ಬಂಟ್ವಾಳ: ಮುಯ್ಹುದ್ದಿನ್ ಜುಮ್ಮಾ ಮಸೀದಿ ಮಂಚಿ ಕುಕ್ಕಾಜೆಗೆ ಹೈಕೋರ್ಟ್ ಆದೇಶದಂತೆ ಚುನಾವಣೆಯ ಉಸ್ತುವಾರಿ ಹಾಗೂ ಆಡಳಿತಾಧಿಕಾರಿಗಳಾಗಿ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ನೇಮಕಾತಿಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಜಮಾತಿನವರ ಉಪಸ್ಥಿತಿ ಯಲ್ಲಿ ಬುಧವಾರ ಉಳ್ಳಾಲ ತಾಲೂಕು ಕಚೇರಿ ಸಿಬ್ಬಂದಿಯಾಗಿರುವ ಮೊಹಮ್ಮದ್ ರಫೀಕ್ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮೊಹಮ್ಮದ್ ರಫೀಕ್ ರವರು ಜಮಾತಿನ ಹಿತದೃಷ್ಟಿಯಿಂದ ಎಲ್ಲರ ಸಹಕಾರ ಕೋರಿದರು. ಮಸೀದಿಯ ಖತೀಬ್ ಮೊಹಮ್ಮದಲಿ ಮುಸ್ಲಿಯಾರ್ ದುಆಗೈದು ಮಾರ್ಗದರ್ಶನ ಮಾಡಿದರು. ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಹರೀಶ್ ಹಾಗೂ ಸಿಬ್ಬಂದಿವರ್ಗ ಮಸೀದಿ ಪರಿಸರದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
