Author: admin

https://youtu.be/T1qMZBQI-Sc ಅಂಗನವಾಡಿ ಕಾರ್ಯಕರ್ತೆಯ ಅಮಾನತು ಆದೇಶ ಹಿಂಪಡೆಯಲು ವಾರದ ಗಡುವು ಬಂಟ್ವಾಳ: ಬಿಎಲ್‌ಒ ಆಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಬಂಟ್ವಾಳತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕಾರ್ಯಕರ್ತೆ ಲತಾ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶವನ್ನು ರದ್ದು ಪಡಿಸಿ ಅವರನ್ನು ಮತ್ತೆ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವಾರದ ಗಡುವು ನೀಡಿದೆ.ಅಂಗನವಾಡಿ ಕಾರ್ಯಕರ್ತೆ ಲತಾ ಅವರಿಗೆ ಉದೇಶಪೂರ್ವಕವಾಗಿ ಆಗಿರುವ ಅನ್ಯಾಯದ ವಿರುದ್ದ ರಾಜ್ಯ ಹಾಗೂ ಜಿಲ್ಲಾ ಸಂಘಟನೆಯೂ ಬೆಂಬಲ ವ್ಯಕ್ಯಪಡಿಸಿದ್ದು ಜಿಲ್ಲಾಧಿಕಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ವಾರದೊಳಗಾಗಿ ಅಮಾನತು ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ರಾಜ್ಯದಲ್ಲಿ ಬಿಎಲ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಓ ಹುದ್ದೆಗೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಸೋಮವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಅವರು ಮಾಹಿತಿ ನೀಡಿ ಲತಾ ಅವರು ಬಿಎಲ್ ಒ…

Read More

ಬಂಟ್ವಾಳ ಕ್ಷೇತ್ರವನ್ನು ಗೆಲ್ಲುವ ವಾತವರಣ ಹಾಗೂ ಅವಕಾಶ ಕಾಂಗ್ರೆಸ್‌ಗೆ ಇದೆ – ಅಶ್ವನಿ ಕುಮಾರ್ ರೈ ಬಂಟ್ವಾಳ: ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ನ್ಯಾಯವಾದಿ, ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ ಹೇಳಿದರು.ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬರುವ ಬಿಜೆಪಿಯ ಪ್ರಯತ್ನಕ್ಕೆ ತಿಲಂಜಲಿ ನೀಡ ಬೇಕು, ಜನರು ಯಾವಾಗಲೂ ಮೂರ್ಖರಾಗುವುದಿಲ್ಲ ಎಂದ ಅವರು ಕಾಂಗ್ರೆಸ್ ತಾನು ನೀಡಿದ ಭರವಸೆಯಿಂದ ಎಂದೂ ಹಿಂದೆ ಸರಿದಿಲ್ಲ, ಆರ್ಥಿಕತೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಕಾಂಗ್ರೆಸ್‌ಗೆ ತಿಳಿದಿದೆ. ಪ್ರಸ್ತುತ ಬಂಟ್ವಾಳ ಕ್ಷೇತ್ರವನ್ನು ಗೆಲ್ಲುವ ವಾತವರಣ ಹಾಗೂ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಇದ್ದು ಜನತೆ ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು. Advertisement ಮಾಜಿ ಸಚಿವ ಬಿ.ರಮಾನಾಥ ರೈ ತನ್ನನ್ನು ಆಯ್ಕೆ ಮಾಡಿದ ಮತದಾರರಿಗೋಸ್ಕರ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ.…

Read More

ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆಬಂಟ್ವಾಳ ತಾಲೂಕಿನ ಏಕೈಕ ಆಲಡೆಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದ್ದು ಊರಪರವೂರ ಭಕ್ತ ಜನತೆ ಹಾಗೂ ಕುಮಾರ-ಸಿರಿ ಆರಾಧಕರ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಯಾಗಿದೆ. 2023ರ ಎಪ್ರಿಲ್ 27ರಿಂದ 29ರ ತನಕ ಬ್ರಹ್ಮಕಲಶೋತ್ಸವವು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್‍ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದ್ದು ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ. ಅಭಿವೃದ್ಧಿ ಯೋಜನೆಗಳು: ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಶ್ರೀ ನಾಗದೇವರು, ಶ್ರೀ ರಕ್ತೇಶ್ವರೀ, ಶ್ರೀ ನಂದಿಗೋಣ, ಕುಮಾರ, ಸಿರಿ, ಅಬ್ಬಗ-ದಾರಗ ಶಕ್ತಿಗಳಿಗೆ ನೂತನ ಸಾನ್ನಿಧ್ಯಗಳ ಪುನರ್ ನಿರ್ಮಾಣ, ಸುತ್ತುಪೌಳಿ-ಮುಖಮಂಟಪ-ಪ್ರವೇಶ ಧ್ವಾರ-ಮೇಲ್ಛಾವಣಿ-ಶೌಚಾಲಯ-ಕಚೇರಿ ಮತ್ತು ಪಾಕಸಾಲೆಗಳ ನಿರ್ಮಾಣ, ಅಂಗಣಕ್ಕೆ ಗ್ರಾನೈಟ್ ಅಳವಡಿಕೆ ಸಹಿತ ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಜೀಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರಮದಾನದ ಕಾರ್‍ಯದಲ್ಲಿ ತೊಡಗಿಸಿಕೊಂಡಿದ್ದಾರೆ.…

Read More

ಬಂಟ್ವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವ ಬಂಟ್ವಾಳ: ಬಂಟ ಸಮಾಜದ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಕಾರ್ಯ ಅತಿ ಅಗತ್ಯವಾಗಿದ್ದು, ಗುತ್ತು ಮನೆತನದ ಗೌರವವನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ಇದೆ.‌ ಜಾಗತಿಕ ಬಂಟರ ಸಂಘದ ವತಿಯಿಂದ ಮನೆ ಕೊಡುವ ಕಾರ್ಯ, ಮಕ್ಕಳ ಶಿಕ್ಷಣ, ಆರೋಗ್ಯ, ವಿವಾಹಕ್ಕೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. Space for advertisement ಅವರು ತುಂಬೆ ವಳವೂರಿನ ಬಂಟವಾಳದ ಬಂಟರ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳ ಬಂಟರ ಭವನ ನಮ್ಮ ದೊಡ್ಡ ಶಕ್ತಿಯಾಗಿ ಕಂಗೊಳಿಸುತ್ತಿದೆ‌ ಎಂದರು.ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಉದ್ಯಮಿ ಏರ್ಯ ಬಾಲಕೃಷ್ಣ ಹೆಗ್ಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅರಿಯುವ ಕಾರ್ಯ ಮುಖ್ಯವಾಗಿದ್ದು, ಮಕ್ಕಳಿಗೆ ಅದನ್ನು ಕಲಿಸುವ ಕಾರ್ಯ ಅತಿ ಅಗತ್ಯ ಎಂದರು. ಬಂಟ್ವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವ ಹುಬ್ಬಳ್ಳಿ…

Read More

ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಮೇ.20 ರಿಂದ 25 ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶದ ಕಾರ್ಯಾಲಯ ಉದ್ಘಾಟನೆ ಹಾಗೂ ಬ್ರಹ್ಮಕಲಶದ ಆಮಂತ್ರಣಪತ್ರ ಬಿಡುಗಡೆ ಬಂಟ್ವಾಳ: ಭಕ್ತರಿದ್ದರೆ ಮಾತ್ರ ದೇವರು, ಗುರುಹಿರಿಯರ ಆಶೀರ್ವಾದವಿದ್ದಾಗ ಮಾತ್ರ ದೇವರು ಒಲಿಯುತ್ತಾರೆ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಮೇ.20 ರಿಂದ 25ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಟಾ ಬ್ರಹ್ಮಕಲಶದ ಪ್ರಯುಕ್ತ ಭಾನುವಾರ ದೇವಳದ ವಠಾರದಲ್ಲಿ ಕಾರ್ಯಾಲಯವನ್ನು ಉದ್ಘಾಟಿಸಿ ಬಳಿಕ ಬ್ರಹ್ಮಕಲಶದ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು. Advertisement ಮಧ್ಯಮ ವರ್ಗ ಮತ್ತು ಬಡವರೇ ಪ್ರಸಕ್ತ ದಿನಗಳಲ್ಲಿ ದೇವಸ್ಥಾನ, ದೈವಸ್ಥಾನಗಳ ಪುನರ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ತುಳುನಾಡಿನಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಗಳು ಹೆಚ್ಚು, ಹೆಚ್ಚು ಬ್ರಹ್ಮಕಲಶೋತ್ಸವಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದ ಶ್ರೀಗಳು ಭದ್ರಕಾಳಿ ದೇವಿ ಕರುಣಾಮಯಿಯಾಗಿದ್ದು ಇಲ್ಲಿನ ಬ್ರಹ್ಮಕಲಶವವು ಕೂಡ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದರು. ಪುನರ್ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಅವರು…

Read More

ಸಂಚಯಗಿರಿಯಲ್ಲಿ ಅನಾವರಣಗೊಂಡಿತು ಪುಟ್ಟ ಪ್ರತಿಭೆ-2023 ಕಾರ್ಯಕ್ರಮ, ನಾಗರಿಕ ಕ್ರಿಯಾ ಸಮಿತಿಯಿಂದ ಆಯೋಜನೆ ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಆಶ್ರಯದಲ್ಲಿ ಟೈನಿ ಟ್ಯಾಲೆಂಟ್ (ಪುಟ್ಟ ಪ್ರತಿಭೆ)- 2023 ಕಾರ್ಯಕ್ರಮ ಸಂಚಯಗಿರಿಯ ನರಸಿಂಹ ರಾಜ ಹೊಳ್ಳ ಅವರ ಮನೆಯ ಆವರಣದಲ್ಲಿ ಭಾನುವಾರ ನಡೆಯಿತು.ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭಅವರು ಮಾತನಾಡಿ ಹಿರಿಯರ ನಿರಂತರ ಪರಿಶ್ರಮದಿಂದ ಸಂಚಯಗಿರಿ ಎನ್ನುವ ಸುಂದರ ಪರಿಸರ ಮೂಡಿ ಬಂದಿದೆ. ಆರೋಗ್ಯಕರ ಆಲೋಚನೆಯಿಂಂದಾಗಿ ಸಾಮಾನ್ಯ ವ್ಯಕ್ತಿಯಾಗಿದ್ದ ಸುರೇಶ್ ಬಂಗೇರ ಅಸಾಮಾನ್ಯ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. ನಿಷ್ಕಲ್ಮಶವಾದ ಮುಗ್ದ ಮನಸ್ಸಿನ ಮಕ್ಕಳಿಗೆ ಆರೋಗ್ಯಕರ ವಾತವರಣ ನಿರ್ಮಿಸಿ ಅವರ ಪ್ರತಿಭೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಂತಹ ಈ ಕಾರ್ಯಕ್ರಮ ಅತ್ಯದ್ಭುತ ಚಿಂತನೆಯಾಗಿದೆ ಎಂದರು. ಬದುಕು ನಮ್ಮ ಕಣ್ಣ ಮುಂದೆಯೇ ಇದೆ, ಆದ್ದರಿಂದ ಕ್ರಿಯಾಶೀಲರಾಗಿ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಬದುಕು ರೂಪಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. Advertisement ಮುಖ್ಯ ಅತಿಥಿ…

Read More

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ : ಸಾಮೂಹಿಕ ವಿವಾಹ ನಿಶ್ಚಿತಾರ್ಥ ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೩೦ರಂದು ನಡೆಯಲಿರುವ ೧೫ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ವಿವಾಹದ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆಮೈದಾನದ ಸಭಾಂಗಣದಲ್ಲಿ ರವಿವಾರ ನಡೆಯಿತು. Advertisement ಲಾಲ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಕೋಶಾಽಕಾರಿ ವಸಂತ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ. ದೀನ ದಲಿತರ ಬದುಕಿಗೆ ಶಕ್ತಿ ತುಂಬುವ ಇಂತಹ ಕಾರ್ಯಕ್ರಮ ಗಳನ್ನು ನಡೆಸುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಭಿನಂದಾರ್ಹರು ಎಂದು ಹೇಳಿದರು. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ : ಸಾಮೂಹಿಕ ವಿವಾಹ ನಿಶ್ಚಿತಾರ್ಥ ಮುತ್ತೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ಅರ್ಚಕ ಹರಿಯಪ್ಪ ಅವರು ಮಾತನಾಡಿ,ಭಾರತೀಯ ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದರು.ಶ್ರೀ ಕ್ಷೇ.ಧ.ಗ್ರಾ.ಯೋಜನೆ…

Read More

ಬಂಟ್ವಾಳ: ಬೇಸಿಗೆ ಕಾಲದ ಮಹೋನ್ನತ ಮಾರಾಟದಂಗವಾಗಿ ಇಲ್ಲಿನ ಬಸ್ತಿ ಪಡ್ಪುವಿನಲ್ಲಿರುವ ಗೃಹಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಭದ್ರ ಹೋಂ ಅಪ್ಲೈಯೆನ್ಸಸ್ನಲ್ಲಿ ಹವಾನಿಯಂತ್ರಕ(ಎಸಿ), ಕೂಲರ್, ಸೀಲಿಂಗ್ ಫ್ಯಾನ್, ಟೇಬಲ್ ಫ್ಯಾನ್ ಗಳ ವಿಶೇಷ ಮಾರಾಟ ಆರಂಭ ಗೊಂಡಿದೆ.ಈ ಎಲ್ಲಾ ವಸ್ತುಗಳ ಖರೀದಿಯ ಮೇಲೆ ಆಕರ್ಷಕ ಗಿಫ್ಟ್ ಗಳು ಲಭ್ಯವಿದೆ.‌ ಗ್ರಾಹಕರಿಗೆ ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತಿನ ವ್ಯವಸ್ಥೆಯೂ ಇದೆ. ಗೃಹಪಯೋಗಿ ವಸ್ತುಗಳ ವಿಶಾಲವಾದ ಡಿಸ್ಪ್ಲೆ ಇಲ್ಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. Advertisement Advertisement

Read More

ಬಂಟ್ವಾಳ: ಸೂರಿಲ್ಲದೆ ಬಳಲುವ ಬಂಟ ಸಮುದಾಯಕ್ಕೆ ಆಸರೆಯಾಗುವಲ್ಲಿ ಇಂಟೆರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ಅವಿರತ ಶ್ರಮಿಸುತ್ತಿದೆ . ಫರಂಗಿಪೇಟೆ ವಲಯದ ಮನವಿಗೆ ಒಂದು ವರ್ಷದಲ್ಲಿ ಇನ್ನೊಂದು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.ಫರಂಗಿಪೇಟೆ ವಲಯ ಬಂಟರ ಸಂಘ ದ ಮನವಿ ಮೇರೆಗೆ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ವತಿಯಿಂದ 6 ಲಕ್ಷ ವೆಚ್ಚದ ಸದಾಶ್ರಯ ಮನೆಯನ್ನು ಕೊಟ್ಟಿಂಜ ಸುಗುಣ ಉಮೇಶ್ ಶೆಟ್ಟಿ ಯವರಿಗೆ ಹಸ್ತಾಂತರಿಸಿ ಮಾತನಾಡಿದರು. Advertisement ಈ ಸಂದರ್ಭ ದಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ ಶೆಟ್ಟಿ , ಇಂಟೆರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ ) ನ ಉಪಾಧ್ಯಕ್ಷರಾದ ಸುರೇಶ್ಚಂದ್ರ ಶೆಟ್ಟಿ , ಕಾರ್ಯದರ್ಶಿ ರಾಜ್ ಗೋಪಾಲ ರೈ , ಯುವ ವಿಭಾಗದ ಗೌರವಾಧ್ಯಕ್ಷ ರಾದ…

Read More

ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿದ್ದ 8 ನಾಮಪತ್ರಗಳ ಪೈಕಿ 2 ನಾಮಪತ್ರ ತಿರಸ್ಕೃತ ಗೊಂಡಿದೆ.ಚುನಾವಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದಿದ್ದು ಈ ಸಂದರ್ಭ ಉತ್ತಮ ಪ್ರಜಾಕೀಯ ಪಕ್ಷದ ಅನೀಶ್ ಶೆಟ್ಟಿಯವರು 10 ಸೂಚಕರ ಬದಲಾಗಿ ಕೇವಲ 7 ಸೂಚಕರನ್ನು ಮಾತ್ರ ನೀಡಿದ್ದಾರೆ, ಪಕ್ಷೇತರ ಅಭ್ಯರ್ಥಿ ಬಿ.ಟಿ.ಕುಮಾರ್ ರವರು ನಾಮಪತ್ರ ಪೂರ್ಣವಾಗಿ ತುಂಬಿಸಿಲ್ಲ, ಠೇವಣಿ ಪಾವತಿಸಿಲ್ಲ, ಸೂಚಕರನ್ನು ನೀಡಿಲ್ಲ, ನಮೂನೆ 26 ತುಂಬಿಲ್ಲದ ಕಾರಣ ಈ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದಂತೆ Advertisement ಭಾರತೀಯ ಜನತಾ ಪಾರ್ಟಿಯ ರಾಜೇಶ್ ನಾಯ್ಕ್ ಯು, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಎಂ.ಇಲಿಯಾಸ್, ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ (ಪಕ್ಷೇತರ ಅಭ್ಯರ್ಥಿ) ಅಬ್ದುಲ್ ಮಜೀದ್ ಖಾನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಮಾನಾಥ ರೈ, ಜಾತ್ಯಾತೀತ ಜನತಾ ದಳದ ಪ್ರಕಾಶ್ ರಫಾಯಲ್ ಗೋಮ್ಸ್, ಆಮ್ ಆದ್ಮಿ ಪಕ್ಷದ ಪುರುಷೋತ್ತಮ ರವರ ನಾಮಪತ್ರ ಅಂಗೀಕೃತವಾಗಿದೆ. Advertisement

Read More