Author: admin

ಬಂಟ್ವಾಳ: ಜಿಲ್ಲೆಯ ಪ್ರಸಿದ್ದ ದೇವಸ್ಥಾನ ವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 108 ತೆಂಗಿನ ಕಾಯಿ ಗಣಯಾಗ ಹಾಗೂ ಮೂಡಪ್ಪ ಸೇವೆ ಮಂಗಳವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಬಂಟ್ವಾಳದ ಉದ್ಯಮಿ ನಾಗೇಶ್ ಸಾಲ್ಯಾನ್ ಹಾಗೂ ಪಲ್ಲವಿ ಎನ್. ಸಾಲ್ಯಾನ್ ಇವರು ಸೇವಾರ್ಥವಾಗಿ 108 ತೆಂಗಿನಕಾಯಿಯ ಗಣಯಾಗ, ಮೂಡಪ್ಪ ಸೇವೆ ಹಾಗೂ ರಂಗ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಶ್ರೀ ದೇವರನ್ನು ಹೂವುಗಳಿಂದ‌ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

Read More

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಬುಧವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಾಬಲೇಶ್ವರ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕ್ಷಯ ರೋಗ ಉಲ್ಭಣವಾಗುತ್ತದೆ. ಪೌಷ್ಠಿಕ ಆಹಾರಗಳು, ಧವಸ ಧಾನ್ಯಗಳನ್ನು ಸೇವೆಸುವ ಮೂಲಕ ರೋಗ ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ ಎಂದರು. ಕ್ಷಯ ಗುಣವಾಗುವ ಕಾಯಿಲೆಯಾಗಿದ್ದು ರೋಗಿಗಳು ಯಾಔಉದೇ ಆತಂಕ ಪಡದೆ ಕೋರ್ಸ್ ಮುಗಿಯುವರೆಗೆ ಪ್ರತಿದಿನ ಮಾತ್ರೆಯನ್ನು ಸೇವಿಸಬೇಕು, ಧೂಮಪಾನ, ಮಧ್ಯಪಾನದಂತಹ ವ್ಯಸನಗಳ ದಾಸರಾದಾಗ ಮಾತ್ರ ರೋಗ ಉಲ್ಭಣಿಸುತ್ತದೆ ಎಂದು ತಿಳಿಸಿದರು. ಧೂಳು ಮೊದಲಾದ ಮಾಲಿನ್ಯದಿಂದ ಕ್ಷಯ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ರೋಗ ನಿರ್ಮೂಲನೆಗಾಗಿ ಪಣ ತೊಟ್ಟಿದ್ದು ೨೦೨೫ರವೇಳೆಗೆ ದೇಶವನ್ನು ಕ್ಷಯ ಮುಕ್ತ ಭಾರತವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದೆ ಎಂದರು.ನಿವೃತ್ತ ಪ್ರಾಧ್ಯಪಕ ಪ್ರೊ. ಅನಂತ ಪದ್ಮನಾಭ…

Read More

ಬಂಟ್ವಾಳ : ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಿಸಲಾಯಿತು.ತಹಶೀಲ್ದಾರ್ ಎಸ್.ಬಿ ಕೂಡಲಗಿ ಅವರು ದೀಪ ಪ್ರಜ್ವಲಿಸಿ ಸರ್ವಧರ್ಮ ಸಮಭಾವ ಇರುವ ನಮ್ಮ ದೇಶದಲ್ಲಿ ಅಹಿಂಸೆಯ ಮೂಲಕ ಸಮನ್ವಯತೆಯಿಂದ ಬಾಳ ಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ದೀಪಕ್ ಕುಮಾರ್ ಅವರು ಮಾತನಾಡಿ ಬದುಕು, ಬದುಕಲು ಬಿಡು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತ. ಅಹಿಂಸೆಯಿಂದ ಸುಖ , ತ್ಯಾಗದಿಂದ ಶಾಂತಿ ಈ ಸಂದೇಶವು ಎಂದಿಗೂ ಸತ್ಯವಾಗಿರುತ್ತದೆ ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ವಿಜಯ ಕುಮಾರಿ ಇಂದ್ರ, ಸನ್ಮತಿ ಇಂದ್ರ, ಗೀತಾ ಜಿನಚಂದ್ರ,ಚಂದನಾ ಬ್ರಿಜೇಶ್ ಬಾಳ್ತಿಲ, ಹೇಮಂತ್ ಜೈನ್, ಜಿನೇಂದ್ರ ಜೈನ್,ಅಜಿತ್ ಕುಮಾರ್, ರಾಜೇಂದ್ರ ಜೈನ್, ಪ್ರವೀಣ್ ಕುಮಾರ್, ಸುರೇಶ್ ಜೈನ್,…

Read More

ಬಂಟ್ವಾಳ: ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 6 ಲಕ್ಷ ರೂ ವಂಚನೆ ನಡೆಸಿದ ಪ್ರಕರಣವೊಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಳ್ಳಿಗೆ ಗ್ರಾಮದ ಮಹಿಳೆಯೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಮಂಗಳೂರಿನ ಸುಧೀರ್ ರಾವ್ ಎಂಬ ವ್ಯಕ್ತಿ ಮೋಸ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.ದೂರು ನೀಡಿದ ಮಹಿಳೆಯ ಮಕ್ಕಳಿಗೆ ಬಲ್ಲೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಬಿ.ಸಿ.ರೋಡ್ ನಲ್ಲಿ 2,83,800ರೂ ನಗದು ಮತ್ತು ಗೂಗಲ್ ಪೇ ಮೂಲಕ ವಿವಿಧ ದಿನಗಳಲ್ಲಿ ಹಣವನ್ನು ತನ್ನ ಅಕೌಂಟಿಗೆ ಹಾಕಿಸಿಕೊಂಡಿದ್ದಾನೆ. ಬಳಿಕ ದೂರು ನೀಡಿದ ಮಹಿಳೆಯ ಮಕ್ಕಳನ್ನು ಮುಂಬಯಿಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ರೂ.15,600 ಹಣವನ್ನು ಪಡೆದು ಬಲ್ಲೆರಿಯಾದಲ್ಲಿ ಚಳಿಯಿರುವುದರಿಂದ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಾಸು ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ಸುಧೀರ್ ರಾವ್ ಎಂಬಾತನು ಒಟ್ಟು ರೂ.6,30,000 ಹಣವನ್ನು ಕೆಲಸ ಕೊಡಿಸುವುದಾಗಿ ಪಡೆದುಕೊಂಡು ಮೋಸ ಮಾಡಿರುವುದಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಚಿಣ್ಣರ ಚಿಲಿಪಿಲಿ ಮಕ್ಕಳ ಬೇಸಗೆ ಶಿಬಿರ ಆರಂಭಗೊಂಡಿತು.ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಕೆಲಸ ಮಾಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ಆಯೋಜನೆಯ ಉದ್ದೇಶ ವಿವರಿಸಿ, ಮೊಬೈಲ್ ನೋಡುತ್ತಲೇ ಕುಳಿತುಕೊಳ್ಳುವ ಮಕ್ಕಳು ಇಂಥ ಕಾರ್ಯಕ್ರಮಗಳಿಂದ ಹೊರಜಗತ್ತಿನ ಸಂಪರ್ಕ ಪಡೆಯಲು ಸುಲಭವಾಗುತ್ತದೆ ಎಂದರು.ಕಾರ್ಯಕ್ರಮ ಸಂಯೋಜಕಿ ದಿಶಾ ಆಚಾರ್ಯ, ಜೇಸಿ ಕಾರ್ಯದರ್ಶಿ ರಮ್ಯಾ ವಿನಾಯಕ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಬಿ. ರಾಮಚಂದ್ರ ರಾವ್ ಸ್ವಾಗತಿಸಿದರು. ಮಹೇಶ್ ಕುಲಾಲ್ ಅವರು ನೃತ್ಯ ತರಬೇತಿ ನಡೆಸಿಕೊಟ್ಟರು. ಐದು ದಿನಗಳ ಕಾರ್ಯಕ್ರಮದಲ್ಲಿ ಚಿತ್ರಕಲೆ, ಕ್ರಾಫ್ಟ್, ಕ್ಲೇ ಆರ್ಟ್ ಮತ್ತಿತರ ತರಬೇತಿ ನೀಡಲಾಗುತ್ತದೆ.

Read More

ಬಂಟ್ವಾಳ: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಇದು ದಿನದ ಇಪ್ಪತ್ತನಾಲ್ಕು ತಾಸು ಕಾರ್ಯನಿರ್ವಹಿಸುತ್ತದೆ. ಕಚೇರಿ ದೂರವಾಣಿ ಸಂಖ್ಯೆ 08255-232500 ಆಗಿದ್ದು, ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ. ಲೊರೆಟ್ಟೋ ಮಾತಾ ಚರ್ಚ್‌ನಲ್ಲಿ ಗರಿಗಳ ಭಾನುವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಲೊರೆಟ್ಟೊ ಶಾಲಾ ವಠಾರದಲ್ಲಿ ಆರಂಭಗೊಂಡ ಪ್ರಾರ್ಥನಾ ವಿಧಿಯ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಪ್ರಧಾನ ಧರ್ಮಗುರುಗಳಾಗಿ ವಂ. ಜೈಸನ್ ಮೊನಿಸ್ ರವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು. ಚರ್ಚ್ ಪಾಲನಾ ಮಂಡಳಿ ಮೇಲುಸ್ತುವಾರಿ ವಹಿಸಿತ್ತು. ಮೂರು ದಿನಗಳ ಧ್ಯಾನಕೂಟವನ್ನು ಸೋಮವಾರದಿಂದ ಬುಧವಾರ ತನಕ ಸಂಜೆ ೪ ರಿಂದ ೮ ವರೆಗೆ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನಿಯ ರೋಮನ್ ಪಿಂಟೊ ರವರು ನಡೆಸಿಕೊಡಲಿದ್ದಾರೆ.

Read More

ಬಂಟ್ವಾಳ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಜಿಲ್ಲಾ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಸುಧಾಕರ್ ಆಚಾರ್ಯ ಉದ್ಘಾಟಿಸಿದರು. ಅವರು ಮಾತನಾಡಿ ನಾವು ಶಕ್ತಿಯುತರಾದಾಗ ಸಂಘಟನೆಯು ಬಲಯುತವಾಗಿರುತ್ತದೆ. ಸಂಘಟನೆಯಲ್ಲಿ ಇರುವ ಜೊತೆಗೆ ಸಮಾಜದ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿ ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಚೇರ್‌ಮನ್ ಪುಂಡಲೀಕ ಸುವರ್ಣ ಮಾತನಾಡಿ ಎಲ್ಲಾ ವಲಯದ ಸದಸ್ಯರು ಒಗ್ಗಟ್ಟಾಗಿ ಸಂಘಟಿತರಾಗಿದ್ದಾಗ ಸಂಸ್ಥೆ ಬೆಳೆಯಲು ಸಾಧ್ಯವಿದೆ. ಬಂಟ್ವಾಳ ವಲಯ ಅತ್ಯುತ್ತಮ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದು ಮುಂದೆಯೂ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು. ಬಂಟ್ವಾಳ ವಲಯದ ಅಧ್ಯಕ್ಷ ಜಗದೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್, ಬಂಟ್ವಾಳ ವಲಯದ ನಿಕಟಪೂರ್ವಾಧ್ಯಕ್ಷ ಅಣ್ಣು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಬೆಂಕಿ ಅವಘಡಕ್ಕೊಳಕ್ಕಾಗಿ ನಷ್ಟಕ್ಕೀಡಾದ ಕಿರಣ್ ರಾಜ್ ಅವರಿಗೆ ಸಹಾಯಧನ…

Read More

ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 11ನೇ ಸಾಲೆತ್ತೂರು ಶಾಖೆ ಸಾಲೆತ್ತೂರಿನ ರಥನ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಶುಭಾರಂಭಗೊಂಡಿತು.ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮೂರ್ತೆದಾರಿಕೆ ಕಡಿಮೆಯಾಗುತ್ತ ಬರುತ್ತಿದ್ದಂತೆಯೇ ಮೂರ್ತೆದಾರರ ಸಹಕಾರಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಪರಿಣಾಮ ಇಂದು ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದಂತಹ ಸಂಸ್ಥೆಗಳು ಉತ್ತಮ ಅರ್ಥಿಕ ಸಹಕಾರಿ ಸಂಘಗಳಾಗಿ ಮೂಡಿ ಬರಲು ಸಾಧ್ಯವಾಘಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆಯಿಲ್ಲದ ರೀತಿಯಲ್ಲಿ, ಪೈಪೋಟಿಯಲ್ಲಿ ಸಹಕಾರಿ ಸಂಘಗಳು ಸೇವೆ ನೀಡುತ್ತಿವೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಿಬ್ಬಂದಿಗಳ ಭಾಷಾ ಸಮಸ್ಯೆ, ನಿಯಮಿತ ಸಮಯದ ಸೇವೆಯಿಂದಾಗಿ ಇಂದು ಗ್ರಾಹಕರು ಸಹಕಾರಿ ಸಂಘಗಳತ್ತ ಮುಖ ಮಾಡಿದ್ದಾರೆ ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ೩೦ಕ್ಕಿಂತಲೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿ ಮಹಿಳಾ ಸ್ವಾವಲಂಬನೆಗೆ ಶಕ್ತಿ ತುಂಬಿದೆ, ೨೫ ಶಾಖೆಗಳನ್ನು ಹೊಂದುವ ಹಾಗೂ ಸ್ವಂತ ಕಟ್ಟಡ ನಿರ್ಮಾಣದ ಕನಸು…

Read More

ಬಂಟ್ವಾಳ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡಿದ್ದು ತಾಲೂಕಿನಲ್ಲಿ ಮೊದಲ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿ ನೇರವೇರಿದೆ. ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಶಿಕ್ಷಣ ವ್ಯವಸ್ಥೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು ಯಾವುದೇ ರೀತಿಯ ಅಡತಡೆ, ತೊಂದರೆಗಳಿಲ್ಲದೆ ಪರೀಕ್ಷೆ ಸಾಂಗವಾಗಿ ನಡೆದಿದೆ. 128 ಪುನರಾವರ್ತಿತ ವಿದ್ಯಾರ್ಥಿಗಳೂ ಸೇರಿದಂತೆ ತಾಲೂಕಿನಲ್ಲಿ 5494 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ 5453 ವಿದ್ಯಾರ್ಥಿಗಳು ಹಾಜರಾಗಿ ಮೊದಲ ದಿನದ ಪರೀಕ್ಷೆಗೆ 41 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. —

Read More