ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 121ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಉದ್ಘಾಟಿಸಿದರು. ಅವರು ಮಾತನಾಡಿ ದೇವರ ಈ ಸಾಮ್ರಾಜ್ಯದಲ್ಲಿ ದೀನ, ದುರ್ಬಲರ ಸೇವೆ ಮಾಡುವುದೇ ನಾವು ದೇವರಿಗೆ ಸಲ್ಲಿಸುವ ತೆರಿಗೆಯಾಗಿದೆ. ಸೇವಾಂಜಲಿ ಸಂಸ್ಥೆ ಈ ಭಾಗದಲ್ಲಿ ಮುಂಚೂಣಿಯಲ್ಲಿ ನಿಂತು ಜನರ ಪರಮೋಚ್ಛ ಸೇವೆ ಮಾಡುತ್ತಿದೆ ಎಂದು ತಿಳಿಸಿದರು. ನಿರಂತರ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಪ್ರೇರೆಪಣೆ ನೀಡುವ ಕಾರ್ಯ ಕೃಷ್ಣ ಕುಮಾರ್ ಪೂಂಜ ಅವರ ಮೂಲಕ ನಡೆಯುತ್ತಿದೆ, ಇಂದು ಹೊಸ ಆವಿಷ್ಕಾರದ ಮೂಲಕ ಒಂದು ಯುನಿಟ್ ರಕ್ತದಾನ ಮಾಡುವುದರಿಂದ 4 ಮಂದಿಯ ಜೀವ ಉಳಿಸಬಹುದಾಗಿದೆ ಎಂದರು.
ಮೊಡಮಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದಾನ ಶಿಬಿರ ಸಂಘಟಿಸುವುದು ಕಷ್ಟದ ಕೆಲಸ. ಅಂತಹ ಕಾರ್ಯವನ್ನು ನಿರಾಯಸವಾಗಿ ಸೇವಾಂಜಲಿ ಸಂಸ್ಥೆ ಮಾಡಿಕೊಂಡು ಬರುತ್ತಿದೆ ಎಂದರು.
ಕೆ.ಎಂ.ಸಿ ಬ್ಲಡ್ ಬ್ಯಾಂಕ್ ನ ಡಾ. ಅಕ್ಷಯ ರಕ್ತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ
ಪ್ರವೀಣ್ ಕಬೇಲ, ಸುಕುಮಾರ್,ಅರುಣ್ ನೀರೊಲ್ಬೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖರಾದ, ಬಿ. ನಾರಾಯಣ ಮೇರಮಜಲು, ಪದ್ಮನಾಭ ಕಿದೆಬೆಟ್ಟು, ಸಾರಮ್ಮ, ಆರ್. ಎಸ್. ಜಯ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ,, ಮೋಹನ್ ಸಾಲ್ಯಾನ್ ಬೆಂಜನಪದವು ಹಾಜರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು, ಟ್ರಸ್ಟಿ ದೇವದಾಸ್ ಕೊಡ್ಮಾಣ್ ವಂದಿಸಿದರು.