





ಬಂಟ್ವಾಳ: ಸೌತ್ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವಾರ್ಷಿಕ ಸಭೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಲಯದ ಅಧ್ಯಕ್ಷ ಕಿಶೋರ್ ಎಸ್. ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ವಲಯವು ರಜತ ಸಂಭ್ರಮವನ್ನು ಆಚರಿಸುತಿದ್ದು, ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಅಂಚೆ ಜೀವ ವಿಮೆಯನ್ನು ಮಾಡಿಸಿದ್ದು, ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯತ್ವನ್ನು ನವೀಕರಿಸಿದ ಸದಸ್ಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸಂಘದಿಂದ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಹೇಳಿದರು.


ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ನವೀನ ರೈ, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್., ಜಿಲ್ಲಾ ಸಂಚಾಲಕ ಕರುಣಾಕರ ಕಾಣಂಗಿ, ಎಸ್ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಹರೀಶ್ ರಾವ್, ವಲಯದ ಗೌರವಾಧ್ಯಕ್ಷ ಹರೀಶ್ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ ವರದಿಯನ್ನು ವಾಚಿಸಿದರು, ಕೋಶಾಧಿಕಾರಿ ವರುಣ್ ಕಲ್ಲಡ್ಕ ೨೪-೨೫ ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಯೋಗೀಶ್ ಮೊಗರ್ನಾಡು ವಂದಿಸಿದರು, ರಾಜೇಂದ್ರ ಹಾಗೂ ರೋಷನ್ ಕಾರ್ಯಕ್ರಮ ನಿರೂಪಿಸಿದರು.
Advertisement







