
ಬಂಟ್ವಾಳ: ಅಂಕ ಪ್ರಗತಿಯ ಧ್ಯೋತಕವಲ್ಲ. ಸಾಧನೆ ಮಾಡುವವನಿಗೆ ಸುಖ ಸಿಗುವುದಿಲ್ಲ, ಸುಖ ಬಯಸುವವನಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು.
ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿರುವ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕಿಗೆ ಬೆಳಕು ತೋರಿದವರು. ಸಮಾಜದ ಸ್ಪರ್ಶ, ಅಸ್ಪರ್ಶ್ಯತೆಯನ್ನು ನೀಗಿದವರು.ಅವರಿಗೆ ಕೈ ಮುಗಿದಲ್ಲಿ ನಮ್ಮೊಳಗಿನ ಪ್ರತಿಭೆ ಹೊರ ಬರಲು ಸಾಧ್ಯವಿದೆ ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಹಳ್ಳಿಯ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ತಿಳಿಸಿದರು.

ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಂಚಿ ಕೊಳ್ನಾಡು ಸರಕಾರಿ ಶಾಲೆಯ ಶಿಕ್ಷಕಿ ವಿಜಯ ಲಕ್ಷ್ಮೀ ಕಟೀಲು ಮಾತನಾಡಿ ಶಿಕ್ಷಣ ಇದ್ದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇಂದು ವಿದ್ಯಾರ್ಥಿ ವೇತನ ಪಡೆದಂತೆ ಮುಂದೆ ನಾವು ಸಮಾಜಕ್ಕೆ ನೀಡುವ ಕಾರ್ಯ ಆಗಬೇಕು ಎಂದು ತಿಳಿಸಿದರು.


ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರ ಸಹಕಾರ, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಸಂಘದ ಎಲ್ಲಾ ಶಾಖೆಗಳು ಪ್ರಗತಿಯ ಹಾದಿಯಲ್ಲಿದೆ. ಹೆಚ್ಚು ಶಾಖೆಗಳ ಸ್ಥಾಪನೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಹೆಚ್ಚು ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದ ಅವರು ಗ್ರಾಹಕರಿಗೆ ಶೇ.25 ಡಿವಿಡೆಂಟ್ ಘೋಷಣೆ ಮಾಡಿದರು.

ಈ ಸಂದರ್ಭ ಇನ್ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ದಿವ್ಯಾಂಗ ಬಾಲಕಿಯ ಚಿಕಿತ್ಸೆಗೆ ಸಹಾಯಧನ ನೀಡಲಾಯಿತು. ಮೂರು ಮಂದಿ ಹಿರಿಯ ಮೂರ್ತೆದಾರರನ್ನು ಹಾಗೂ ಸಂಘದ ಮಾಜಿ ನಿರ್ದೇಶಕ ಮುತ್ತಪ್ಪ ಪೂಜಾರಿಯವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ವಿಠಲ ಪೂಜಾರಿ, ನಿರ್ದೇಶಕರಾದ
ಸುಂದರ ಪೂಜಾರಿ ಬೀಡಿನ ಪಾಲು,ರಮೇಶ್ ಅನ್ನಪ್ಪಾಡಿ
ಜಯಶಂಕರ್ ಕಾನ್ಸಲೆ, ಸುಜಾತ ಎಂ.,ವಾಣಿ ವಸಂತ್
ಅರುಣ್ ಕುಮಾರ್, ಆಶೀಶ್ ಪೂಜಾರಿ
ಚಿದಾನಂದ ಎಂ. ಕಡೇಶ್ವಾಲ್ಯ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ಚೇಳೂರು ಲೆಕ್ಕಪತ್ರ ಮಂಡಿಸಿದರು.
ಎಜಿಎಂ ಶಿಲ್ಪಾ ಸ್ವಾಗತಿಸಿದರು. ವೇಣೂರು ಶಾಖಾ ವ್ಯವಸ್ಥಾಪಕಿ ವಿಜಯ ಕೆ. ವಂದಿಸಿದರು. ನಿರ್ದೇಶಕ
ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
Advertisement







