
ಬಂಟ್ವಾಳ: ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಧಾರಾ ಮತ್ತು ಖ್ಯಾತ ಯಕ್ಷಗಾನ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನ ಕುಮಾರ್ ಸ್ಮರಣಾರ್ಥ ನೀಡುವ ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ನ.1ರಂದು ಶನಿವಾರ ಸಂಜೆ 3.30ರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.


ಸಂಜೆ 3.30ಕ್ಕೆ ದೀಪ ಪ್ರಜ್ವಲನೆ ನಡೆಯಲಿದೆ. 4 ಗಂಟೆಗೆ ನೃತ್ಯಧಾರ, 6ಕ್ಕೆ ಸಭಾಕಲಾಪ ನಡೆಯಲಿದೆ. ಪುತ್ತೂರಿನ ವಿಶ್ವ ಕಲಾನಿಕೇತನ ಆರ್ಟ್ಸ್ ಆಂಡ್ ಕಲ್ಚರಲ್ ಇನ್ಸ್ಟಿಟ್ಯೂಷನ್ ಇಲ್ಲಿನ ನೃತ್ಯ ಗುರು ವಿದೂಷಿ ನಯನ ವಿ. ರೈ ಕುದ್ಕಾಡಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಬೃಜೇಶ್ ಚೌಟ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ವಾಳ ಶ್ರೀ ತಿರುಮಲಕ ವೆಂಕಟರಮಣ ಸ್ವಾಮೀ ದೇವಸ್ಥಾನದ ಅಧ್ಯಕ್ಷ ಅಶೋಕ್ ಶೆಣೈ ಭಾಗವಹಿಸುವರು. ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ವೈ ಉಮಾನಾಥ ಶೆಣೈ ಅವರಿಗೆ ಕಲಾನಯನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಬೆಳಕು ವಿನ್ಯಾಸಕಾರ ಪೃಥ್ವಿನ್ ಕೆ. ಉಡುಪಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಚಾಲಕ ಉದಯ್ ವೆಂಕಟೇಶ್ ಹಾಗೂ ನೃತ್ಯ ನಿರ್ದೇಶಕಿ ವಿದುಷಿ ರೋಹಿಣಿ ಉದಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement







