
ಬಂಟ್ವಾಳ : ಮೂಡನಡುಗೋಡು ಕಾರ್ಯಕ್ಷೇತ್ರದ ನವ ದೀಪ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಭಾನುವಾರ ನಡೆಯಿತು. ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಠಲ ಪೂಜಾರಿ, ಪ್ರಮುಖರಾದ ಧರ್ಣಪ್ಪ, ವಲಯದ ಮೇಲ್ವಿಚಾರಕ ರಾಜೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಪ್ರಪ್ಪುಲ್ಲ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಹಾಗೂ ಕೇಂದ್ರದ ಸದಸ್ಯರು ಪೌಷ್ಟಿಕ ಆಹಾರವನ್ನು ಸಿದ್ಧಪಡಿಸಿದ್ದರು.

Advertisement







