ಬಂಟ್ವಾಳ: ಕೆಲಿಂಜದ ಕಲ್ಮಲೆಯ ರಕ್ಷಿತಾ ಅರಣ್ಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಅರಣ್ಯದಲ್ಲಿ ವ್ಯಾಪಿಸಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣಗೊಂಡಿತು. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ…

ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್ ಶೆಟ್ಟಿ, ಸಂದೀಪ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿಗಳಾದ ಪ್ರೀತಮ್ ಎಸ್ ಮತ್ತು ರಂಜಿತಾ. ಗಸ್ತು ಅರಣ್ಯ ಪಾಲಕರದ ದಯಾನಂದ ಎನ್. ಶೋಭಿತ್, ಅನಿತಾ, ಹಾಗೂ ಕಲ್ಮಲೆ ಗ್ರಾಮಸ್ಥರು ಬೆಂಕಿ ನಂದಿಸಲು ಸಹಕರಿಸಿದರು.




