
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಯಲ್ಲಿ ಪ್ರತೀ ಮಂಗಳವಾರ ಕಣ್ಣು-ದಂತ- ವೈದ್ಯಕೀಯ ಶಿಬಿರ ನಡೆಯುತ್ತಿದ್ದು 710 ನೇ ಶಿಬಿರವನ್ನು ಬಂಟ್ವಾಳ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಹರ್ಷೇಂದ್ರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ, ಮನೋಹರ ಅರ್ಕುಳ, ಪ್ರಶಾಂತ್ ಕುಮಾರ್ ತುಂಬೆ, ಉಮಾ ಚಂದ್ರಶೇಖರ್, ಬಿ.ನಾರಾಯಣ ಮೇರಮಜಲು ಮೊದಲಾದವರು ಉಪಸ್ಥಿತರಿದ್ದರು.

