Author: admin

ಬಂಟ್ವಾಳ: ಮಲೆಯಾಳಿ ಬಿಲ್ಲವ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಇರಾ- ಕಲ್ಲಾಡಿ ಇದರ 55 ನೇ ವಾರ್ಷಿಕೋತ್ಸವ ಇರಾ ಮಲೆಯಾಳಿ ಬಿಲ್ಲವ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆಯಿತು. ಬೆಳಿಗ್ಗೆ ನಡೆದ ಭಜನಾ ಸಂಕೀರ್ತನೆ ಹಾಗೂ ಕುಣಿತಾ ಭಜನೆ ವಿಶೇಷ ಗಮನ ಸೆಳೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು. ಅವರು ಮಾತನಾಡಿ ನಮ್ಮ‌ ಸಮಾಜದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಪೋಷಕರಿಂದ‌ ಆಗಬೇಕಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರು ಉನ್ನತ ಉದ್ಯೋಗಗಳನ್ನು ಪಡೆಯಲು ಶ್ರಮಿಸಬೇಕು.ಯುವಕರು ಸಕ್ರಿಯವಾಗಿದ್ದುಕೊಂಡು ಆ ಮೂಲಕ ಸಮಾಜದ ಸಂಘಟನೆಯನ್ನು ಮಾಡಬೇಕು ಎಂದರು. ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇರಾ ಕಲ್ಲಾಡಿಯ ಮಲಯಾಳಿ ಬಿಲ್ಲವ ಸಂಘ 55 ವರ್ಷ ಪೂರೈಸಿರಬೇಕಾದರೆ ಅದು ಮಲೆಯಾಳ ಬಿಲ್ಲವ ಹಿರಿಯರ ಶಕ್ತಿ ಎಂದರು. ಇರಾ ಸಾಧಕರ ಊರು.‌ ಸಮುದಾಯದ ಮಕ್ಕಳಿಗೆ…

Read More

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ ಬಂಟ್ವಾಳ ಶಾಖೆಯು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ‌ಶುಭಾರಂಭಗೊಂಡಿತು. ಮಾಜಿ ಸಚಿವ ಬಿ.ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆದ‌ ಸಭಾಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ ಮಾತನಾಡಿ ಪೊಟೋಗ್ರಾಫಿ ಎನ್ನುವುದು ಒಂದು ದಾಖಲೆ, ವರ್ತಮಾನದ ಸಂದರ್ಭದಲ್ಲಿ ಛಾಯಾಗ್ರಾಹಕರು ಅಗತ್ಯ.‌ ವೃತ್ತಿ ಜೀವನದಲ್ಲಿ ಛಾಯಗ್ರಾಹಕರು ತಮ್ಮದೇ ರೀತಿಯಲ್ಲಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅಭಿನಂದನೀಯ ಎಂದರು. 10 ವರ್ಷದ ಹಿಂದೆ ಈ ಸಹಕಾರಿ ಸಂಘದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ದೊರೆತ್ತಿದ್ದು ಈ ದಿನ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಋಣಾನುಬಂಧ ಎಂದು ನೆನೆಪಿಸಿಕೊಂಡರು. ಕಾರ್ಯಕ್ರಮದಲ್ಲಿ ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಎಸ್ ಕೆ ಪಿ. ಎ, ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೃತ್ತಿಪರ…

Read More

ಬಂಟ್ವಾಳ: ನಿಟ್ಟೆ ಡೀಮ್ಡ್ ಯುನಿವರ್ಸಿಟಿ, ಸೆಕ್ಷನ್ ಇನ್ಫಿನ್- 8 ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಬೇಕಾದ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶದಿಂದ ರುಟ್ಯಾಗ್ ಸ್ಮಾರ್ಟ್ ವಿಲೇಜ್ ಸೆಂಟರ್‌ನ್ನು ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಬುಧವಾರ ಶುಭಾರಂಭಗೊಳಿಸಲಾಯಿತು. ಯುಎಸ್‌ಎ ಯ ಎಸಿಎಂ ಬಿಸಿನೆಸ್ ಸೊಲ್ಯುಷನ್‌ನ ಮುಖ್ಯಸ್ಥರಾದ ಡಾ. ಎನ್. ಸಿ. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದ ಜನರ ಅಭಿವೃದ್ದಿಯ ಉದ್ದೇಶದಿಂದ ಈ ಯೋಜನೆಯನ್ನು ಇಲ್ಲಿ ಆರಂಭಿಸುತ್ತಿದ್ದು ಎಲ್ಲರ ಸಹಕಾರ ಖುಷಿ ನೀಡಿದೆ ಎಂದರು. ಯುಎಸ್‌ಎಯ ಕುಟುಂಬ ವೈದ್ಯ ಡಾ. ಜೀವನ್ ಪ್ರಕಾಶಿನಿ ಮೂರ್ತಿ ಮಾತನಾಡಿ ನಾನು ಈ ಊರಿನಲ್ಲಿಯೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದು ೪೦ ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ನಮ್ಮ ಊರು, ನಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ ಎಂದರು. ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಕಾರ್ಯತಂತ್ರ ಒಕ್ಕೂಟದ ನಿರ್ದೇಶಕಿ ಡಾ. ಸಪ್ನ ಪೋತಿ ಸ್ಮಾರ್ಟ್ ವಿಲೇಜ್ ಸೆಂಟರ್ ಬಗ್ಗೆ ಮಾಹಿತಿ ನೀಡಿದರು.…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಸಂಘದ ನೇತ್ರತ್ವದಲ್ಲಿ ಕೆಟರಿಂಗ್ ಪ್ರೀಮಿಯರ್ ಲೀಗ್ -2026 ಕ್ರಿಕೆಟ್ ಪಂದ್ಯಾಟ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಿತು. ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟವನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಜಾತಿ, ಧರ್ಮವನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯ ಮೂಲಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈನಂದಿನ ಒತ್ತಡದ ಕೆಲಸದ ನಡುವೆಯೂ ಕ್ಯಾಟರಿಂಗ್ ಮಾಲಕರು ಒಂದು ದಿನ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಿಯವಾಗಿದ್ದು ಈ ದಿನವನ್ನು ಸಂಭ್ರಮಿಸುವಂತೆ ಅವರು ಶುಭ ಹಾರೈಸಿದರು. ಮಂಗಳೂರು ಸಂಸದ ಕ್ಯಾ. ಬೃಜೇಶ್ ಚೌಟ ಭಾಗವಹಿಸಿ ಪಂದ್ಯಾಟಕ್ಕೆ ಶುಭ ಕೋರಿದರು. ಮತ್ತಿತರ ಗಣ್ಯರು ಭಾಗವಹಿಸಿದ್ದರು. ಕೇಟರಿಂಗ್ ಪ್ರೀಮಿಯರ್‌ ಲೀಗ್ ನಲ್ಲಿ ಉರುವಲ್ ಚಾಲೆಂಜರ್ಸ , ಪನೀರ್ ರೋಯಲ್ಸ್ , ಬಿರಿಯಾನಿ ಸ್ಟೈಕರ್ಸ್, ಟಿಕ್ಕ ನೈಟ್ ರೈಡರ್ಸ್, ಗೀ ರೋಸ್ಟ್ ಸೂಪರ್ ಕಿಂಗ್, ಅಂಜಲ್ ಕ್ಯಾಪಿಟಲ್ಸ್ ಸೇರಿಂದಂತೆ ಆರು ತಂಡಗಳು ಲೀಗ್…

Read More

ಬಂಟ್ವಾಳ :ಬಾಲ್ಯದಿಂದಲೇ ಮಕ್ಕಳಿಗೆ ಚೆಸ್ ಕ್ರೀಡೆ ಬಗ್ಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದಾಗ ಅವರ ಮನಸ್ಸು ಚುರುಕುಗೊಳ್ಳುತ್ತದೆ ಎಂದು ರೋಟರಿ ಜಿಲ್ಲಾ ವಾರ್ಷಿಕ ನಿಧಿ ಚೆರ್ಮನ್ ಸೂರ್ಯ ನಾರಾಯಣ ಕುಕ್ಕಾಡಿ ಹೇಳಿದ್ದಾರೆ. ಇಲ್ಲಿನ ಬಿ. ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಮಂಗಳೂರು ಚೆಸ್ ಮಾಸ್ಟರ್ ಸಂಸ್ಥೆ ವತಿಯಿಂದ ಬಿ. ಸಿ. ರೋಡು ಸಿಟಿ ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ರಾಪಿಡ್ ಚೆಸ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮೆಲ್ಕಾರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್,  ಪಿಂಗಾರ ಕೃಷಿ ಉತ್ಪಾದಕ ಸಂಸ್ಥೆ ನಿರ್ದೇಶಕಿ ಸಾಯಿಗೀತಾ ಅಳಿಕೆ ಶುಭ ಹಾರೈಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,  ಬಿ. ಸಿ. ರೋಡು ಸಿಟಿ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಕೆ. ಸತೀಶ್ ಕುಮಾರ್,  ಕಾರ್ಯದರ್ಶಿ ಪೃಥ್ವಿರಾಜ್, ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ…

Read More

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ 12ನೇ ವರ್ಷದ ವಾರ್ಷಿಕೋತ್ಸವ ಕಿಡ್ ಝೋನ್ ವೈಭವ 2026 ಶಾಲಾ ವಠಾರ ದಲ್ಲಿ ನಡೆಯಿತು. ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿ ಯಾಗಿ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಕಾರ್ಯದರ್ಶಿ ಮಹಮ್ಮದ್ ಯಾಸೀರ್, ಶಾಲೆಯ ಹಿರಿಯ ವಿದ್ಯಾರ್ಥಿ ಸ್ಪಂದನ ಎಸ್ ಪೂಜಾರಿ, ನಾರಾಯಣ ಹೆಗ್ಡೆ ಬಿ ಸಿ ರೋಡ್, ಬೂಡ ಅಧ್ಯಕ್ಷ ಬೇಬಿ ಕುಂದರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ, ಆಡಳಿತ ಮಂಡಳಿ ಸದಸ್ಯ ರಾಜೇಶ್ ಅಮೀನ್ ಉಪಸ್ಥಿತರಿದ್ದರು. ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಶಾಲಾ ಸಂಚಾಲಕ ಐತಪ್ಪ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಪೂರ್ಣಿಮಾ ವರದಿ ವಾಚಿಸಿದರು. ಆಡಳಿತ ಮಂಡಳಿಯ ಸದಸ್ಯೆ ಆರತಿ ಅಮೀನ್ ವಂದಿಸಿ, ಆಡಳಿತ ಮಂಡಳಿ ಸದಸ್ಯ ಅಶ್ರಿತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ…

Read More

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ನೇತ್ರಾವತಿ ನದಿ ಕಿನಾರೆಯಲ್ಲಿ ಅನುಷ್ಠಾನಗೊಂಡಿರುವ ಏತನೀರಾವರಿ ಯೋಜನೆಯ ಮೂಲಕ ಪ್ರಸ್ತುತ ಸೀಮಿತ ಪ್ರದೇಶಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು ಇದನ್ನು ಸ್ಥಳೀಯ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಹೈ ಸ್ಫೀಡ್ ಪಂಪ್ ಅಳವಡಿಕೆ ಹಾಗೂ ಹೊಸ ಪೈಪ್ ಲೈನ್ ಅಳವಡಿಸುವಂತೆ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ವತಿಯಿಂದ‌ ಮಾಜಿ ಸಚಿವ ಬಿ. ರಮಾನಾಥ ರೈಯವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಮಡಿವಾಳಪಡ್ಪು ಕೂಸನಕಟ್ಟೆಯ ಪಂಪ್ ಹೌಸ್ ಬಳಿ ನಡೆದ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ಸಭೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ಪಾಲ್ಗೊಂಡಿದ್ದು ಸಂಘದ ಅಧ್ಯಕ್ಷ ಮಹೇಶ್ ನಾಯಕ್ ಸ್ವಾಗತಿಸಿ, ವಿಷಯ ಪ್ರಸ್ತಾಪಿಸಿದರು. ಸಂಘದ ಉಪಾಧ್ಯಕ್ಷ ಅಣ್ಣಪ್ಪಯ್ಯ ಪ್ರಸ್ತಾವಿಸಿ ತಮ್ಮ ಬೇಡಿಕೆಯ ಉದ್ದೇಶವನ್ನು ತಿಳಿಸಿದರು. ಈ ಸಂದರ್ಭ ಸ್ಥಳೀಯ ಕೃಷಿಕರ ಬೇಡಿಕೆಗೆ ಸ್ಪಂದಿಸಿದ ಬಿ. ರಮಾನಾಥ ರೈ ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿ ಈ ಬಗ್ಗೆ ಕ್ರಿಯಾ ಯೋಜನೆ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 134ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ಸೇವಾಂಜಲಿ ಸಂಸ್ಥೆ ಅವಶ್ಯಕತೆಗನುಗುಣವಾಗಿ ರಕ್ತದಾನ ಶಿಬಿರವನ್ನು ಸಂಘಟಿಸುತ್ತಿದ್ದು ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು. ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು ರಕ್ತಕ್ಕೆ ಪರ್ಯಯವಾದ ವ್ಯವಸ್ಥೆ ಬೇರೊಂದಿಲ್ಲ.‌ ಬೇರೆಯವರು ದಾನ ಮಾಡಿದರಷ್ಟೇ ಅಗತ್ಯವುಳ್ಳವರು ರಕ್ತ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಯರಾಂ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೇವಾಂಜಲಿ ಕೇವಲವೊಂದು ಸಂಸ್ಥೆಯಲ್ಲ, ಅದೊಂದು ಭರವಸೆ. ಕಲೆ, ಸಾಂಸ್ಕೃತಿಕ, ಆರೋಗ್ಯ, ಶಿಕ್ಷಣ, ರಕ್ತದಾನ ಮೊದಲಾದ ಕ್ಷೇತ್ರಗಳಲ್ಲಿ ಸೇವೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರನ್ನು…

Read More

ಬಂಟ್ವಾಳ: ಬಿ‌.ಸಿ.ರೋಡಿನಲ್ಲಿ ಕಚೇರಿ ಹಿಂದಿರುವ ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸೇವಾಂಜಲಿ ಪ್ರತಿಷ್ಠಾನ ಹಾಗೂ ಜೆಸಿಐ ಬಂಟ್ವಾಳದ ಸಹಯೋಗದೊಂದಿಗೆ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಬಿ.ಸಿ.ರೋಡಿನ ಆರ್. ಡಿ. ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಅತೀ ವಂದನೀಯ ಲಾನ್ಸಿ ಡಿಸೋಜಾ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದೈಜಿವರ್ಲ್ಡ್ ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ಅವರು ಮಾತನಾಡಿ ಜೀವನದಲ್ಲಿ ಎಷ್ಟೇ ಹಣ ಗಳಿಸಿದರೂ ಇನ್ನೊಬ್ಬರ ಭಾವನೆ,‌ ಕಾಳಜಿಯನ್ನು ಅರ್ಥಮಾಡಿಕೊಳ್ಳದಿದ್ದರೆ ಆತನ ಬದುಕು ಸಾರ್ಥಕವಾಗುವುದಿಲ್ಲ. ಇನ್ನೊಬ್ಬರ ಮನಸ್ಸಿಗೆ ಖುಷಿ ನೀಡುವುದೂ ಕೂಡ ಒಂದು ರೀತಿಯ ಚ್ಯಾರಿಟಿ ಎಂದು ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದ ಋಣ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಪ್ರಶಾಂತ್…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 133ನೇ ರಕ್ತದಾನ ಶಿಬಿರ ಜ.18ರಂದು ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶಿಬಿರ ಉದ್ಘಾಟಿಸುವರು.‌ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಯರಾಂ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More