

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನರಿಕೊಂಬುವಿನ ಬಿರ್ವೆರ್ ಸೇವಾ ಟ್ರಸ್ಟ್ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆಯಲ್ಲಿ ನಡೆಯಿತು.
ಅವರು ಮಾತನಾಡಿ ಸಂಘವು ಪ್ರಗತಿಯ ಹಾದಿಯಲ್ಲಿದ್ದು ಲಾಭದೊಂದಿಗೆ ಮುನ್ನಡೆಯುತ್ತಿದೆ. ಸಂಘದ ಸದಸ್ಯರ ಒಪ್ಪಿಗೆಯ ಮೇರೆಗೆ ಲಾಭಾಂಶವನ್ನು ಸಂಘಕ್ಕೆ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ಕಟ್ಟುವ ಉದ್ದೇಶದಿಂದ ಕಟ್ಟಡ ನಿಧಿಗೆ ವರ್ಗಾಯಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಮೋಹಿನಿ ವಾಮನ ಕುಲಾಲ್, ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ಅಧ್ಯಕ್ಷ ಸೀತರಾಮ ಪೂಜಾರಿ, ಭೂಸೇನೆಯ ನಿವೃತ್ತ ಸುಬೇಧಾರ್ ಮೋನಪ್ಪ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು.


ಸಂಘದ ಉಪಾಧ್ಯಕ್ಷ ಮಾಧವ ಕೆ. ಕರ್ಬೆಟ್ಟು, ನಿರ್ದೇಶಕರಾದ ಅಶೋಕ್ ಆರ್. ರಾಜೇಶ್ ಆರ್. ಮೋನಪ್ಪ ಪೂಜಾರಿ, ನಾರಾಯಣ ಪೂಜಾರಿ ಕೇದಿಗೆ, ಗಣೇಶ್ ಪೆಲ್ತಿಮಾರ್, ಶ್ರೀಶ ಆರ್., ವಿಜಯ ತುಕರಾಂ, ಜಯಂತಿ ಈಶ್ವರ ಪೂಜಾರಿ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಸಂದರ್ಭ ೧೦ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಉಪಾಧ್ಯಕ್ಷ ಮಾಧವ ಕೆ. ಸ್ವಾಗತಿಸಿದರು. ಕೃತಿಕ್ಷಾ ಪ್ರಾರ್ಥಿಸಿದರು, ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಐ. ಪೂಜಾರಿ ವಂದಿಸಿದರು.

—
Advertisement







