
ಬಂಟ್ವಾಳ: ಇಲ್ಲಿನ ಗಿರಿಗುಡ್ಡೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಬುಧವಾರ ಎನ್ಎಸ್ಎಸ್ ಘಟಕದ ವತಿಯಿಂದ ೧೦ನೇ ಆಯುರ್ವೇದ ದಿನಾಚರಣೆ ಮತ್ತು ಎನ್ಎಸ್ಎಸ್ ದಿನಾಚರಣೆಯನ್ನು ಆಚರಿಸಲಾಯಿತು.


ವಿದ್ಯಾಸಂಸ್ಥೆಯ ಪ್ರಾಂಶುಪಾಲ ನರಸಿಂಹ ಭಟ್ ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಲಾಗುತ್ತಿರುವ ಕಾಲಘಟ್ಟದ್ದಲ್ಲಿ ನಾವು ಬಳಸುತ್ತಿರುವ ಆಹಾರ ನಮ್ಮ ಆರೋಗ್ಯಕ್ಕೆ ಮುಳುವಾಗುತ್ತಿದ್ದು ಪ್ರಕೃತಿ ಜನ್ಯ ಆಹಾರಗಳ ಸೇವೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಯುರ್ವೇದ ನಮ್ಮ ಪಾರಂಪರಿಕ ಔಷಧಿ ಪದ್ದತಿಯಾಗಿದ್ದು ಇದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಭಾಗವಹಿಸಿ ಎನ್ಎಸ್ಎಸ್ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾಹಿತಿಯನ್ನು ನೀಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಭಾಸ್ಕರ್ ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ ಎನ್ಎಸ್ಎಸ್ ಮತ್ತು ಆಯುರ್ವೇದ ದಿನಾಚರಣೆಯ ಮಹತ್ವವನ್ನು ತಿಳಿಸಿದರು.


ವೇದಿಕೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಭಗವಾನ್ ಪ್ರಸಾದ್, ಸಿವಿಲ್ ವಿಭಾಗ ಮುಖ್ಯಸ್ಥ ಮೋಹನ್ ರಾಜ್ ಜಿ.ಎಸ್, ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಉದಯ್ ಕುಮಾರ್, ಕಚೇರಿ ಅಧೀಕ್ಷಕ ಸುಧಾಕರ್ ಸಿ.ಎಸ್, ಕ್ರೀಡಾಧಿಕಾರಿ ರಿತಿಕಾ ಕೋಟ್ಯಾನ್ ಹೆಚ್, ಹಾಗೂ ಎನ್ಎಸ್ಎಸ್ ವಿದ್ಯಾರ್ಥಿ ನಾಯಕ ಸಿಂಚನ್ ಉಪಸ್ಥಿತರಿದ್ದರು. ಸ್ವಯಂ ಸೇವಕ ವಿದ್ಯಾರ್ಥಿಗಳಾದ ಸಿಂಚನ್ ಸ್ವಾಗತಿಸಿ, ಜಯಂತ್ ವಂದಿಸಿದರು. ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
Advertisement







