Author: admin

ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಎಲ್ಲರೂ ಖಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ನೀತಿ ಸಂಹಿತೆಯನ್ನು ಪಾಲಿಸಬೇಕು. ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ೨೦೫-ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ನಿಯುಕ್ತಿಗೊಂಡಿರುವ ಚುನಾವಣಾಧಿಕಾರಿ ಅಭಿದ್ ಗಡ್ಯಾಲ್ ಹೇಳಿದರು.ಬಂಟ್ವಾಳ ತಾಲೂಕು ಆಡಳಿತ ಸೌಧದ ಚುನಾವನಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೨೨,೯೦೧ ಮತದಾರರಿದ್ದು ಈ ಪೈಕಿ ೧,೦೯,೭೧೫ ಪುರುಷ ಹಾಗೂ ೧,೧೩,೧೮೬ ಮಹಿಳಾ ಮತದಾರರಿದ್ದಾರೆ. ಇಷ್ಟು ಮತದಾರರಿಗೆ ೨೪೯ ಮತಗಟ್ಟೆಗಳನ್ನು ಸಿದ್ದಮಾಡಿಕೊಂಡಿದ್ದು ಈ ಪೈಕಿ ೨೧೩ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದ್ದು ೩೬ ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದ್ದು ಅಧಿಕಾರಿಗಳ ತಂಡವನ್ನು ರಚಿಸಿಕೊಳ್ಳಲಾಗಿದೆ, ರಾಜಕೀಯ ಸಭೆಗಳನ್ನು ನಡೆಸಲು ಕಡ್ಡಾಯವಾಗಿ ಚುನಾವಣಾಧಿಕಾರಿ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಅಂತಹ ಕಾರ್ಯಕ್ರಮಗಳಿಗೆ ಸುವಿಧಾ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುವುದು. ಮದುವೆ ಮೊದಲಾದ ಖಾಸಗಿ,…

Read More

ಸೇವಾಂಜಲಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಯಲ್ಲಿ ಪ್ರತೀ ಮಂಗಳವಾರ ಕಣ್ಣು-ದಂತ- ವೈದ್ಯಕೀಯ ಶಿಬಿರ ನಡೆಯುತ್ತಿದ್ದು 710 ನೇ ಶಿಬಿರವನ್ನು ಬಂಟ್ವಾಳ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಹರ್ಷೇಂದ್ರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ, ಮನೋಹರ ಅರ್ಕುಳ, ಪ್ರಶಾಂತ್ ಕುಮಾರ್ ತುಂಬೆ, ಉಮಾ ಚಂದ್ರಶೇಖರ್, ಬಿ.ನಾರಾಯಣ ಮೇರಮಜಲು ಮೊದಲಾದವರು ಉಪಸ್ಥಿತರಿದ್ದರು. Promotion

Read More

ಬಂಟ್ವಾಳ: ಸಜೀಪಪಡು ಗ್ರಾಮದ ಸೇನರಬೆಟ್ಟು ನಿವಾಸಿ ವಿವಾಹಿ ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಫೆಬ್ರವರಿ ೧೪ರಂದು ನಡೆದಿದ್ದು ಮಹಿಳೆಯ ಸಾವಿನ ಬಗ್ಗೆ ಆಕೆಯ ಪತಿ ಸಂಶಯ ವ್ಯಕ್ತಪಡಿಸಿ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯ ವಿರುದ್ದ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿಯ ಮೂಲಕ ಆಗ್ರಹಿಸಿದ್ದಾರೆ.ಇಲ್ಲಿನ ನಿವಾಸಿ ಸತೀಶ್ ಪಿ. ಎಂಬವರ ಪತ್ನಿ ಬೀನಾ ಸಿ. ಎಂಬವರು ಕಳೆದ ಫೆಬ್ರವರಿ ತಿಂಗಳ ೧೪ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ನಡೆದ ಸಂದರ್ಭ ಮಹಿಳೆಯ ಕಿವಿಯಲ್ಲಿ ಇಯರ್ ಪೋನ್ ಇದ್ದು ಆಕೆಯ ಮೊಬೈಲ್ ಪೋನ್ ಕಾಲಿನ ಕೆಳಗಡೆ ಬಿದ್ದಕೊಂಡಿದ್ದುದರಿಂದ ಆತ್ಮಹತ್ಯೆಯು ವ್ಯವಸ್ಥಿತ ಸಂಚು ಎಂಬ ಸಂಶಯ ವ್ಯಕ್ತವಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ. ಮೃತ ಮಹಿಳೆಯ ಪತಿಯು ಮಂಗಳೂರಿನಲ್ಲಿ ಕೆಲಸದಲ್ಲಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು, ಈ ಸಂದರ್ಭ ಅವಿವಾಹಿತ ಯುವಕನೋರ್ವನ ಪರಿಚಯವಾಗಿ ಆತನೊಂದಿಗೆ ಸಲುಗೆಯಿದ್ದ ಇದ್ದಿರುವುದು ತಿಳಿದು…

Read More

ಶ್ರೀ ಕ್ಷೇತ್ರ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಮತ್ತು ಸುತ್ತುಪೌಳಿಯ ಶಿಲಾನ್ಯಾಸ, ವಿಜ್ಞಾಪನ ಪತ್ರ ಬಿಡುಗಡೆ ಬಂಟ್ವಾಳ: ನಾವು ಮಾಡುವ ಕಾರ್ಯಗಳಿಗೆ ಯಶಸ್ಸು ಸಿಗಲು ದೇವರ ಅನುಗ್ರಹ ಬೇಕು ಅಂತೆಯೇ ದೇವಸ್ಥಾನದ ಜೀಣೋದ್ಧಾರ ಕಾರ್ಯಗಳು ನಡೆಯಲು ದೇವರ ಅನುಗ್ರಹ ಬೇಕು, ದೇವರ ಅನುಗ್ರಹದ ಜೊತೆಗೆ ಸಮಾಜದ ಎಲ್ಲರ ಕೊಡುವಿಕೆಯಲ್ಲಿ ದೇವಸ್ಥಾನ ಜೀಣೋದ್ಧಾರ ಕಾರ್ಯ ಸಾಂಗವಾಗಿ ನೆರವೇರಲಿ ಎಂದು ಉಡುಪಿ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಶ್ರೀ ಕ್ಷೇತ್ರ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಮತ್ತು ಸುತ್ತುಪೌಳಿಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಹಾಲಿಂಗೇಶ್ವರ ದೇವರು ರಾಯಿಯ ಸಂಪತ್ತು. ದೇವರು ಕೊಡುವಾಗ ಒಳ್ಳೆಯದನ್ನು ಅನುಗ್ರಹಿಸುತ್ತಾನೆ. ಕೆಟ್ಟದಕ್ಕೆ ಯಾವ ದೇವರು ಅನುಗ್ರಹಿಸುವುದಿಲ್ಲ. ಸಂಪತ್ತಿಗೆ ಹರಿವನ್ನು ಕೊಟ್ಟಾಗ ನೆಮ್ಮದಿ…

Read More

ಸರಕಾರವನ್ನು ಖಾಸಗಿ ವ್ಯಕ್ತಿಗಳು ನಿಯಂತ್ರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಅರವಿಂದ ಚೊಕ್ಕಾಡಿ ಬಂಟ್ವಾಳ: ನಮ್ಮ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಮಸ್ಯೆ ಇದೆ. ಅಭಿವೃದ್ದಿಯ ಬಗ್ಗೆ ನಮ್ಮ ಗ್ರಹಿಕೆಯಲ್ಲಿ ಸಮಸ್ಯೆ ಇದೆ, ಆರೋಗ್ಯ, ಶಿಕ್ಷಣ, ಆಹಾರ ವ್ಯವಸ್ಥೆ ಆಗದೆ ಬೇರೆ ಅಭಿವೃದ್ಧಿಗೆ ಅರ್ಥವಿಲ್ಲ ಎಂದು‌ ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.ಸಿಟಿಜನ್ಸ್ ಫಾರಮ್ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ರಾಜಕೀಯ ರಹಿತ ಜನ ಸಂವಾದದಲ್ಲಿ ಪ್ರಜಾಪ್ರಭುತ್ವದಲ್ಲಿ ಜನರ ಮತ್ತು ಜನಪ್ರತಿನಿಧಿಗಳ ಕರ್ತವ್ಯ ವಿಚಾರದ ಮಂಡಿಸಿ ಮಾತನಾಡಿದರು.ಜನರ ಒಂದು ಭಾಗವೇ ಜನಪ್ರತಿನಿಧಿಗಳು.‌ ಜನಪ್ರತಿನಿಧಿಗಳು ಜನಪರವಾಗಿರಬೇಕಾದರೆ ಜನರು ಜನಪ್ರತಿನಿಧಿಗಳ ಪರವಾಗಿರಬೇಕು.ಜನರು ಜನಪ್ರತಿನಿಧಿಗಳಲ್ಲಿ ಹಣ ಕೇಳುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ ಅವರು ಸರಕಾರವನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ನಿಯಂತ್ರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯ ಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನಪರವಾಗಿ ಧ್ವನಿ ಎತ್ತಬಲ್ಲವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ…

Read More

https://youtu.be/rLQXdexnq10 ಮಡಿವಾಳಪಡ್ಪು ಗುಡ್ಡದಲ್ಲಿ ಬೆಂಕಿ, ಸುತ್ತಲೂ ವ್ಯಾಪಿಸಿದ ಕಪ್ಪು ಧೂಮ ಬಂಟ್ವಾಳ: ಸಜೀಪಮುನ್ನೂರು ಗ್ರಾಮದ‌ ಮಡಿವಾಳಪಡ್ಪು ಎಂಬಲ್ಲಿ ಒಣಗಿದ ಮುಳಿಹುಲ್ಲಿನ ಗುಡ್ಡದಲ್ಲಿ ಭಾನುವಾತ ಸಂಜೆ ಬೆಂಕಿ ಕಾಣಿಕೊಂಡು ಸುತ್ತಲೂ ವ್ಯಾಪಿಸಿ ಆತಂಕದ‌ ಸ್ಥಿತಿ ನಿರ್ಮಾಣಗೊಂಡಿತು. ಮಡಿವಾಳಪಡ್ಪು ನದಿ ತೀರದಲಿದ್ದು ಬೆಂಕಿಯ ಕಪ್ಪು ಹೊಗೆ ನದಿಯ ಇನ್ನೊಂದು ಪಾರ್ಶ್ವದಲ್ಲಿರುವ ಬಿ.ಸಿ.ರೋಡು, ಕೈಕುಂಜೆವರೆಗೂ ಕಾಣಿಸುತ್ತಿತ್ತು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು.‌

Read More

ಎನ್. ಕೋಟ್ಯಪ್ಪ ಸಾಲ್ಯಾನ್ ನಿಧನಬಂಟ್ವಾಳ: ಮಾರ್ನಬೈಲು ನಿವಾಸಿ ಎನ್. ಕೋಟ್ಯಪ್ಪ ಸಾಲ್ಯಾನ್(91) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗ್ರಹದಲ್ಲಿ ನಿಧನರಾದರು. ಮಾರ್ನಬೈಲು ನಾಗನವಳಚ್ಚಿಲ್‌ನ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇತ್ತೀಚೆಗೆ ನಡೆದ 50ನೇ ವರ್ಷಾಚರಣೆ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು 5ಗಂಡು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಭಾನುವಾರ ಪಾಣೆಮಂಗಳೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಕಾರ್ಯ ನಡೆಯಿತು. Promotion

Read More

ಬಂಟ್ವಾಳ: ಶಾಂತಿ ಸಾಮರಸ್ಯದ ಬಂಟ್ವಾಳ ನಿರ್ಮಾಣ ನನ್ನ ಮೊದಲ ಆದ್ಯತೆಯಾಗಿದೆ. ಶಾಸಕರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.ಅವರು ಕಾವಳಮೂಡೂರು ಗ್ರಾಮದಲ್ಲಿ ರೂ.೮.೪೦ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾರ್ಯಕರ್ತರ ಮೇಲೆ ನಡೆಯುವ ದಬ್ಬಾಳಿಕೆ, ಸುಳ್ಳು ಕೇಸು ದಾಖಲು, ದೊಂಬಿಯ ರಾಜಕಾರಣವನ್ನು ಕೊನೆಗಾಣಿಸಬೇಕು ಎಂಬ ಕನಸು, ಆಸೆಗೆ ಕ್ಷೇತ್ರದ ಜನರು ಸಹಕಾರ ನೀಡಿದರು, ಹಾಗಾಗಿ ಕಳೆದ ಐದು ವರ್ಷಗಳಿಂದ ಶಾಂತಿಯ ನವ ಬಂಟ್ವಾಳ ನಿರ್ಮಾಣವಾಯಿತು ಎಂದರು.ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಿದ ಆತ್ಮ ತೃಪ್ತಿ ಇದೆ ಎಂದ ಅವರು ಜಗತ್ತು ಮೆಚ್ಚಿದ ನಾಯಕನ ಜೊತೆಗೆ ನಾವು ಇದ್ದೇವೆ ಎಂಬುದೇ ಖುಷಿಯ ವಿಚಾರ. ವೈಯಕ್ತಿಕ ವಿಚಾರದಲ್ಲಿ ನಾನು ಈವರೆಗೆ ರಾಜಕೀಯ ಮಾಡಿಲ್ಲ. ಪಕ್ಷದ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಆದರೆ ಕಳೆದ ಐದು ವರ್ಷಗಳಲ್ಲಿ ಜನತೆ ನೀಡಿದ ಪ್ರೀತಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು.…

Read More

ಬಂಟ್ವಾಳ: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿದೆ. ಇತ್ತ ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ದ.ಕ. ಜಿಲ್ಲಾಡಳಿತವೂ ಕಾಯೋನ್ಮುಖವಾಗಿದ್ದು ಆಯ್ದ ಮತಗಟ್ಟೆಗಳಲ್ಲಿ(ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೊಸ ಪ್ರಯತ್ನ ನಡೆಸಿದೆ. ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ, ಕಂಬಳ ಸೇರಿದಂತೆ ಪರಂಪರೆ ಮತ್ತು ಸಂಸ್ಕೃತಿ, ಗೋಗ್ರೀನ್, ನೀಲ ತರಂಗ, ಯುವ, ಸಖಿ, ವಿಕಲಚೇತನ ಈ ಎಂಟು ಪರಿಕಲ್ಪನೆಯಡಿ ಮತಗಟ್ಟೆ ಕೇಂದ್ರಳಾಗಿರುವ ಶಾಲೆಗಳನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಮತಗಟ್ಟೆಗಳನ್ನು ಚಿತ್ರಗಳಿಂದ ಅಲಂಕರಿಸುವ ಯೋಜನೆ ರೂಪಿಸಿರುವುದಾಗಿ ದ.ಕ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ಡಾ. ಕುಮಾರ್ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ 13 ಶಾಲೆಗಳು:ಬಂಟ್ವಾಳ ತಾಲೂಕಿನ 13 ಶಾಲೆಗಳಲ್ಲಿನ ಮತಗಟ್ಟೆಗಳಲ್ಲಿ ಬಣ್ಣದ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಿಂದ ಪಡಿಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ ಕೆದ್ದಳಿಕ ಸ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ…

Read More

ಕೊಲೆಗಡುಕರನ್ನು ವೈಭವೀಕರಿಸುವವರಿಂದ ನೈತಿಕತೆಯ ಪಾಠ ಅಗತ್ಯವಿಲ್ಲ: ರಮಾನಾಥ ರೈ ಬಂಟ್ವಾಳ: ನ್ಯಾಯಾಂಗ ಪ್ರಾಮಾಣಿಕವಾಗಿ ವರ್ತಿಸಿದರೆ ಬಿಜೆಪಿಯ ಶೇ.75 ಸಂಸದರು ಜೈಲಲ್ಲಿರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎಂ. ಜಿ. ಹೆಗಡೆ ಹೇಳಿದರು.ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ 14 ದಿನಗಳ ಕಾಲ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ರಾಯಿಯಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾಗಿರುವುದನ್ನಿ ಉದ್ದೇಶಿಸಿ ಮಾತನಾಡಿದ ಅವರುಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ, ಪ್ರಶ್ನೆ ಮಾಡಿದವರನ್ನು ಹೊಸಕಿ ಹಾಕುವ ಪ್ರವೃತ್ತಿ ಬಿಜೆಪಿಯಿಂದ ನಡೆಯುತ್ತಿದೆ ಎಂದರು. ಕೊಲೆಗಡುಕರನ್ನು ವೈಭವೀಕರಿಸುವವರಿಂದ ನೈತಿಕತೆಯ ಪಾಠ ಅಗತ್ಯವಿಲ್ಲ: ರಮಾನಾಥ ರೈ ಭಾವನಾತ್ಮಕ ವಾಗಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿತ್ತು. ಈಗ ಅದೇ ಹಿನ್ನಡೆಯಾಗುತ್ತಿದೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ ಎಂದರು. ಬಿಜೆಪಿಗೆ ಅಭಿವೃದ್ಧಿಯ ಕತೆ ಬೇಡ. ಇಡಿ, ಸಿಡಿ, ಬೀಡಿ ಸೂತ್ರದಲ್ಲಿ ಬಿಜೆಪಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ ಅವರು…

Read More