertisement







