ಬಿ .ಸಿ .ರೋಡ್ _ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ.ಬಂಟ್ವಾಳ: ಬಿ ಸಿ ರೋಡ್ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ ಯವರು ಧ್ವಜಾರೋಹಣ ಗೈದರು.


ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡ್ ಅಮರ್ ಗ್ರೂಪ್ ನ ಮಾಲಕ ಕೆ. ಸತೀಶ್ ಕುಮಾರ್ ರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವನ್ನು ವಿತರಿಸಿ,ನಂತರ ಶುಭವನ್ನು ಹಾರೈಸಿದರು.



ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ತೇಜಸ್ವಿನಿ ಪೂಜಾರಿ, ಉಪಾಧ್ಯಕ್ಷ ರಾದ ಸುಂದರ್ ಎನ್, ಕೋಶಾಧ್ಯಕ್ಷ ರಾದ ಜಯಶ್ರೀ ರವರು ಭಾಗವಹಿಸಿದರು. ಆದಿತ್ಯವಾರ ದಂದು ಪೋಷಕರಿಗೆ ನಡೆದ ಬೆಂಕಿ ಬಳಸದೆ ಅಡುಗೆ ತಯಾರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಐತಪ್ಪ ಪೂಜಾರಿ ಯವರು ವಹಿಸಿ ಸ್ವಾತ್ರಂತ್ರ್ಯ ದಿನಾಚರಣೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಕುಮಾರಿ ಪ್ರಸ್ತುತಿ ಸ್ವಾತಂತ್ರೋತ್ಸವದ ಬಗ್ಗೆ ಮಾತನಾಡಿದಳು. ವಿದ್ಯಾರ್ಥಿ ಗಳಾದ ಕುಮಾರಿ ಪ್ರಣವಿ ಕೃಷ್ಣ ಸ್ವಾಗತಿಸಿ, ಮಾಸ್ಟರ್ ರಿಷಿಕ್ ಧನ್ಯವಾದ ನೀಡಿ,ಕುಮಾರಿ ಪುನರ್ವಿ ಎಂ. ದಾಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


Advertisement







