Author: admin

ಬಂಟ್ವಾಳ: ಒಳ್ಳೆಯ ಮನಸ್ಸುಗಳು ಜೊತೆಗೂಡಿದಾಗ ಸತ್ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ ಎಂದು ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಸುಜೀರು ದತ್ತನಗರದ ಶ್ರೀ ವೀರಹನುಮಾನ್ ಮಂದಿರದ 24ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರ ಹೆಸರಿನಲ್ಲೂ ರಾಮನಿದ್ದಾನೆ ಎಂದ ಅವರು ಹನುಮನನ್ನು ಉಪಾಸನೆ ಮಾಡಿದಾಗ ನಾವು ಕ್ರಿಯಾಶೀಲರಾಗುತ್ತೇವೆ ಎಂದು ತಿಳಿಸಿದರು. ದತ್ತನಗರದ ಮಂದಿರ ನಿರ್ಮಾಣಗೊಂಡು ಅರ್ಧ ಮಂಡಲ ಪೂರ್ಣಗೊಂಡಿದೆ. ಮುಂದಿನ ಬೆಳ್ಳಿ ಹಬ್ಬದ ಸಂಭ್ರಮದ‌ ವೇಳೆಗೆ ಸಮಿತಿಯ ಬೇಡಿಕೆಯ ಸಭಾಭವನದ ನಿರ್ಮಾಣವಾಗಲಿದ್ದು ಎಲ್ಲರ ಸಹಕಾರ ಒದಗಿ ಬರಲಿದೆ ಎಂದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ ಧಾರ್ಮಿಕ ಪರಿತ್ತಿನಿಂದ ಸಿಗುವ ಅನುದಾನದಡಿ ಮಂದಿರದ ಅಭಿವೃದ್ದಿಗೆ 5 ಲಕ್ಷ ಮೀಸಲಿಡುವುದಾಗಿ ತಿಳಿಸಿದರು. ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮಾತನಾಡಿದರು. ಉದ್ಯಮಿಗಳಾದ ಜಗದೀಶ್ ರೈ, ಎಂಜಿನಿಯರ್ ಅಕ್ಷಯ್ ಅರ್ಕುಳ, ಗೌರವಾಧ್ಯಕ್ಷ ಪ್ರಕಾಶ್ಚಂದ್ರ…

Read More

ಬಂಟ್ವಾಳ: ಚೆಸ್ ಮಾಸ್ಟರ್ ಮಂಗಳೂರು ಇದರ ಆಶ್ರಯದಲ್ಲಿ ರೋಟರಿ ಕ್ಲಬ್ಬಿ.ಸಿ.ರೋಡು ಸಿಟಿ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಜ.18ರಂದು ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.‌ ವಿವಿಧ ವಿಭಾಗದಲ್ಲಿ ಚೆಸ್ ಪಂದ್ಯಾಟ ನಡೆಯಲಿದ್ದು ಆಸಕ್ತ ಸ್ಪರ್ಧಾಳುಗಳು ಜ.16ರ ಒಳಗಾಗಿ ತಮ್ಮ‌ಹೆಸರು ನೋಂದಾತಯಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುರೇಶ್ ಸಾಲ್ಯಾನ್ ಅವರಿಗೆ ಅಭಿನಂದನಾ ಸಮಾರಂಭ ಜ.13 ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ. ಅಸೋಸಿಯೇಷನ್ ನ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯಾದೇಶ್ ತುಂಬೆ ಅಧ್ಯಕ್ಷತೆ ವಹಿಸುವರು, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಪ್ರಜ್ವಲಿಸುವರು, ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ಮಂಜುನಾಥ, ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಕಾರ್ಮಿಕ ನಿರೀಕ್ಷಕಿ ಲವೀನಾ ಡಿಸೋಜಾ, ಕೆ ಎಸ್ ಟಿ ಎ ಸ್ಥಾಪಕಾಧ್ಯಕ್ಷ ಲಕ್ಷ್ಮಣ ಉಳ್ಳಾಲ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ, ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವವರು ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ ಬಿ.ಸಿ.ರೋಡ್ ವತಿಯಿಂದ ಸಹಕಾರಿಯ ಪಿಗ್ಮಿ ಗ್ರಾಹಕರಿಗೋಸ್ಕರ ಮಾಡಿದ ಯೋಜನೆಯಾದ ಉಚಿತವಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯವನ್ನು ಪಡೆಯುವ ಅವಕಾಶದಲ್ಲಿ ಪ್ರಥಮವಾಗಿ ಬೆಳ್ಳಿಯ ನಾಣ್ಯವನ್ನು ಬಿ.ಸಿ.ರೊಡ್ ನ ಹೋಟೆಲ್ ಉದ್ಯಮಿ ಗುರುದತ್ ಹೆಗಡೆ ಪಡೆದಿದ್ದು ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್ ಬೆಳ್ಳಿಯ ನಾಣ್ಯವನ್ನು ಹಸ್ತಾಂತರಿಸಿದರು. ಈ ಸಂದರ್ಭ ಸಹಕಾರಿಯ ಪಿಗ್ಮಿ ಸಂಗ್ರಹಕರಾದ ರೇಖಾ ಪ್ರಭುರವರು ಇದ್ದರು.

Read More

ಬಂಟ್ವಾಳ: ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ವತಿಯಿಂದ ಇತ್ತಿಚೆಗೆ ಬೊಳ್ಳಾಯಿ ಸಮೀಪ ಕಂಚಿಲ ಪರಿಸರದ ದೇವರಾಜ್ ಪೂಜಾರಿ ಅವರ ಪತ್ನಿ ಪುಷ್ಪ ಹಾಗೂ ದಿ.ಆನಂದ ಪೂಜಾರಿ ಅವರ ಪತ್ನಿ ರೇವತಿ ಎಂಬವರು ಅಗ್ನಿ ಅವಘಡದಿಂದ ತೀವ್ರವಾಗಿ ಗಾಯಗೊಂಡಿದ್ದು ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕೋಮಾಲಿ ಪಡೀಲ್ ಇವರ ನೇತೃತ್ವದಲ್ಲಿ ಸಾಂತ್ವನ ನಿಧಿಯ ಚೆಕ್ ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಸುಭಾಷ್‌ ನಗರ ಬಿಲ್ಲವ ಸೇವಾ ಸಂಘ ಇದರ ಅಧ್ಯಕ್ಷ ಮೊಹನ್ ದಾಸ್ ಪೂಜಾರಿ ಬೊಳ್ಳಾಯಿ, ಬಂಟ್ವಾಳ ತಾಲೂಕು ಪಿಡಬ್ಲ್ಯಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್‌ ಪೂಜಾರಿ ಕುಚ್ಚಿಗುಡೆ ಸಮಿತಿಯು ಗೌರವ ಅಧ್ಯಕ್ಷ ಸುಂದರ ಪೂಜಾರಿ ವಿಟ್ಲಕೋಡಿ, ಮಾಜಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ವಿಟ್ಲಕೋಡಿ, ಕಾರ್ಯದರ್ಶಿ ನಾಗೇಶ್ ಪೂಜಾರಿ ಉಪಾಧ್ಯಕ್ಷ ಮಹೇಶ್ ಪೂಜಾರಿ ಪ್ರಮುಖರಾದ ತಿಲಕರ ಪೂಜಾರಿ ಮಿತ್ತಮಜಲ್, ನಾರಾಯಣ ಪೂಜಾರಿ ಪಟ್ಟುಗುಡ್ಡೆ ಯೋಗೀಂದ್ರ ಪೂಜಾರಿ ಕೋಮಾಲಿ, ಅಂತಪ್ಪ ಪೂಜಾರಿ ಕೊಮಾಲಿ, ವಿನೋದ್ ಪೂಜಾರಿ ಕೋಮಾಲಿ…

Read More

ಬಂಟ್ವಾಳ: ಭಾರತ ಸರಕಾರದ ರೈಲ್ವೆ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇರ ನೇಮಕಾತಿಯ ಮೂಲಕ ಮಂಡ್ಯ ವಿಭಾಗದ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪವನ್ ಕುಮಾರ್ ಬಿ. ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು ರೈಲ್ವೆ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ 2006 ರ ಏಪ್ರಿಲ್ ತಿಂಗಳಲ್ಲಿ ಮೈಸೂರು ರೈಲ್ವೆ ಸ್ಟೇಷನ್ ನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಬಳಿಕ ಭಡ್ತಿಗೊಂಡು ರೈಲ್ವೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಗೋವಾ ರಾಜ್ಯದ ವಾಸ್ಕೋ ಮತ್ತು ಮಡಂಗಾವ್ ರೈಲ್ವೆ ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸಿದ ಇವರು ರೈಲ್ವೆ ಇಲಾಖೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸಹೋದರ ಪ್ರಣಾಮ್ ಕುಮಾರ್ ಗುಜರಾತ್ ರಾಜ್ಯದ ವಾಪಿ ಬ್ಯಾಂಕ್ ಆಫ್ ಬರೋಡ ಬ್ರಾಂಚ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಕೂರಿಯಾಳ ಜಗದೀಶ್ ಭಂಡಾರಿ ಹರೇಕಳ ಮೋಹಿನಿ ಜಗದೀಶ್ ಭಂಡಾರಿಯ ಪುತ್ರ. ಪತ್ನಿ ಅಕ್ಷತಾ ರಾಷ್ಟ್ರೀಯ ಮಟ್ಟದ ಕರಾಟೆ ಪಟು ತನಿಷ್ಕ ಮತ್ತು…

Read More

ಬಂಟ್ವಾಳ: ರಾಮ ಎನ್ನುವ ಹೆಸರಿನಲ್ಲಿಯೇ ಪ್ರೇಮವಿದೆ. ರಾಮ ಎನ್ನುವುದು ಸುಲಲಿತವಾಗಿ ಬರುವ ನಾಮ. ನಮ್ಮ ಬದುಕಿನ ದಾರಿಗೆ ರಾಮಯಾಣವೇ ಬೆಳಕು. ಜೀವನವೆನ್ನುವ ನಾಟಕ ರಂಗಕ್ಕೆ ಶ್ರೀರಾಮ, ಶ್ರೀಕೃಷ್ಣರೇ ಸೂತ್ರದಾರರು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ 54ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಾನವೀಯ ಮೌಲ್ಯಗಳನ್ನು ಬಿತ್ತಿದಾಗ ಸುಂದರ ಸಮಾಜ ನಿರ್ಮಾಣವಾಗಲಿದೆ. ಭಾರತದ ಆಂತರ್ಯ ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ತಿಳಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಆ ಕಾರಣಕ್ಕಾಗಿ ಶ್ರೀರಾಮನ ಹೆಸರಿನ ಭಜನಾ ಮಂದಿರಗಳು ಅಲ್ಲಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಬಂಟ್ವಾಳ ಘಟಕ ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಮಾತನಾಡಿ ಮಂದಿರದ ಕೆಲಸಗಳಿಗೆ ಸಹಕಾರ…

Read More

ಬಂಟ್ವಾಳ: ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ಸ್ವಚ್ಚ ಗಾಳಿ, ಶುದ್ಧ ನೀರು ಹಾಗೂ ಸಮತೋಲಿತ ಆಹಾರ ಅತ್ಯಂತ ಅವಶ್ಯಕ. ಕ್ಷಯ ಪ್ರಾಚೀನ ಕಾಯಿಲೆಯಾಗಿದ್ದು ರೋಗ ಸಂಪೂರ್ಣ ಗುಣಪಡಿಸಲು ನಿಯಮಿತ ಔಷಧಿಯ ಜೊತೆಗೆ ಸಮತೋಲಿತ ಆಹಾರ ಸೇವನೆಯೂ ಅತೀ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ. ಎಚ್. ಆರ್ ತಿಮ್ಮಯ್ಯ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯ , ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಶ್ರೀಮಂತಿಕೆ ಇದ್ದರೆ ಸಾಲದು ಹೃದಯ ಶ್ರೀಮಂತಿಕೆಯೂ ಬೇಕು. ಅಂತಹ ಹೃದಯ ಶ್ರೀಮಂತಿಕೆ ಕೃಷ್ಣ ಕುಮಾರ್ ಪೂಂಜ ಅವರಲ್ಲಿದೆ. ಸೇವಾಂಜಲಿಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ, ಆರೋಗ್ಯ ಇಲಾಖೆಯಿಂದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್.ನಾಯರ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರ ಸೇವಾಕಾರ್ಯಕ್ಕೆ ಮನಸೋತು ಅವರೊಂದಿಗೆ ನಾವೂ ಕೈಜೋಡಿಸಿದ್ದೇವೆ ಎಂದು ತಿಳಿಸಿದರು.…

Read More

ಬಂಟ್ವಾಳ: ಮಂಗಳೂರು, ಬಂಟ್ವಾಳ, ಉಳ್ಳಾಲ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ಇಂದಿರಾ ದರ್ಶಿನಿ ಸಹಕಾರಿ ಸಂಘವು ಮಂಚಿ ಕುಕ್ಕಾಜೆಯ ಪತ್ತುಮುಡಿಯಲ್ಲಿರುವ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಡಾ. ಯು.ಟಿ.ಖಾದರ್ ಫರೀದ್ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಕ್ಷೇತ್ರ ದೇಶದ ಗ್ರಾಮೀಣ ಅಭಿವೃದ್ದಿಯ ಆತ್ಮವಿದ್ದಂತೆ. ಆರ್ಥಿಕ ಚಲನೆಯಿಲ್ಲದೆ ಯಾವುದೇ ಗ್ರಾಮ, ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಾಜದ ಹತ್ತು ಕೈಗಳು ಜೊತೆಗಿರುವುದರರಿಂದ ಕೋಅಪರೇಟಿವ್ ಸೊಸೈಟಿಗಳು ಇಂದು ಯಶಸ್ಸಿನತ್ತ ಸಾಗುತ್ತಿದೆ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಆಡಳಿತ ಕಚೇರಿ ಉದ್ಘಾಟಿಸಿದರು. ‌ಅವರು ಮಾತನಾಡಿ ಇಂದಿರಾ ಗಾಂದಿ ಮೇಲ್ವರ್ಗದಲ್ಲಿ ಹುಟ್ಟಿದ್ದರೂ ದುರ್ಬಲ ವರ್ಗದ ಜನರ ಬಗ್ಗೆ ಚಿಂತನೆ ಮಾಡಿ ಯೋಜನೆ ರೂಪಿಸಿದವರು. ಗರೀಭೀ ಹಠಾವೋ ಯೋಜನೆಯ ಮೂಲಕ ಬಡತನ ನಿರ್ಮೂಲನಕ್ಕೆ ಪ್ರಯತ್ನಿಸಿದವರು. ಭೂ ಮಸೂದೆ ಯೋಜನೆಯ ಮೂಲಕ ಬಡವರಿಗೆ ಸ್ವಾಭಿಮಾನದ ಜೀವನ ನೀಡಿದವರು ಎಂದರು. ಗುರು ಬೆಳಂದಿಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಠೇವಣಿ ಪತ್ರ…

Read More

ಬಂಟ್ವಾಳ: ಜೆಸಿಐ ಬಂಟ್ವಾಳ‌ ಇದರ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಮಾತನಾಡಿ‌ 2025ನೇ ಸಾಲಿನಲ್ಲಿ ತನ್ಮಿಂದ ಸಾಧ್ಯವಾಗುಷ್ಟು ಕಾರ್ಯಗಳನ್ನು ಮಾಡಿದ್ದು ಆತ್ಮತೃಪ್ತಿ ಇದೆ ಎಂದರು. ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಅವರಿಂದ ಅಧಿಕಾರ ಸ್ವೀಕರಿಸಿದರು. ದೀಪ ಪ್ರಜ್ವಲಿಸುವ ಮೂಲಕ ಅತಿಥಿಗಳು ನೂತನ ತಂಡವನ್ನು ಉದ್ಘಾಟಿಸಿದರು. 2026ನೇ ಸಾಲಿನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಆಶಯ ಭಾಷಣ ಮಾಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಸು ಇದ್ದು ಇದನ್ನು ನನಸು ಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಪ್ರತಿಜ್ಞಾವಿಧಿ ಭೋದಿಸಿದರು. ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ಲೇಡಿ ಜೇಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಹಾಗೂ ಉಪಾದ್ಯಕ್ಷರು ಅಧಿಕಾರ ಸ್ವೀಕರಿಸಿದರು. 4 ಮಂದಿ ಹೊಸ ಸದಸ್ಯರು ಘಟಕಕ್ಕೆ ಸೇರ್ಪಡೆಯಾಗಿದ್ದು…

Read More