ಬಂಟ್ವಾಳ: ಪುತ್ತೂರಿನಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಂಶ್ ಎಸ್.ಎಚ್ ಕರ್ಕೆರಾ 14 ವರ್ಷಕ್ಕಿಂತ ಕೆಳಗಿನ ಮಕ್ಕಳ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾನೆ. ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ ಪರವಾಗಿ ಅಂಶ್ ಎಸ್.ಎಚ್. ಕರ್ಕೆರಾ ಸ್ಪರ್ಧಿಸಿದ್ದು ಈತ ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಹರಿಣಾಕ್ಷಿ ದಂಪತಿ ಪುತ್ರ. ಇತ್ತೀಚೆಗೆ ಬಂಟ್ವಾಳದ ಲೊರೆಟ್ಟೊ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದುಕೊಂಡಿದ್ದನು.