
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶ್ರಯದಲ್ಲಿ ಅಭಿಮಾನಿಗಳಿಂದ ಪರಿಸರವಾದಿ, ಸ್ವಚ್ಚತಾ ರಾಯಭಾರಿ ಹಿರಿಯರಾದ ಎ. ದಾಮೋದರ ಅವರ ಜನ್ಮದಿನದ ಸಂಭ್ರಮ ದಾಮೋದರ ಸತಾಭಿಷೇಕ ಕಾರ್ಯಕ್ರಮ ಸಂಚಯಗಿರಿಯ ಡಾ. ಎನ್. ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ನಡೆಯಿತು.
ದೀಪಿಕಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ವಾರ್ ಅಭಿನಂದನಾ ಭಾಷಣ ಮಾಡಿ ಕೈಕಂಬ ಜನರಿಗೆ ದಿಕ್ಕುಗಳನ್ನು ಸೂಚಿಸುತ್ತದೆ. ಆದರೆ ಇಂತಹ ಸರಿಯಾದ ಕೆಲಸಗಳನ್ನು ಮಾಡಿ ಎನ್ನುವ ದಿಕ್ಕನ್ನು ಸೂಚಿಸುವ ದಿಕ್ಸೂಚಿಯಾಗಿದ್ದವರು ದಾಮೋದರ್ ಎಂದು ತಿಳಿಸಿದರು.
ಬಳಿಕ ದಾಮೋದರ್ ಅವರನ್ನು ಅಭಿಮಾನಿಗಳ ವತಿಯಿಂದ ಗೌರವಿಸಲಾಯಿತು.

ಹಿರಿಯ ಆರೋಗ್ಯ ಸಹಾಯಕ ರತ್ನಪ್ರಸಾದ್ ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪರಿಸರವನ್ನು ಸ್ಬಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಯುವ ಸಮುದಾಯಕ್ಕೆ ಮಾದರಿ ಜೀವನ ನಡೆಸಿದವರು ದಾಮೋದರ್. ನಮಗೂ ಅವರ ಆದರ್ಶ ಪ್ರೇರಣೆಯಾಗಿದೆ ಎಂದರು.
ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ದಾಮೋದರ್ ಅವರು ಆರೋಗ್ಯಯುತಾಗಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದರು.
ರಾಣಿ ಅಬ್ಬಕ್ಕತುಳುವ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಹಿರಿಯರು ಅನುಭವದ ನಿಧಿ. ದಾಮೋದರ ಅವರ ಮಾತನಾಡುತ್ತೊದ್ದಂತೆಯೇ ಅವರ ಬಾಲ್ಯದ ನೆನೆಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ. ಎಂದರು
ವೇದಿಕೆಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ನರಸಿಂಹ ರಾಜ ಹೊಳ್ಳ, ಕಾರ್ಯದರ್ಶಿ ಡಾ.ಹರೀಶ್ ಶೆಣೈ, ಉಪಾಧ್ಯಕ್ಷೆ ತಾಯಮ್ಮಉಪಸ್ಥಿತರಿದ್ದರು.


ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿದರು, ಸತೀಶ್ ಬಂಗೇರ ವಂದಿಸಿದರು, ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕಿಂತ ಪೂರ್ವಭಾವಿಯಾಗಿ ದಿಕ್ಸೂಚಿ ಕಟ್ಟೆಯನ್ನು ನಾಗರಿಕ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ನರಸಿಂಹ ರಾಜ ಹೊಳ್ಳ ಉದ್ಘಾಟಿಸಿದರು.
Advertisement







