ಬಂಟ್ವಾಳ : ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಇರ್ವತ್ತೂರು ಪದವು ಇದರ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವು ಮಾರ್ಚ್ 11 ರಂದು ಮಗ್ರಿಬ್ ಬಳಿಕ ಇಲ್ಲಿನ ತಾಜುಲ್ ಉಲಮಾ-ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಮಸೀದಿ ಅಧ್ಯಕ್ಷ ಎಸ್.ಪಿ. ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಉಮರ್ ಮದನಿ ಉದ್ಘಾಟಿಸುವರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಸದಸ್ಯರಾದ ಹಂಝ ಬಸ್ತಿಕೋಡಿ, ಇಬ್ರಾಹಿಂ ಕೈಲಾರ್, ಪ್ರಮುಖರಾದ ರಫೀಕ್ ಮದನಿ, ಸಿದ್ದೀಕ್ ಸಖಾಫಿ, ಹಾಜಿ ಯೂಸುಫ್ ಮೂರ್ಜೆ, ಪಿ ಕೆ ಇದ್ದಿನಬ್ಬ ಇರ್ವತ್ತೂರುಪದವು, ಅಬ್ದುಲ್ ಲತೀಫ್ ಕಲಾಬಾಗಿಲು, ಅಬೂಬಕ್ಕರ್ ಟಿ.ಎಸ್.ಎನ್, ಸಾಗರ್ ಮುಹಮ್ಮದ್ ಮದ್ದಡ್ಕ, ರಹ್ಮತುಲ್ಲಾ ಸಾಹೇಬ್, ಅಬ್ದುಲ್ ರಝಾಕ್ ಮಾವಿನಕಟ್ಟೆ, ಅಬ್ದುಲ್ ರಶೀದ್ ನೇರಳಕಟ್ಟೆ, ಅಬ್ದುಲ್ ನಝೀರ್ ಸಾಹೇಬ್, ಮೂಸಾ ನೈನಾಡ್, ಪಿ.ಎಚ್. ಇಸ್ಮಾಯಿಲ್ ಝಕೀರ್, ಶೇಖ್ ರಹ್ಮತುಲ್ಲಾ ಕಲಾಬಾಗಿಲು, ಮೊಯಿದಿನ್ ಕಟ್ಟದಪಡ್ಪು, ಮುಹಮ್ಮದ್ ರಫೀಕ್, ಮುಹಮ್ಮದ್ ಝಾಹಿದ್, ಮುಹಮ್ಮದ್ ಶರೀಫ್, ಶಹೀದ್ ಯೂಸುಫ್, ಮುಹಮ್ಮದ್ ವಸೀಂ, ಅಬ್ದುಲ್ ಖಾದರ್ ಮಾವಿನಕಟ್ಟೆ ಮೊದಲಾದವರು ಭಾಗವಹಿಸಲಿದ್ದಾರೆ.
ಮಾರ್ಚ್ 12 ರಂದು 17ನೇ ಸ್ವಲಾತ್ ವಾರ್ಷಿಕ, ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು, ಬೆಳ್ತಂಗಡಿ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ಬಾಅಲವಿ ತಂಙಳ್ ನೇತೃತ್ವ ವಹಿಸಲಿದ್ದಾರೆ. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಉದ್ಘಾಟಿಸುವರು.
ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಸುರೂರೆ ಮದೀನಾ ಫರಂಗಿಪೇಟೆ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ಆಲಾಪನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.