

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೇತ್ರಾವತಿ ಸಂಗಮ ಲೀಜನ್ ಇದರ ವತಿಯಿಂದ ೭೮ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.




ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕೆ.ಎಸ್. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಎಸ್ಸಿಐ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿ ಶೈಲಜಾ ರಾಜೇಶ್, ಸದಸ್ಯರಾದ ರವೀಂದ್ರ ಕುಕ್ಕಾಜೆ, ರೇಖಾರಾವ್, ಸನ್ಮತಿಜಯಕೀರ್ತಿ, ಸಂದೀಪ್ ಸಾಲ್ಯಾನ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಸುಮಿತ್ ಕುಲಾಲ್ ಸೊರ್ನಾಡು ಉಪಸ್ಥಿತರಿದ್ದರು.


Advertisement







