
ಬಂಟ್ವಾಳ: ಬಿ.ಸಿ. ರೋಡಿನ ಪೊಲೀಸ್ ಲೇನ್ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಜ.29ರಿಂದ ಆರಂಭಗೊಂಡು ಜ.31ರವರೆಗೆ ನಡೆಯಲಿದೆ.
ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅರ್ಧ ಏಕಾಹ ಭಜನಾ ಮಹೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಗುಳಿಗ ದೈವದ ವರ್ಷಾವಧಿ ಕೋಲ ಜರುಗಲಿದೆ. ಜ.29ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನಾ ಮಹೋತ್ಸವ ನಡೆಯಲಿದೆ, ಜ.30ರಂದು ಗಣಪತಿ ಹೋಮ, ನವಚಂಡಿಕಾ ಹೋಮ, ವಿಶೇಷ ನಾಗಾರಾಧನೆ, ನವಚಂಡಿಕಾ ಹೋಮದ ಪೂರ್ಣಾಹುತಿ, ಮಹಾಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5 ರಿಂದ ಭಜನಾ ಕಾರ್ಯಕ್ರಮ ರಾತ್ರಿ 7ಕ್ಕೆ ಮಹಾಪೂಜೆ ನಂತರ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಜ.31ರಂದು ರಾತ್ರಿ 7.30ಕ್ಕೆ ರಂಗ ಪೂಜೆಯೊಂದಿಗೆ ಮಹಾಪೂಜೆ ನಡೆದು ರಾತ್ರಿ 8ರಿಂದ ಗುಳಿಗ ದೈವದ ವರ್ಷಾವಧಿ ಕೋಲ ಹಾಗೂ ಹರಕೆ ಕೋಲ ಜರುಗಲಿದೆ.
